ನಿರತ ಸಾಹಿತ್ಯ ಪ್ರಶಸ್ತಿ – 2020

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.14   ನಿರತ ಸಾಹಿತ್ಯ ಸಂಪದ ಕಡೆಗೋಳಿ ತುಂಬೆ ಇದರ 23ನೇ ಹುಟ್ಟು ಹಬ್ಬದ ಪ್ರಯುಕ್ತ ನಡೆದ ರಾಜ್ಯಮಟ್ಟದಲ್ಲಿ ನೀಡುವ ನಿರತ ಸಾಹಿತ್ಯ ಪ್ರಶಸ್ತಿ 2020 ಆಯ್ಕೆ ಪ್ರಕ್ರಿಯೆ ನಡೆದಿದ್ದು ಅಂತಿಮ ಸುತ್ತಿನಲ್ಲಿ ಅಬ್ದುಲ್ ಹಮೀದ್ ಪಕ್ಕಲಡ್ಕ ಇವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರು ಬರೆದಿರುವ “ಒಂಟಿ ತೆಪ್ಪ” ಸಣ್ಣ ಕಥಾ ಸಂಕಲನಕ್ಕೆ ಪ್ರಶಸ್ತಿಯು ಲಭಿಸಿದೆ.

Nk Kukke

ಸುಮಾರು 75 ವರ್ಷ ಪ್ರಾಯದ ಶ್ರೀಯುತರು ಇದೀಗಾಗಲೇ 5 ಕಥಾ ಸಂಕಲನಗಳನ್ನು ಬರೆದಿದ್ದು ಇವರು ಬರೆದಿರುವ ಕಥಾ ಸಂಕಲನಗಳಿಗೆ ಲಂಕೇಶ್ ಪ್ರಶಸ್ತಿ, ಮುಸ್ಲಿಂ ಸಾಹಿತ್ಯ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ, ಕಾವ್ಯ ಕೇದಗೆ ಪ್ರಶಸ್ತಿ, ಭಾಂಧವ್ಯ ಕಥಾ ಪುರಸ್ಕಾರ ಹಾಗೂ ಬ್ಯಾರಿ ಸಾಹಿತ್ಯ ಪುರಸ್ಕಾರ ಲಭಿಸಿರುತ್ತದೆ. ಇವರು ಅರಣ್ಯ ಇಲಾಖಾ ನಿವೃತ್ತ ಅಧೀಕ್ಷರಾಗಿರುತ್ತಾರೆ. ನಿರತದ ಈ ವರುಷದ ನಿರತ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದರೊಂದಿಗೆ ದಿನಾಂಕ 19.01.2020 ರಂದು ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ನಿರತದ ವಾರ್ಷಿಕ ಹುಟ್ಟುಹಬ್ಬದ ದಿನ ಶ್ರೀಯುತರಿಗೆ ನಿರತ ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

Also Read  ಪುತ್ತೂರು: ಕಾರಿನಲ್ಲಿ ತಲವಾರು ಪತ್ತೆ ಪ್ರಕರಣ - ನಾಲ್ವರಿಗೆ ನ್ಯಾಯಾಂಗ ಬಂಧನ

error: Content is protected !!
Scroll to Top