ವೃತ್ತಿಪರ ಶ್ರೇಷ್ಠತೆ ಪ್ರಶಸ್ತಿ -2020

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.8     ರೋಟರಿ ಕ್ಲಬ್ ಮಂಗಳೂರು ಉತ್ತರ ಇದರ ವತಿಯಿಂದ ರೋಟರಿ ಕ್ಲಬ್‍ನ ಅಧ್ಯಕ್ಷರಾದ ಶ್ರೀ ನಯನ್ ಕುಮಾರ್ ಸುವರ್ಣ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 07-01-2020ನೇ ಮಂಗಳವಾರದಂದು ರೋಟರಿ ಬಾಲಭವನ ಗಾಂಧಿನಗರದಲ್ಲಿ ನಡೆದ “ವೃತ್ತಿಪರ ಶ್ರೇಷ್ಠತೆ ಪ್ರಶಸ್ತಿ -2020” ಸನ್ಮಾನ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮಂಗಳೂರು ಘಟಕದ ಹಿರಿಯ ಗೃಹರಕ್ಷಕರಾದ ಶ್ರೀ ಸುರೇಶ್ ಶೇಟ್ ಇವರನ್ನು ಸನ್ಮಾನಿಸಲಾಯಿತು.

ಇದರ ಜೊತೆ ಇತರೆ ಇಲಾಖೆಯ ಸಿಬ್ಬಂದಿಗಳಾದ ರವೀಂದ್ರ ಯು., ಪ್ರಮುಖ ಅಗ್ನಿಶಾಮಕ, ಕದ್ರಿ ಅಗ್ನಿಶಾಮಕ ಠಾಣೆ ಮಂಗಳೂರು, ಶ್ರೀಮತಿ ಹಂಸವರ್ಮ, ಸ್ಟಾಫ್ ನರ್ಸ್, ಲೇಡಿಗೋಶನ್ ಆಸ್ಪತ್ರೆ, ಮಂಗಳೂರು, ಶ್ರೀಮತಿ ಜ್ಯೋತಿ ಶ್ರೀಗಣೇಶ್ ಅಂಗನವಾಡಿ ಕಾರ್ಯಕರ್ತೆ, ಶ್ರೀ ಪಾಂಡುರಂಗ, ಕೆಎಸ್‍ಆರ್ ಟಿಸಿ ಡ್ರೈವರ್ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಸಮಾದೇಷ್ಠರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಮಾತನಾಡಿ ಗೃಹರಕ್ಷಕ ಇಲಾಖೆಯ ಗೃಹರಕ್ಷಕ ಸಿಬ್ಬಂದಿಗೆ ವೃತ್ತಿಪರ ಶ್ರೇಷ್ಠತೆ ಪ್ರಶಸ್ತಿ ಸನ್ಮಾನ ಮಾಡಿರುವುದು ತುಂಬಾ ಸಂತಸ ತಂದಿದೆ ಎಂದು ನುಡಿದರು. ಇನ್ನು ಮುಂದೆ ಕೂಡಾ ಉತ್ಸಾಹದಿಂದ ಕರ್ತವ್ಯವನ್ನು ನಿರ್ವಹಿಸಿ ಸಂಸ್ಥೆಯ ಗೌರವವನ್ನು ಹೆಚ್ಚಿಸುವಂತೆ ಸೂಚಿಸಿದರು ಹಾಗೂ ಸನ್ಮಾನಿಸಲ್ಪಟ್ಟ ಎಲ್ಲಾ ಸಿಬ್ಬಂದಿಗಳಿಗೂ ಅಭಿನಂದನೆಯನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಡಾ|| ಸುದರ್ಶನ್ ಸಿ.ಎಂ., ಡಾ|| ಅಲ್ವಿನ್ ಡಿ’ಸೋಜಾ, ಶ್ರೀ ಶಿವರಾಜ್, ಎಂ. ವಿಶ್ವನಾಥ ಶೆಟ್ಟಿ, ಡಾ|| ಪ್ರಕಾಶ್ ಕೆ.ಇ., ಶ್ರೀ ವಸಂತ ಅಂಚನ್, ಶ್ರೀ ದೇವದಾಸ್ ರಾವ್, ಶ್ರೀ ಸುರೇಶ್ ಕಿಣಿ, ಡಾ|| ಪ್ರಕಾಶ್ ಶೆಟ್ಟಿ, ಶ್ರೀ ಹೇಮಂತ್ ಶೆಟ್ಟಿ ಹಾಗೂ ಗೃಹರಕ್ಷಕರು ಉಪಸ್ಥಿತರಿದ್ದರು. ಶುಭಾ ಕಿಣಿ ಪ್ರಾರ್ಥನೆಯನ್ನು ಮಾಡಿದರು. ಭಾರತಿ ಪ್ರಕಾಶ್ ಮುಖ್ಯ ಅತಿಥಿಗಳ ಪರಿಚಯವನ್ನು ಮಂಡಿಸಿದರು ಹಾಗೂ ಶ್ರೀ ನಯನ್ ಕುಮಾರ್ ಸುವರ್ಣ ಇವರು ಸ್ವಾಗತಿಸಿದರು. ಶ್ರೀ ಕೆ. ವಿಠಲ್ ಕುಡ್ವ, ಇವರು ಧನ್ಯವಾದ ಸಮರ್ಪಿಸಿದರು.

Also Read  ಕುತ್ಲೂರು ಗ್ರಾಮಕ್ಕೆ ಅತ್ಯುತ್ತಮ ಪ್ರವಾಸೋದ್ಯಮ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

error: Content is protected !!
Scroll to Top