(ನ್ಯೂಸ್ ಕಡಬ) newskadaba.com, ಕಡಬ, ಜ.9 ಶಾಂತಿಮೊಗರು ಆಲಂಕಾರು ರಸ್ತೆ ಮಧ್ಯೆ ವಾಹನಗಳ ನಾಗಾಲೋಟದ ಸಂಚಾರ ದಿನದಿಂದ ಹೆಚ್ಚಾಗುತ್ತಿದ್ದು ವಿದ್ಯರ್ಥಿಗಳು,ಪಾದಚಾರಿಗಳು ಅಪಾಯವನ್ನು ಎದುರಿಸುವ ಸನ್ನಿವೇಶ ನಿರ್ಮಾಣವಾಗಿದೆ. ವಿದ್ಯಾರ್ಥಿಗಳು ರಸ್ತೆ ದಾಟಲು ಕಷ್ಟ ಪಡುತ್ತಿರುವುದನ್ನು ಮನಗಂಡ ಶುಭ ಇಂಡಸ್ಟ್ರೀಸ್ ಮಾಲಕ ಅಶೋಕ ಗೌಡ ಪಜ್ಜಡ್ಕ ಹಾಗೂ ಉಳ್ಳಾಲ್ತಿ ಶ್ಯಾಮಿಯಾನದ ಮಾಲಕ ಶಕ್ತಿಪ್ರಸಾದ್ ಪಜ್ಜಡ್ಕ ಜಂಟಿಯಾಗಿ ರಸ್ತೆಗೆ ಬ್ಯಾರಿಕೇಡ್‍ನ್ನು ಕೊಡುಗೆಯಾಗಿ ನೀಡಿದರು.
ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀದುರ್ಗಾಂಬ ಪದವಿ ಪೂರ್ವ ಕಾಲೇಜಿನ ಸಂಪರ್ಕ ಕೇಂದ್ರವಾದ ದುರ್ಗಾಂಬ ಕಾಲೇಜಿನ ಮುಂಭಾಗದಲ್ಲಿ ಬ್ಯಾರಿಕೇಡನ್ನು ಅಳವಡಿಸಲಾಗಿದ್ದು, ಕಡಬ ಠಾಣಾಧಿಕಾರಿ ರುಕ್ಮ ನಾಯ್ಕ ನೂತನ ಬ್ಯಾರಿಕೇಡನ್ನು ಉದ್ಟಾಟಿಸಿದರು. ಈ ಸಂಧರ್ಭದಲ್ಲಿ ಠಾಣಾ ಸಿಬ್ಬಂದಿಗಲಾದ ಮೋನಪ್ಪ, ತಾರಾನಾಥ, ಭವಿತ್, ಗೋವಿಂದರಾಜ್ ಸೇರಿದಂತೆ ಮುಖ್ಯ ಶಿಕ್ಷಕ ಸತ್ಯನಾರಾಯಣ ಭಟ್, ಈಶ್ವರ ಗೌಡ ಪಜ್ಜಡ್ಕ, ಉಪಾಧ್ಯಕ್ಷ ಸದಾನಂದ ಆಚಾರ್ಯ, ಸದಸ್ಯ ಇಂದುಶೇಖರ ಶೆಟ್ಟಿ, ಪಿಡಿಒ ಜಗನ್ನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.