ರೇಷನ್ ಕಾರ್ಡ್ – ಇ ಕೆವೈಸಿ ಪ್ರಕ್ರಿಯೆ ವಿಸ್ತರಣೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.8   ಪಡಿತರ ಚೀಟಿದಾರರ ಇ ಕೆವೈಸಿ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಆಯುಕ್ತರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶದಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿಯಲ್ಲಿನ ಎಲ್ಲಾ ಸದಸ್ಯರುಗಳ ಇ ಕೆವೈಸಿ ಪಡೆಯುವ ಪ್ರಕ್ರಿಯೆಯನ್ನು 2020ನೇ ಮಾರ್ಚ್ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಜಿಲ್ಲೆಯ ಕೆಲವೊಂದು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿಯ ಎಲ್ಲಾ ಸದಸ್ಯರು ಇ ಕೆವೈಸಿಗೆ ಒಟ್ಟಾಗಿ ಬರಬೇಕೆಂದು, ಇಲ್ಲದಿದ್ದರೆ ಪಡಿತರ ನಿಲ್ಲಿಸುವುದಾಗಿ ಮತ್ತು ಪಡಿತರ ರದ್ದಾಗುವುದಾಗಿ ದೂರುಗಳು ಬಂದಿರುತ್ತದೆ. ಪಡಿತರ ಚೀಟಿಯ ಸದಸ್ಯರು ಅನುಕೂಲಕರ ಸಮಯದಲ್ಲಿ ಇ ಕೆವೈಸಿಯನ್ನು ಮಾಡಲು ಅವಕಾಶವಿರುತ್ತದೆ.


ಈ ಬಗ್ಗೆ ಯಾವುದೇ ದೂರುಗಳಿದ್ದಲ್ಲಿ ಸಂಪರ್ಕಿಸಲು ಸಂಬಂಧಪಟ್ಟ ತಾಲೂಕು ಕಚೇರಿಗಳಲ್ಲಿರುವ ಆಹಾರ ಶಿರೆಸ್ತೇದಾರ್ ಅಥವಾ ಆಹಾರ ನಿರೀಕ್ಷಕರುಗಳ ದೂರವಾಣಿ ಸಂಖ್ಯೆಗಳು ಇಂತಿವೆ :
ಮಂಗಳೂರು ಪ್ರದೇಶ ಸಹಾಯಕ ನಿರ್ದೇಶಕರು ಕಸ್ತೂರಿ ದೂರವಾಣಿ ಸಂಖ್ಯೆ : 9448819997, ಆಹಾರ ನಿರೀಕ್ಷಕರು ಕಮಲ ದೂರವಾಣಿ ಸಂಖ್ಯೆ : 9480241159.
ಮಂಗಳೂರು ತಾಲೂಕು ಶಿರೆಸ್ತೇದಾರ್, ಮೋಹಿನಿ ಕುಮಾರಿ ದೂರವಾಣಿ ಸಂಖ್ಯೆ : 9686243030, ರಾಜ್ಯಶ್ರೀ ಅಡ್ಯಂತಾಯ ಆಹಾರ ನಿರೀಕ್ಷಕರು ದೂರವಾಣಿ ಸಂಖ್ಯೆ : 9482502247.
ಬಂಟ್ವಾಳ ತಾಲೂಕು ಶಿರಸ್ತೇದಾರ್ ಶ್ರೀನಿವಾಸ್ ದೂರವಾಣಿ ಸಂಖ್ಯೆ : 9480735215 ಪುತ್ತೂರು ತಾಲೂಕು ಆಹಾರ ನಿರೀಕ್ಷಕರು ಸರಸ್ವತಿ ದೂರವಾಣಿ ಸಂಖ್ಯೆ : 9449389715, ಬೆಳ್ತಂಗಡಿ ತಾಲೂಕು ಆಹಾರ ನಿರೀಕ್ಷಕರು ವಿಶ್ವ ಕೆ ದೂರವಾಣಿ ಸಂಖ್ಯೆ : 8762698174. ಸುಳ್ಯ ತಾಲೂಕು ಆಹಾರ ನಿರೀಕ್ಷಕರು ವಸಂತಿ ಕೆ ದೂರವಾಣಿ ಸಂಖ್ಯೆ : 9845466149 ನ್ನು ಸಂಪರ್ಕಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಜಂಟಿ ನಿರ್ದೇಶಕರು, ದ.ಕ ಜಿಲ್ಲೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಕೈಗಾರಿಕಾ ಘಟಕದಲ್ಲಿ ಸ್ಫೋಟ! ➤ ಓರ್ವ ಮೃತ್ಯು

error: Content is protected !!
Scroll to Top