ಬೀದಿ-ಬದಿ ವ್ಯಾಪಾರಿಗಳಿಗೆ ಉಚಿತ ವೈದ್ಯಕೀಯ ತಪಾಸಣೆ ಇಂದು

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.9   ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲಾಡಳಿತ ಮಂಗಳೂರು ಮಹಾನಗರಪಾಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾರ್ಯಾಲಯ ದಕ್ಷಿಣ ಕನ್ನಡ ಜಿಲ್ಲೆ, ದೀನ್ ದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಅಡಿಯಲ್ಲಿ  ಮತ್ತು ಕಸ್ತೂರ್ಬಾ ಮೆಡಿಕಲ್ ಕಾಲೇಜು ಆಸ್ಪತ್ರೆ, ಅತ್ತಾವರ, ಮಂಗಳೂರು ಇವರ ಜಂಟಿ ಸಹಯೋಗದೊಂದಿಗೆ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಬೀದಿ-ಬದಿ ವ್ಯಾಪಾರಿಗಳಿಗೆ ಉಚಿತ ವೈದ್ಯಕೀಯ ತಪಾಸಣೆ ಮತ್ತು ಸರಕಾರಿ  ಸವಲತ್ತುಗಳ ಅರಿವು ಕಾರ್ಯಕ್ರಮವನ್ನು ಜನವರಿ 9 ರಂದು ಬೆಳಿಗ್ಗೆ 10 ರಿಂದ ಮದ್ಯಾಹ್ನ 1 ಗಂಟೆಯವರೆಗೆ ಕುದ್ಮಲ್ ರಂಗರಾವ್ ಸಭಾಂಗಣ (ಮಂಗಳೂರು ಪುರಭವನದ) ಮಿನಿ ಹಾಲ್‍ನಲ್ಲಿ ನಡೆಯಲಿದೆ.

Nk Kukke

ಕಾರ್ಯಕ್ರಮದಲ್ಲಿ ಡಿ.ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ದಕ್ಷಿಣ ನಗರ ವಿಧಾನ ಸಭಾ ಕ್ಷೇತ್ರ, ಡಾ. ಭರತ್ ಶೆಟ್ಟಿ, ಶಾಸಕರು, ಮಂಗಳೂರು ಉತ್ತರ ನಗರ ಉತ್ತರ ವಿಧಾನ ಸಭಾ ಕ್ಷೇತ್ರ, ಐವನ್ ಡಿ’ಸೋಜ, ಶಾಸಕರು, ವಿಧಾನ ಪರಿಷತ್ತ್ ಕರ್ನಾಟಕ ಸರ್ಕಾರ, ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಆಯುಕ್ತರು ಮತ್ತು ಸಂತೋಷ ಕುಮಾರ್ ಉಪ ಆಯುಕ್ತರು (ಆಡಳಿತ) ಮಂಗಳೂರು, ತಾರನಾಥ ಆಚಾರ್ಯ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ದಕ್ಷಿಣ ಕನ್ನಡ ಜಿಲ್ಲೆ, ಡಾ. ದೀಪಕ್, ಡೆಪ್ಯುಟಿ ಮೆಡಿಕಲ್ ಸುಪರಿಡೆಂಟ್, ಕಸ್ತೂರ್ಬಾ ಮೆಡಿಕಲ್ ಕಾಲೇಜು ಆಸ್ಪತ್ರೆ ಮಂಗಳೂರು, ಮೊಹಮ್ಮದ್ ಮುಸ್ತಫಾ ಅಧ್ಯಕ್ಷರು, ದಕ್ಷಿಣ ಕನ್ನಡ ಬೀದಿ ಬದಿ ವ್ಯಾಪಾರಸ್ಥರು, ಮಂಗಳೂರು ಹಾಗೂ ಲೂಸಿ ಲಸ್ರಾಡೋ ಅಧ್ಯಕ್ಷರು, ತಲೆ ಹೊರೆ ಮಾರಾಟಗಾರರು ಮತ್ತು ತರಕಾರಿ ಬೆಳೆಗಾರರ ಸಂಘ ಇವರುಗಳು ಉಪಸ್ಥಿತರಿದ್ದಾರೆ.

Also Read  ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ವಿಧಿವಶ

ತಜ್ಞ ವೈದ್ಯರ ಸಂದರ್ಶನ ಮತ್ತು ಸಲಹೆ, ಕಣ್ಣು, ಮೂಗು, ಕಿವಿ, ಗಂಟಲು ಮತ್ತು ಇತರೇ ಸಾಮಾನ್ಯ ವೈದಕೀಯ ತಪಾಸಣೆ, ತಪಾಸಣೆಯಲ್ಲಿ ಕಂಡು ಬರುವ ದೀರ್ಘಕಾಲದ ಕಾಯಿಲೆಗಳಿಗೆ ನೇರವಾಗಿ ಆಸ್ಪತ್ರೆಗೆ ಶಿಪಾರಸ್ಸು ಮಾಡಲಾಗುವುದು ಮತ್ತು ವೈದಕೀಯ ವೆಚ್ಚವನ್ನು ರಿಯಾಯಿತಿ ದರದಲ್ಲಿ ಚಿಕಿತ್ಸೆ, ಆಯುಷ್ಮಾನ್ ಕಾರ್ಡ್, ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರದ ನೋಂದಣಿ, ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ (ಪಿ.ಎಂ-ಎಸ್.ವೈ.ಎಂ) ನೋದಂಣಿ,ಬೀದಿ ಬದಿ ವ್ಯಾಪಾರಸ್ಥರ ಗುರುತು ಚೀಟಿ ಮತ್ತು ಬೀದಿ ಬದಿ ವ್ಯಾಪಾರಸ್ಥರ ಮಾರಾಟ ಪ್ರಮಾಣ ಪತ್ರದ ವಿತರಣೆ, ಸರಕಾರದ ವಿವಿಧ ಸವಲತ್ತುಗಳಾದ, ಹೌಸಿಂಗ್, ಕೌಶಲ್ಯ ತರಬೇತಿಗಳು, ಸ್ವಯಂ ಉದ್ಯೋಗ, ಡೇ-ನಲ್ಮ್ ಯೋಜನೆ ಹಾಗೂ ಮೀಸಲು ನಿಧಿಗಳಾದ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದವರಿಗೆ 24.10 ಮೀಸಲು ನಿಧಿ, ಇತರೇ ಬಡ ವರ್ಗದ ಜನರಿಗೆ 7.25 ಮೀಸಲು ನಿಧಿ ಮತ್ತು ಅಂಗವಿಕಲರಿಗೆ 5.00 ಮೀಸಲು ನಿಧಿಯ ಕುರಿತು ಅರಿವು ಮತ್ತು ನೋಂದಣಿ ನಡೆಯಲಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯೊಳಗಡೆ ಬೀದಿ-ಬದಿ ವ್ಯಾಪಾರವನ್ನು ಮಾಡುವ ವ್ಯಾಪಾರಸ್ಥರು  ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ಮಂಗಳೂರು ಮಹಾನಗರಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.

Also Read  ಏಣಿತ್ತಡ್ಕ: ಕುಮಾರಧಾರಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ► ಟಿಪ್ಪರ್, ಪಿಕಪ್, 3 ದೋಣಿಗಳು ಸೇರಿದಂತೆ ಮೂವರು ವಶಕ್ಕೆ

error: Content is protected !!
Scroll to Top