ಕೊಣಾಜೆ ಒಕ್ಕೂಟ ಸದಸ್ಯರಿಂದ ಶ್ರಮದಾನ

(ನ್ಯೂಸ್ ಕಡಬ) newskadaba.com, ಕಡಬ, ಜ.13    ಕಡ್ಯ ಕೊಣಾಜೆ ಗ್ರಾಮದ ಕೊಣಾಜೆ ಶ್ರೀ ಉಳ್ಳಾಕ್ಲು ಮತ್ತು ಪರಿವಾರ ದೈವಗಳ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಶನಿವಾರ ಶ್ರಮದಾನ ನಡೆಸಲಾಯಿತು.


ಕೊಣಾಜೆ ಶ್ರೀ ಉಳ್ಳಾಕ್ಲು ಮತ್ತು ಪರಿವಾರ ದೈವಗಳ ದೈವಸ್ಥಾನದ ಬ್ರಹ್ಮಕಲಶೋತ್ಸವವು ಜ.29ರಿಂದ ಆರಂಭವಾಗಲಿದ್ದು, ದೈವಸ್ಥಾನದ ಕೆಲಸ ಕಾರ್ಯಗಳು ಭರದಿಂದ ನಡೆಯುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಣಾಜೆ ಒಕ್ಕೂಟದ ಸದಸ್ಯರು ಶ್ರಮದಾನದ ಮೂಲಕ ಮದ್ಯಾಹ್ನದ ವರೆಗೆ ಕೆಲಸ ನಿರ್ವಹಿಸಿದರು. ಈ ಸಂದರ್ಭದಲ್ಲಿ ಒಕ್ಕೂಟ ಅಧ್ಯಕ್ಷ ಪುಂಡರಿಕಾಕ್ಷ, ಸೇವಾಪ್ರತಿನಿಧಿ ರೂಪಾ., ಜೀರ್ಣೋದ್ಧಾರ ಸಮಿತಿಯ ತಿಮ್ಮಪ್ಪ ಗೌಡ ಬ್ರಂತೋಡು, ಬ್ರಹ್ಮಕಲಶೋತ್ಸವ ಸಮಿತಿಯ ಸುಂದರ ಗೌಡ, ಭಾಸ್ಕರ ಗೌಡ ದೊಡ್ಡಮನೆ, ಪ್ರಮುಖರಾದ ಲೋಕೇಶ್, ಸರಸ್ವತಿ, ಜಯಂತಿ, ವಿಮಲ, ಕೇಶವ, ಹೇಮಾವತಿ, ಸೀನಪ್ಪ ಗೌಡ, ಆನಂದ ಗೌಡ, ನಾಗವೇಣಿ ಸೇರಿದಂತೆ ಸ್ವಸಹಾಯ, ಪ್ರಗತಿ ಬಂಧು ತಂಡದ ಸುಮಾರು 60ಕ್ಕೂ ಅಧಿಕ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

Also Read  ಹೊಸ್ಮಠ: ಇಳಿಕೆಯಾದ ನೆರೆ ನೀರಿನ ಮಟ್ಟ ► ಸೇತುವೆಯಲ್ಲಿ ಸಂಚಾರ ಪುನರಾರಂಭ

error: Content is protected !!
Scroll to Top