ಅಂಬಿಗರ ಚೌಡಯ್ಯ- ವಚನಸಾರ ಪ್ರಸರಣೋಪನ್ಯಾಸ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.9    2019-20 ನೇ ಸಾಲಿನ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ವಚನಸಾರ ಪ್ರಸರಣೋಪನ್ಯಾಸ ಕಾರ್ಯಕ್ರಮ, ವಚನ ಸಾಹಿತ್ಯ ಪರಂಪರೆ ಮತ್ತು ಸಮಾಜ ಎಂಬ ಶೀರ್ಷಿಕೆ ಅಡಿಯಲ್ಲಿ ವಿವಿಧ ಕಾಲೇಜುಗಳಲ್ಲಿ ನಡೆಯಲಿದೆ.

ಜನವರಿ 9 ರಂದು ಬೆಳಿಗ್ಗೆ 10.30 ಗಂಟೆಗೆ ಸರಕಾರಿ ಪ್ರಥಮ ದರ್ಜೆ ಕಾಜೇಜು ಬೆಳ್ತಂಗಡಿ, 14 ರಂದು ಬೆಳಿಗ್ಗೆ 11.30 ಗಂಟೆಗೆ ಸರಕಾರಿ ಪ್ರಥಮ ದರ್ಜೆ ಕಾಜೇಜು ಕನ್ಯಾನ, 16 ರಂದು ಮಧ್ಯಾಹ್ನ 2.30 ಗಂಟೆಗೆ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಕುಂಜಿಬೆಟ್ಟು  ಉಡುಪಿ, 28 ರಂದು ಮಧ್ಯಾಹ್ನ 2 ಗಂಟೆಗೆ ಪದುವ ಪದವಿ ಕಾಲೇಜು ನಂತೂರುನಲ್ಲಿ ನಡೆಯಲಿದೆ ಎಂದು ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಸಂಯೋಜಕ ಡಾ. ನಾಗಪ್ಪ ಗೌಡ ಆರ್ ಇವರ  ಪ್ರಕಟಣೆ ತಿಳಿಸಿದೆ.

Also Read  ವಿಕೋಪ ನಿರ್ವಹಣೆಗೆ ಅಧಿಕಾರಿಗಳ ತಂಡ ನೇಮಕ

error: Content is protected !!
Scroll to Top