ಆಲಂಕಾರು : ಶಾಲಾ ಶತಮಾನೋತ್ಸವಕ್ಕೆ ಹಿರಿಯ ವಿದ್ಯಾರ್ಥಿಗಳಿಂದ ಧನ ಸಹಾಯ

(ನ್ಯೂಸ್ ಕಡಬ) newskadaba.com,  ಕಡಬ, ಜ.11  ಶತಮಾನೋತ್ಸವ ಸಂಭ್ರಮದಲ್ಲಿರುವ ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ.1 ಮತ್ತು ಫೆ2 ರಂದು ಶಾಲಾ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ.

ಶತಮಾನೋತ್ಸವಕ್ಕಾಗಿ ಈ ಶಾಲಾ ಹಿರಿಯ ವಿದ್ಯಾರ್ಥಿಗಳಾದ ನಿವೃತ್ತ ಬಿಎಸ್‍ಎನ್‍ಎಲ್‍ನ ಲೈನ್ ಮ್ಯಾನ್ ಕೃಷ್ಣಪ್ಪ ಗೌಡ ಅರಂತಹಿತ್ಲು ಹಾಗೂ ಇವರ ಸಹೋದರ ಸುಬ್ರಹ್ಮಣ್ಯ ಪೊಲೀಸ್ ಠಾಣಾ ಎಎಸ್‍ಐ ಚಂದಪ್ಪ ಗೌಡರವರು ಜಂಟಿಯಾಗಿ ಶಾಲೆಗೆ 25 ಸಾವಿರ ಧನ ಸಹಾಯವಿತ್ತರು. ಈ ಸಂಧರ್ಭದಲ್ಲಿ ಶಾಲಾ ಮುಖ್ಯಗುರು ಕೆ.ಪಿ.ನಿಂಗರಾಜು, ಸಿಆರ್ ಪಿ  ಪ್ರದೀಪ್ ಬಾಕಿಲ ಮೊದಲಾದವರು ಉಪಸ್ಥಿತರಿದ್ದರು.

Also Read  ಪಟ್ರಮೆ: ದಾಖಲೆಯಲ್ಲಿದ್ದ ತೋಡನ್ನು ತಿರುಗಿಸಿ ಕೃಷಿಗೆ ಹಾನಿ ► ಕುಸಿಯುವ ಭೀತಿಯಲ್ಲಿ ಮನೆಯ ಕೊಟ್ಟಿಗೆ - ಕಂದಾಯ ಇಲಾಖೆಯಿಂದ ನಿರ್ಲಕ್ಷ್ಯ

Nk Kukke

error: Content is protected !!
Scroll to Top