ಕರಾವಳಿ ಉತ್ಸವದ ಮೆರವಣಿಗೆಯಲ್ಲಿ – ಸಾಂಸ್ಕೃತಿಕ ತಂಡಗಳು

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.11    2019-20 ನೇ ಸಾಲಿನ ಕರಾವಳಿ ಉತ್ಸವ ಮೆರವಣಿಗೆಯಲ್ಲಿ ಭಾಗವಹಿಸುವ ಸಾಂಸ್ಕೃತಿಕ ತಂಡಗಳ ವಿವರ ಇಂತಿವೆ:-
ಗಿರಿ-ಸಿರಿ ಜಾನಪದ ಕಲಾ ತಂಡ(ರಿ).,ಕನ್ಯಾನ, ಬಂಟ್ವಾಳ ತಂಡದಿಂದ ಕೊರಗರ ಡೋಲು-ಕೋಲು ಕುಣಿತ, ರಮೇಶ ಕನ್ಯಾನ, ಶಿವಗಿರಿ ಹೊೈಗೆಗದ್ದೆ, ಕನ್ಯಾನ ಗ್ರಾಮ, ಬಂಟ್ವಾಳ ತಂಡದಿಂದ ಕರಡಿ-ಸಿಂಹ ನೃತ್ಯ, ರಾಮನಗರ ತಂಡದಿಂದ ಪೂಜಾ ಕುಣಿತ, ಕಾರವಾರ ತಂಡದಿಂದ ಸುಗ್ಗಿ ಕುಣಿತ, ಹಾವೇರಿ ತಂಡದಿಂದ ಬೇಡರ ಕುಣಿತ, ಚಿಕ್ಕಮಂಗಳೂರು ತಂಡದಿಂದ ಮಹಿಳಾ ವೀರಗಾಸೆ, ಮಾಗಡಿ ತಂಡದಿಂದ ನಂದಿಧ್ವಜ, ಗದಗ ತಂಡದಿಂದ ಕೋಲಾಟ, ಮೈಸೂರು ತಂಡದಿಂದ ವೀರಭದ್ರ ಕುಣಿತ, ಶಿವಮೊಗ್ಗ ತಂಡದಿಂದ ಮಹಿಳಾ ಡೊಳ್ಳು, ಚಾಮರಾಜನಗರ ತಂಡದಿಂದ ಗೊರವರ ಕುಣಿತ, ತುಮಕೂರು ತಂಡದಿಂದ ಸೋಮನ ಕುಣಿತ, ಧಾರವಾಡ ತಂಡದಿಂದ ಜಗ್ಗಲಿಗೆ, ಹಾವೇರಿ ತಂಡದಿಂದ ಪುರವಂತಿಕೆ, ಶೃತಿ ಹೆಚ್, ಸಾಗರ ಇವರಿಂದ ಹೊರಜಿಲ್ಲೆಗಳ ಕಲಾವಿದರ ಸಂಘಟನೆ, ಯಶಸ್ವಿ ಕಲಾನಿಕೇತನ ಮೊಂಟೆಪದವು, ಮಂಜನಾಡಿ ಮಂಗಳೂರು ತಂಡದಿಂದ ಕಂಸಾಳೆ ಜಾನಪದ ನೃತ್ಯ, ನಲಿಪು ಜನಪದ ಕೂಟ ಒಳಪೇಟೆ, ತೊಕ್ಕೊಟ್ಟು ತಂಡದಿಂದ ಕಂಗೀಲು ಜಾನಪದ ನೃತ್ಯ, ಬಂಟಕಲ್ಲು ಉಡುಪಿ ಜಿಲ್ಲೆ ತಂಡದಿಂದ ದುರ್ಗಾ ಮಹಿಳಾ ಚೆಂಡೆ, ಬಜಪೆ (ತೆಂಕು ಯಕ್ಷಗಾನ) ಇವರಿಂದ ಶ್ರೀ ಗುರು ವಿಜಯ ವಿಠಲ ಯಕ್ಷ ಕಲಾಕೇಂದ್ರ, ಉದ್ಘೋಷ ವಾಹನ(ಮೈಕ್ ಸೇರಿ), ಬಿಸಿರೋಡ್ ಬಂಟ್ವಾಳ ಚಿಲಿಪಿಲಿ ಗೊಂಬೆ ಬಳಗದಿಂದ ಕೀಲು ಕುದುರೆ, ಕರಗ, ಬ್ಯಾಂಡ್ ಸೆಟ್, ಹಾಸ್ಯ, 20 ಬಣ್ಣದ ಕೊಡೆ,  ಪಾಣೆ ಮಂಗಳೂರು ತಂಡದಿಂದ ಹಾಸ್ಯಗಾರ ಗೊಂಬೆ ತಂಡ, ಮೂಕಾಂಬಿಕಾ ಚೆಂಡೆ ಬಳಗ ಮಂಗಳೂರು, ಮಂಗಳೂರು ದೇರೆಬೈಲು ಬಳಗದಿಂದ ಯಕ್ಷಾಭಿನಯ(ಬಡಗು), ರತ್ನಾಕರ ವೈ ಜೋಗಿ ಮತ್ತು ಬಳಗದಿಂದ ತುಳು ನಾಡಿನ ಪಂಚವಾದ್ಯ ವೈವಿಧ್ಯ, ತುಳು ಮಾತೆಯ ಪ್ರದರ್ಶನ ಟ್ಯಾಬ್ಲೂ, ಸುಳ್ಯ ರಮೇಶ್ ಮತ್ತು ಬಳಗದಿಂದ ಆಟಿ ಕಳಂಜ ಪ್ರದರ್ಶನ, ಒಪ್ಪನೇ ನೃತ್ಯ, ಮೊಹಮ್ಮದ್ ಹನೀಫ್ ಉಪ್ಪಳ ಇವರ ಸಫರ್ ದಫ್ ತಂಡ ಮೆರವಣಿಗೆಯಲ್ಲಿ  ಭಾಗವಹಿಸಿದವು.

Also Read  ಸುಳ್ಯ: ಮೂರನೇ ಕೊರೋನಾ ಸೋಂಕು ಪತ್ತೆ

Nk Kukke

 

error: Content is protected !!
Scroll to Top