ಉಪ್ಪಿನಂಗಡಿ : 50 ಸಾವಿರ ನಗದು ಕಳವು

(ನ್ಯೂಸ್ ಕಡಬ) newskadaba.com, ಉಪ್ಪಿನಂಗಡಿ, ಜ.10   ಮನೆಗೆ ಬೀಗ ಹಾಕಿ ಹೋದವರು ವಾಪಾಸು ಮನೆಗೆ ಬಂದು ನೋಡಿದಾಗ ಚಿನ್ನಾಭರಣಗಳು ಹಾಗೂ 50 ಸಾವಿರ ನಗದು ಕಳವಾದ ಘಟನೆ ಪುತ್ತೂರು ತಾಲೂಕು ನೆಕ್ಕಿಲಾಡಿ ಗ್ರಾಮದಲ್ಲಿ ನಡೆದಿದೆ.

ಎನ್‌ ಗೋಪಾಲ ಹೆಗ್ಡೆಯವರು 02-01-2020 ರಂದು ಬೆಳಿಗ್ಗೆ ತನ್ನ ಮನೆಗೆ ಬೀಗ ಹಾಕಿ ಹೋಗಿದ್ದು ವಾಪಾಸು ದಿನಾಂಕ:09-01-2020 ರಂದು ಮನೆಗೆ ಬಂದು ಬೀಗ ತೆಗೆದು ಒಳಪ್ರವೇಶಿಸಿ ನೋಡಿದಾಗ ಕಪಾಟಲ್ಲಿಟ್ಟಿದ್ದ 30 ಗ್ರಾಂ ಚಿನ್ನಾಭರಣಗಳನ್ನು ಹಾಗೂ ಮೂರುಬೆಳ್ಳಿಯ ಕಾಲು ಚೈನ್‌, ಬೆಳ್ಳಿಯ ಬಟ್ಟಲು, ಮತ್ತು ವಿದೇಶಿ ವಾಚುಗಳು ಹಾಗೂ 50 ಸಾವಿರ ನಗದು ಕಳವಾದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಮಂಗಳೂರು :ಶಕ್ತಿ ವಸತಿ ಶಾಲೆಯಲ್ಲಿ ಕ್ರಿಸ್‍ಮಸ್‍ಆಚರಣೆ

Nk Kukke

error: Content is protected !!