ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ – 25ನೇ ವರ್ಷದ ಬೆಳ್ಳಿ ಹಬ್ಬ 

 

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.8  ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 25ನೇ ವರ್ಷದ ಬೆಳ್ಳಿ ಹಬ್ಬ ಕಾರ್ಯಕ್ರಮ  ಫೆಬ್ರವರಿ 22 ಮತ್ತು 23 ರಂದು ಕಾರ್ಕಳದ ವೆಂಕಟರಮಣ ದೇವಸ್ಥಾನ ಶಿಕ್ಷಣ ಸಮೂಹ ಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿದೆ.


ಜನವರಿ  5 ರಂದು ಮಧ್ಯಾಹ್ನ 3.30 ಗಂಟೆಗೆ ಕೊಂಕಣಿ ಭಾಷಿಕರಿಂದ ಕಾರ್ಯಕ್ರಮದ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲು ಮಂಗಳೂರಿನ ಅಶೋಕ ನಗರದ ದೈವಜ್ಞ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಪೂರ್ವಭಾವಿ ಸಿದ್ದತಾ ಸಭೆಯು ನಡೆಯಿತು. ಅಧ್ಯಕ್ಷ ಡಾ.ಕೆ.ಜಗದೀಶ್ ಪೈ ಮತ್ತು ಉಪಾಧ್ಯಕ್ಷ ಬಸ್ತಿವಾಮನ ಶೆಣೈ, ಎರಿಕ್ ಓಝೇರಿಯೋ, ಕೆ.ಪಿ.ಶೆಣೈ, ಸುಧಾಕರ ಶೇಟ್, ನಂದಗೋಪಾಲ್ ಶೆಣೈ ಅರುಣ್ ಜಿ.ಶೇಟ್,  ನವೀನ್ ನಾಯಕ್, ಗೋಪಿ ಭಟ್, ಉಪಸ್ಥಿತರಿದ್ದರು.

Also Read  ಡಿ. 08ರಿಂದ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳಿಂದ ದೂರು ಸ್ವೀಕಾರ ➤ ಕಡಬದಲ್ಲಿ ಯಾವಾಗ ಗೊತ್ತೇ..?

error: Content is protected !!
Scroll to Top