ಆಲಂಕಾರು ಸರಕಾರಿ ಪ್ರಾಥಮಿಕ ಶಾಲಾ ಶತಮಾನೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

(ನ್ಯೂಸ್ ಕಡಬ) newskadaba.com, ಕಡಬ, ಜ.14  ಕಡಬ ತಾಲೂಕು ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಹಾಗೂ ಶತಸಂಭ್ರಮ ಶಾಶ್ವತ ನೆನಪಿನ ಕೊಡುಗೆಗಳ ಉದ್ಟಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ|.ಡಿ.ವಿರೇಂದ್ರ ಹೆಗ್ಗಡೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು. ಫೆ.1 ಮತ್ತು ಫೆ2ರಂದು ನಡೆಯುವ ಶಾಲಾ ಶತಮಾನೋತ್ಸವ ಕಾರ್ಯಕ್ರಮವು ನಿರ್ವಿಘ್ನವಾಗಿ ನಡೆಯುವಂತೆ ಕ್ಷೇತ್ರದ ಮಂಜುನಾಥ ಸ್ವಾಮಿ ಅನುಗ್ರಹಸಲಿ ಎಂದು ಹಾರೈಸಿದರು.


ಈ ಸಂಧರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ನಿಂಗರಾಜು.ಕೆ.ಪಿ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ, ಗೌರವಾಧ್ಯಕ್ಷ ಕೆ.ವಿಠಲ್ ರೈ, ಉಪಾಧ್ಯಕ್ಷ ದಯಾನಂದ ಬಡ್ಡಮೆ, ಕೋಶಾಧಿಕಾರಿ ಮುತ್ತಪ್ಪ ಪೂಜಾರಿ ನೈಯ್ಯಲ್ಗ, ಗೌರವ ಸಲಹೆಗಾರ ದಯಾನಂದ ಆಲಡ್ಕ, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾರಾಯಣ ನಡುಮನೆ, ಧರ್ಮಯ್ಯ ಗೌಡ ಪಲ್ಲತ್ತಡ್ಕ, ಸೇಸಪ್ಪ ಪೂಜಾರಿ ನೆಕ್ಕಿಲಾಡಿ, ಜಯಂತ ಪೂಜಾರಿ ನೆಕ್ಕಿಲಾಡಿ, ಚಂದ್ರದೇವಾಡಿಗ, ರಾಧಾಕೃಷ್ಣ ಗೌಡ ನಗ್ರಿ ಮೊದಲದವರು ಉಪಸ್ಥಿತರಿದ್ದರು.

Also Read  ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಓಣಂ ಆಚರಣೆ

error: Content is protected !!
Scroll to Top