ಜನವರಿ 10 ಏಣಿತಡ್ಕ ದೈವಗಳ ನೇಮೋತ್ಸವ

(ನ್ಯೂಸ್ ಕಡಬ) newskadaba.com,  ಕಡಬ, ಜ.9  ಕಡಬ ತಾಲೂಕಿನ ಕೊೈಲ ಗ್ರಾಮದ ಏಣಿತಡ್ಕದ ಗ್ರಾಮ ದೈವ ಶ್ರೀ ಶಿರಾಡಿ ದೈವ ಹಾಗೂ ಸಪರಿವಾರ ದೈವಗಳ ನೇಮೋತ್ಸವ ಜನವರಿ 10 ನೇ ಶುಕ್ರವಾರ ನಡೆಯಲಿದೆ.

ಈಗಾಗಲೇ ಗೊನೆಮಹೋರ್ತ ನಡೆದಿದ್ದು, ಶುಕ್ರವಾರ ಬೆಳಿಗ್ಗೆ ಆಶ್ಲೇಷ ಬಲಿ, ನಾಗನಿಗೆ ಕ್ಷೀರಾಭಿಷೇಕ, ದೈವಗಳಿಗೆ ಕಲಶಾಭಿಷೇಕ ನಡೆದು ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಶ್ರೀ ಶಿರಾಡಿ ಹಾಗೂ ಸಪರಿವಾರ ದೈವಗಳ ಭಂಡಾರ ತೆಗೆದು ರಾತ್ರಿ ನೇಮೋತ್ಸವ ನಡೆಲಿದೆ ಎಂದು ಇಲ್ಲಿನ ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !!
Scroll to Top