ರಸ್ತೆ ಸುರಕ್ಷತಾ ಸಪ್ತಾಹ -2020 ಮತ್ತು ಹೆದ್ದಾರಿ ಗಸ್ತು ವಾಹನಗಳ ಉದ್ಘಾಟನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com, ಪುತ್ತೂರು, ಜ.11   ಪುತ್ತೂರು ಸಂಚಾರ ಠಾಣಾ ವತಿಯಿಂದ 31 ನೇ ರಸ್ತೆ ಸುರಕ್ಷತಾ ಸಪ್ತಾಹ -2020 ನೇದರ ಜಾಥಾ ಕಾರ್ಯಕ್ರಮಕ್ಕೆ ಹಾಗೂ ಹೊಸ ಹೆದ್ದಾರಿ ಗಸ್ತು ವಾಹನಗಳ ಉದ್ಘಾಟನಾ ಕಾರ್ಯಕ್ರಮ ಪುತ್ತೂರಿನ ದರ್ಬೆ ಜಂಕ್ಷನ್ ನಲ್ಲಿ ಇಂದು ನಡೆಯಿತು.

ಮಾನ್ಯ ಶಾಸಕರಾದ ಶ್ರೀ ಸಂಜೀವ ಮಠಂದೂರು , ಪುತ್ತೂರು ಇವರು ಹಸಿರು ನಿಶಾನೆ ನೀಡುವ ಮೂಲಕ ಚಾಲನೆ ನೀಡಿದ್ದು, ಕಾರ್ಯಕ್ರಮದಲ್ಲಿ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ದಿನಕರ ಶೆಟ್ಟಿ ಹಾಗೂ ಪುತ್ತೂರು ಸಂಚಾರ ಠಾಣಾ ಮತ್ತು ನಗರ ಠಾಣಾ ಅಧಿಕಾರಿ, ಸಿಬ್ಬಂದಿಗಳು, ಪಿಲೋಮಿನಾ ಕಾಲೇಜು ಮತ್ತು ವಿವೇಕಾನಂದ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು. ನಂತರ ದರ್ಬೆ ಯಿಂದ Ksrtc ಜಂಕ್ಷನ್ ವರೆಗೆ ಜಾಥಾ ನಡೆಸಿ ಸಾರ್ವಜನಿಕರಿಗೆ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ನೀಡಲಾಯಿತು.

Also Read  ಮೂಡುಬಿದಿರೆ: ಗೋಮಯದಿಂದ ಹಣತೆ ರೂಪಿಸಿದ ವಿದ್ಯಾರ್ಥಿ

error: Content is protected !!
Scroll to Top