ಎಸ್.ಕೆ.ಎಸ್.ಎಸ್.ಎಫ್. ಗಂಡಿಬಾಗಿಲು ಶಾಖೆ ಮಹಾಸಭೆ ➤ ಅಧ್ಯಕ್ಷ ಆಸಿಫ್, ಕಾರ್ಯದರ್ಶಿ ರಾಹಿಲ್, ಕೋಶಾಧಿಕಾರಿಯಾಗಿ ಅನ್ಸಾರ್ ಆಯ್ಕೆ

(ನ್ಯೂಸ್ ಕಡಬ) newskadaba.com, ಉಪ್ಪಿನಂಗಡಿ, ಜ.13   ಎಸ್.ಕೆ.ಎಸ್.ಎಸ್.ಎಫ್. ಗಂಡಿಬಾಗಿಲು ಶಾಖೆ ಇದರ ನೂತನ ಅಧ್ಯಕ್ಷರಾಗಿ ಜಿ. ಆಸಿಫ್, ಕಾರ್ಯದರ್ಶಿಯಾಗಿ ರಾಹಿಲ್ ಹಾಗೂ ಕೋಶಾಧಿಕಾರಿಯಾಗಿ ಅನ್ಸಾರ್ ಎಸ್.ಪಿ. ಆಯ್ಕೆಯಾಗಿದ್ದಾರೆ.


ಆತೂರು ರೇಂಜ್ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಹಾದಿ ಅನಸ್ ತಂಙಳ್ ಅಧ್ಯಕ್ಷತೆಯಲ್ಲಿ, ಎಸ್.ಕೆ.ಎಸ್.ಎಸ್.ಎಫ್. ಉಪ್ಪಿನಂಗಡಿ ವಲಯ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಆಯ್ಕೆ ಚುನಾವಣಾಧಿಕಾರಿ ಹಾರಿಸ್ ಕೌಸರಿ ಉಪಸ್ಥಿತಿಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಗಿ ಉಳಿದಂತೆ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಇಸಾಕ್ ಬೊಲುಂಬುಡ, ಸಂಘಟನಾ ಕಾರ್ಯದರ್ಶಿಯಾಗಿ ಝಿಯಾದ್ ಆಯ್ಕೆಯಾಗಿದ್ದಾರೆ.

ಉಪ ಸಮಿತಿ ಉಸ್ತುವಾರಿಗಳು:
ಅಬ್ದುಲ್ ಜಬ್ಬಾರ್ ಅರ್ಶದಿ-ಇಬಾದ್, ಶಾಕಿರ್ ಎಸ್.-ವಿಖಾಯ, ಇಸಾಕ್ ಗಂಡಿಬಾಗಿಲು-ಸರ್ಗಾಲಯಂ, ಝುಬೈರ್ ಪಿಎಸ್.-ಟ್ರೆಂಡ್, ಖಲಂದರ್ ಎಸ್.ಪಿ.-ಸಹಚಾರಿ,
ಬದ್ರುದ್ದೀನ್ ಕೆ.-ತ್ವಲಬಾ. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಹಾರಿಸ್ ಗಂಡಿಬಾಗಿಲು, ಸಿದ್ದಿಕ್ ಬೈರಕಂಡ, ನಿಝಾರ್ ಎಸ್., ಮಹಮ್ಮದ್ ಜಿ., ಅನ್ಸಾರ್, ನಿಝಾರ್ ಆಯ್ಕೆಯಾಗಿದ್ದಾರೆ.
ಕ್ಲಸ್ಟರ್ ಕೌನ್ಸಿಲರ್ಸ್:
ಅಬ್ದುಲ್ ಲತೀಫ್, ಖಲಂದರ್ ಎಸ್.ಪಿ., ನಿಝಾರ್ ಎಸ್., ಅನ್ಸಾರ್ ಎಸ್., ಝಿಯಾದ್ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ಮಸೀದಿ ಕಾರ್ಯದರ್ಶಿ ಮಹಮ್ಮದ್ ರಫೀಕ್, ಹಿಮಾಯತುಲ್ ಇಸ್ಲಾಂ ಮದ್ರಸದ ಮೂಸಾ ಮುಸ್ಲಿಯಾರ್, ಮುಅದ್ದಿಂ ರಫೀಕ್ ಮುಸ್ಲಿಯಾರ್, ಹಾರಿಸ್, ನಿರ್ಗಮನ ಅಧ್ಯಕ್ಷ ಖಲಂದರ್ ಎಸ್.ಪಿ., ಯಂಗ್‍ಮೆನ್ಸ್ ಅಧ್ಯಕ್ಷ ಅಬ್ದುಲ್ ಲತೀಫ್ ಉಪಸ್ಥಿತರಿದ್ದರು.

Also Read  ಮಿತ್ತೂರು: ಬಸ್ - ಟಿಪ್ಪರ್ ಢಿಕ್ಕಿ ➤ ಹಲವರಿಗೆ ಗಾಯ

 

error: Content is protected !!
Scroll to Top