ಯೋಗ ತರಬೇತುದಾರರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.10   ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಎಲ್ಲಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ಶುಕ್ರವಾರ ಬೆಳಗ್ಗೆ 7 ರಿಂದ 8 ಗಂಟೆಯವರೆಗೆ  ಅಥವಾ ಸಂಜೆ 5 ರಿಂದ 6 ಗಂಟೆಗೆ ಜೆಪ್ಪು, ಬಂದರು, ಬಿಜೈ, ಕುಳಾಯಿ, ಪಡೀಲ್, ಎಕ್ಕೂರು, ಶಕ್ತಿನಗರ, ಕಸಬಾ ಬೇಂಗ್ರೆ, ಕೂಳೂರು, ಬಂಟ್ವಾಳ, ಪುತ್ತೂರು ಇಲ್ಲಿ ಯೋಗ ಶಿಬಿರವನ್ನು ಹಮ್ಮಿಕೊಂಡಿದ್ದು ಅರ್ಹ ಯೋಗ ತರಬೇತುದಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ತರಬೇತದಾರರಿಗೆ ಗೌರವ ಧನ ವಾರದ 1 ದಿನಕ್ಕೆ 250ರೂ ನೀಡಲಾಗುತ್ತದೆ.


ಆಸಕ್ತರು ಜನವರಿ 16 ರೊಳಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ದ.ಕ ಮಂಗಳೂರು  ಕಛೇರಿಗೆ ಅರ್ಜಿ ಸಲ್ಲಿಸಬೇಕು ಅಥವಾ ದೂರವಾಣಿ ಸಂಖ್ಯೆ 0824-2424501 ನ್ನು   ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕು.ಕ ಸೊಸೈಟಿ, ಸದಸ್ಯ ಕಾರ್ಯದರ್ಶಿ ಇವರ ಪ್ರಕಟಣೆ ತಿಳಿಸಿದೆ.

Also Read  ಸುಳ್ಯ: ನೇಣು ಬಿಗಿದು ಮಹಿಳೆ ಆತ್ಮಹತ್ಯೆ

error: Content is protected !!
Scroll to Top