ರಾಮಕುಂಜ: ವಿಶ್ವೇಶತೀರ್ಥ ಸ್ವಾಮೀಜಿಯವರ ಗುರುವಂದನ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com,  ಕಡಬ, ಜ.11    ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪರಮ ಪೂಜ್ಯ ವಿಶ್ವೇಶತೀರ್ಥ ಸ್ವಾಮೀಜಿಯವರ ಗುರುವಂದನ ಕಾರ್ಯಕ್ರಮ ನಡೆಯಿತು.

ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಪ್ರಮಖರಾದ ಆತೂರು ಲಕ್ಷ್ಮೀನಾರಾಯಣ ರಾವ್‍ರವರು ಗುರುವಂದನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿ ವಿಶ್ವೇಶತೀರ್ಥ ಸ್ವಾಮೀಜಿಯವರು ತನ್ನ ಏಳನೇ ವಯಸ್ಸಿನಲ್ಲಿ ದೀಕ್ಷೆಯನ್ನು ಪಡೆದು ರಾಷ್ಟ್ರ ಸಂತರಾಗಿ ಪೂಜ್ಯನೀಯರಾದರು. ರಾಮಕುಂಜದಲ್ಲಿ ಹುಟ್ಟಿ ರಾಮಕುಂಜದಲ್ಲಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ವಿದ್ಯಾ ಸಂಸ್ಥೆಗಳನ್ನು ಬೆಳೆಸಿ, ರಾಜ್ಯದ ಇನ್ನಿತರ ಕಡೆಗಳಲ್ಲಿ ಆರೋಗ್ಯಧಾಮ, ಅನಾಥಶ್ರಮ, ಬಡ ಮಕ್ಕಳಿಗಾಗಿ ವಿದ್ಯಾದೇಗುಲಗಳನ್ನು ಪ್ರಾರಂಭಿಸಿದರು. ದೇಶದ್ಯಾಂತ ಸಂಚಾರಿಸಿ ಹಿಂದು ಧರ್ಮದ ಸಂಸ್ಕೃತಿ ಪರಂಪರೆ, ಆಚಾರ ವಿಚಾರಗಳನ್ನು ತಿಳಿಸಿ ಭಕ್ತಿ ಮಾರ್ಗದಲ್ಲಿ ನಡೆಯುವಂತೆ ಶ್ರೀಗಳು ದೇಶಕ್ಕೆ ಮಾರ್ಗದರ್ಶನ ನೀಡಿ ಸಾಮರಸ್ಯದಿಂದ ಮೆರೆದವರು. ಪಂಚ ಪರ್ಯಾಯದಿಂದ ಶ್ರೀ ಕೃಷ್ಣ ದೇವರ ಪೂಜೆ ಮಾಡಿ ವಿಶ್ವ ವಿಖ್ಯಾತರಾಗಿ ಅಸ್ತಾಂಗತರಾದ ಪೂಜ್ಯರ ಬೃಂದಾವನ ಬೆಂಗಳೂರಿನಲ್ಲಿ ಪವಿತ್ರ ಸಾನಿಧ್ಯ ಪೀಠವಾಗಲಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಭಟ್‍ರವರು ವಿದ್ಯಾರ್ಥಿಗಳು ಹಾಗೂ ಬೋಧಕ-ಬೋಧಕೇತರ ವರ್ಗದವರು ನಾವು ಪ್ರತಿದಿನ ಗುರುಗಳ ಆಕೃತಿಯನ್ನು ಸ್ಮರಿಸಿ ಮನನ ಮಾಡುವುದರೊಂದಿಗೆ ವಿಘ್ನಗಳು ನಿವಾರಣೆಯಾಗಿ ನಮ್ಮ ನಮ್ಮ ಮನಸ್ಸಿನ ಇಚ್ಚೆ ಈಡೇರುವ ಸಲುವಾಗಿ ಶ್ರೀಗಳ ಬಗ್ಗೆ ಒಂದು ಶ್ಲೋಕವನ್ನು ಪಠಿಸುವಂತೆ ತಿಳಿಸಿದರು. ವೇದಿಕೆಯಲ್ಲಿ ಸದಾಶಿವ ಶೆಟ್ಟಿ ಮಾರಂಗ ಉಪಸ್ಥಿತರಿದ್ದರು. ಶಾಲಾ ಮುಖ್ಯ ಗುರುಗಳಾದ ಸತೀಶ್ ಭಟ್‍ರವರು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು. ಕಾಲೇಜಿನ ಬೋಧಕ-ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು.

Also Read  ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್, ಮಂಗಳೂರು ➤ ಡಿಪ್ಲೊಮಾ ಕೋರ್ಸುಗಳ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ

error: Content is protected !!
Scroll to Top