(ನ್ಯೂಸ್ ಕಡಬ) newskadaba.com, ಕಡಬ, ಜ.11 ಕಡಬ ತಾಲೂಕಿನ ಕೊೈಲ ಗ್ರಾಮದ ಬರಮೇಲು ಶ್ರೀ ಶಿರಾಡಿ ಹಾಗೂ ಸಪರಿವಾರ ದೈವಗಳ ನೇಮೋತ್ಸವ ಬುಧವಾರ ಪ್ರಾರಂಭಗೊಂಡು ಗುರುವಾರ ಮುಕ್ತಾಯಗೊಂಡಿತು.
ನೂಜಿಮಾರಿನಲ್ಲಿ ದೈವಗಳಿಗೆ ತಂಬಿಲ ನಡೆದು, ಗುರವಾರ ಬೆಳಿಗ್ಗೆ ದೈವಸ್ಥಾನದಲ್ಲಿ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ಗಣಪತಿ ಹೋಮ, ದೈವಗಳಿಗೆ ಪರ್ವ, ಮಹಾಪೂಜೆ ನಡೆಯಿತು. ಸಂಜೆ ಶ್ರೀ ಶಿರಾಡಿ, ಪಂಜುರ್ಲಿ, ಮೊಗೇರ ದೈವಗಳ ಭಂಡಾರ ತೆಗೆಯುವ ಕಾರ್ಯ ನಡೆಯಿತು. ರಾತ್ರಿ ಪಂಜುರ್ಲಿ ಹಾಗೂ ಮೊಗೇರವ ದೈವಗಳ ನೇಮೋತ್ಸವ ನಡೆಯಿತು. ಗುರುವಾರ ಬೆಳಿಗ್ಗೆ ಶ್ರೀ ಶಿರಾಡಿ ದೈವದ ನೇಮೋತ್ಸವ, ಮಧ್ಯಾಹ್ನ ಬಟ್ಟಲು ಕಾಣಿಕೆ, ಬಳಿಕ ಅನ್ನ ಸಂತರ್ಪಣೆ, ಬಿಂದಾರ್ಪಣೆ ನಡೆಯಿತು. ಸಂಜೆ ಗುಳಿಗ ದೈವದ ನುಡಿಗಟ್ಟು ನಡೆದು ವಳಕಡಮದ ಕುಮಾರಧಾರ ನದಿ ತಟದವರೆಗೆ ಊರ ಮಾರಿ ಅಟ್ಟುವ ಕ್ರಮ ನಡೆಯಿತು. ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ವೀರಪ್ಪ ದಾಸಯ್ಯ ಪಾಣಿಗ, ಪ್ರಧಾನ ಅರ್ಚಕ ವೆಂಕಟ್ರಮಣ ಕುದ್ರೆತ್ತಾಯ, ಗೌರವಾಧ್ಯಕ್ಷ ಶ್ರೀಧರ ರಾವ್, ಖಜಾಂಜಿ ರವಿಕಿರಣ್ ಕೊೈಲ, ಕಾರ್ಯದರ್ಶಿ ಉಮೇಶ್ ಗೌಡ, ಜತೆ ಕಾರ್ಯದರ್ಶಿ ಎನ್.ಮೋನಪ್ಪ ಗೌಡ, ಉಪಾಧ್ಯಕ್ಷರಾದ ಕುಶಾಲಪ್ಪ ಬರಮೇಲು, ಅಣ್ಣು ಗೌಡ ಆನೆಗುಂಡಿ, ಶೀನಪ್ಪ ಗೌಡ ವಳಕಡಮ, ಕೊೈಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಬೇಂಗದಪಡ್ಪು, ಪ್ರಮುಖರಾದ ಚಂದ್ರಶೇಖರ ಗೌಡ ಪೆರ್ಲ, ಮೋನಪ್ಪ ಗೌಡ ವೈಪಾಲ್, ಕುಂಞಣ್ಣ ಗೌಡ ಪಾಜಳಿಕೆ, ವಿನೋಧರ ಮಾಳ, ಜಗನ್ನಾಥ ಶೆಟ್ಟಿ, ಬಾಬು ಮುಗೇರ, ಆನಂದ ಗೌಡ, ಬಾಬು ಗೌಡ, ಸಂಜೀವ ಕೊನೆಮಜಲು, ಬೆಳಿಯಪ್ಪ ಮುಂಡೈಮಾರ್, ವಿಶ್ವನಾಥ್ ಭಟ್, ಸುಂದರ ಗೌಡ ಮತ್ತಿತರರು ಉಪಸ್ಥಿತರಿದ್ದರು.