ಕೊೈಲ ಶಿರಾಡಿ ಹಾಗೂ ಪರಿವಾರ ದೈವಗಳ ನೆಮೋತ್ಸವ



(ನ್ಯೂಸ್ ಕಡಬ) newskadaba.com, ಕಡಬ, ಜ.14  ಕೊೈಲ ಗ್ರಾಮದ ಶ್ರೀ ಗ್ರಾಮ ದೈವ ಶಿರಾಡಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ನೇಮೋತ್ಸವ ನಡೆಯಿತು.





ಆಶ್ಲೇಷ ಬಲಿ, ನಾಗದೇವರಿಗೆ ಕ್ಷೀರಾಭಿಷೇಕ, ದೈವಗಳಿಗೆ ಕಲಾಶಾಭಿಷೇಕ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಕಲ್ಲುರ್ಟಿ, ಕುಪ್ಪೆ ಪಂಜುರ್ಲಿ, ಶಿರಾಡಿ, ಗುಳಿಗ ದೈವಗಳ ಭಂಡಾರ ತೆಗೆದ ನಂತರ ಅನ್ನಸಂತರ್ಪಣೆ ನೇಮೋತ್ಸವ ನಡೆಯಿತು. ಬಳಿಕ ಶಿರಾಡಿ ದೈವ ಹಾಗೂ ಗುಳಿಗ ದೈವದ ನೇಮೋತ್ಸವ ಜರಗಿತು. ಭಕ್ತಾಧಿಗಳಿಂದ ಹರಕೆ ಸಮರ್ಪಣೆಯಾದ ನಂತರ ಗಡಿ ಜಾಗಕ್ಕೆ ಪ್ರಯಾಣ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷರಾದ ಆರ್ವಾರ ಬಾಳಿಕೆ ಸಂತೋಷ್ ರೈ ಸಬಳೂರು, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಪರಮೇಶ್ವರ ನಾಯ್ಕ, ಉತ್ಸವ ಸಮಿತಿಯ ಅಧ್ಯಕ್ಷ ನಿರಂಜನ್ ನಾಯ್ಕ, ಅಭಿವೃದ್ದಿ ಸಮಿತಿಯ ಅಧ್ಯಕ್ಷ ಸುಂದರ ನಾಯ್ಕ ಚೆಕ್ಕಿತ್ತಡ್ಕ, ಉತ್ಸವ ಸಮಿತಿ ಕಾರ್ಯದರ್ಶಿ ರಂಜಿತ್ ನಾಯ್ಕ ಕೊರಂತಾಜೆ ಮೊದಲಾದವರು ಉಪಸ್ಥಿತರಿದ್ದರು.






error: Content is protected !!
Scroll to Top