ರಾಷ್ಟ್ರ ಮಟ್ಟದ ಅಥ್ಲೇಟಿಕ್ಸ್ ಮತ್ತು ಮಾಸ್ಟರ್ ಗೇಮ್ಸ್ ಕ್ರೀಡಾಕೂಟಕ್ಕೆಕಡಬದ ಮೋಹನ್ ಕೆರೆಕೋಡಿ ಆಯ್ಕೆ

(ನ್ಯೂಸ್ ಕಡಬ) newskadaba.com, ಕಡಬ, ಜ.7    ರಾಜ್ಯ ಮಟ್ಟದ ಅಥ್ಲೇಟಿಕ್ಸ್ ಅಸೋಸಿಯೇಶನ್ ಹಾಗೂ ಕರ್ನಾಟಕ ಸ್ಟೇಟ್ ಮಾಸ್ಟರ್ ಗೇಮ್ಸ್ ಅಸೋಸಿಯೇಶನ್ ಅವರು ನಡೆಸಿರುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಕಡಬದ ಮೋಹನ್ ಕೆರೆಕೋಡಿಯವರು ಭಾಗವಹಿಸಿ ಪ್ರಶಸ್ತಿ ಪಡೆದು ಇದೀಗ ರಾಷ್ಟ್ರ ಮಟ್ಟದ ಸ್ಫರ್ಧೆಗೆ ಆಯ್ಕೆಯಾಗಿದ್ದಾರೆ. ಜನವರಿ 10ರಿಂದ 12ರವರೆಗೆ ಕೇರಳದ ಕೊಯಿಕ್ಕೋಡ್ ಹಾಗೂ ಫೆ.5ರಿಂದ 10ರವರೆಗೆ ಗುಜರಾತ್‍ನ ವಡೋಧರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಕರ್ನಾಟಕ ರಾಜ್ಯದ ತಂಡವನ್ನು ಪ್ರತಿನಿಧಿಸಲಿದ್ದಾರೆ.

ದಕ್ಷಿಣ ಕನ್ನಡ ಮಾಸ್ಟರ್ ಅಥ್ಲೇಟಿಕ್ಸ್ ಮಂಗಳೂರು ವತಿಯಿಂದ 2019 ನವೆಂಬರ್ 24 ರಂದು ಮಂಗಳಾ ಕ್ರೀಡಾಂಗಣದಲ್ಲಿ ನಡೆದ 16ನೇ ಜಿಲ್ಲಾ ಮಾಸ್ಟರ್ ಅಥ್ಲೇಟಿಕ್ಸ್ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಿದ ಕಡಬದ ಮೋಹನ್ ಕೆರೆಕೋಡಿಯವರು 400 ಮಿ. ಓಟದಲ್ಲಿ ಪ್ರಥಮ, 800 ಮಿ. ಓಟದಲ್ಲಿ ದ್ವಿತೀಯ, 1500 ಮಿ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ಬಳಿಕ 2019ನೇ ಡಿಸೆಂಬರ್ ನಲ್ಲಿ ಚಿತ್ರದುರ್ಗದಲ್ಲಿ ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ನಡೆಸಿದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪ್ರಶಸ್ತಿ ಪಡೆದು, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ಜನವರಿ 10ರಂದು ಕೇರಳದ ಕೊಯಿಕ್ಕೋಡ್‍ನ ಒಲಂಪಿಯನ್ ರೆಹಮಾನ್ ಸ್ಟೇಡಿಯಂನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯವನ್ನು ಮೋಹನ್ ಅವರು ಪ್ರತಿನಿಧಿಸಲಿದ್ದಾರೆ. ಅಂತೆಯೇ ಕರ್ನಾಟಕ ಸ್ಟೇಟ್ ಮಾಸ್ಟರ್ ಗೇಮ್ಸ್ ಅಸೋಸಿಯೇಶನ್ ಮಂಗಳೂರು ಇವರು 2019ನೇ ನವೆಂಬರ್ ನಲ್ಲಿ ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ನಡೆಸಿದ ರಾಜ್ಯ ಮಟ್ಟದ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ 400ಮೀ ಹಡಲ್ಸ್ ನಲ್ಲಿ ಪ್ರಥಮ, 5000 ಮೀ.ಓಟದಲ್ಲಿ ದ್ವಿತಿಯ, 800 ಮೀ.ಓಟದಲ್ಲಿ ತೃತೀಯ ಹಾಗೂ 400 ಮಿಕ್ಸೆಡ್ ರಿಲೆಯಲ್ಲಿ ದ್ವೀತಿಯ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ, ಈ ಕ್ರೀಡಾಕೂಟವು ಫೆ.5ರಿಂದ 9ರವರೆಗೆ ಗುಜರಾತ್‍ನ ವಡೋಧರದಲ್ಲಿ ನಡೆಯಲಿದ್ದು, ಈ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.

Also Read  ಉಪ್ಪಿನಂಗಡಿ: ನಿಲ್ಲಿಸಿದ್ದ ಸ್ಕೂಟರ್ ಕಳವು

ಗ್ರಾಮೀಣ ಭಾಗದ ಪ್ರತಿಭೆಯಾಗಿರುವ ಮೋಹನ್ ಕೆರೆಕೋಡಿಯವರು ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ಕೆರೆಕೋಡಿ ಕುಶಾಲಪ್ಪ ಗೌಡ ಹಾಗೂ ನೀಲಮ್ಮ ದಂಪತಿಗಳ ಪುತ್ರರಾಗಿದ್ದು, ಚಾಲಕ ವೃತ್ತಿಯನ್ನು ನಡೆಸುತ್ತಿದ್ದಾರೆ. ತನ್ನ ವೃತ್ತಿಯ ಜತೆಗೆ ಕ್ರೀಡೆ, ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರೀಯವಾಗಿ ಭಾಗವಹಿಸುವ ಮೋಹನ್‍ರವರು ಕಡಬ ಶ್ರೀರಾಮ ಯುವಕ ಮಂಡಲದ ಸ್ಥಾಪಕಾಧ್ಯಕ್ಷರಾಗಿ, ಶ್ರೀರಾಮ ಪ್ರೆಂಡ್ಸ್ ಕಡಬ ಹಗ್ಗಜಗ್ಗಾಟ ತಂಡದ ನಾಯಕನಾಗಿ ರಾಜ್ಯ, ಅಂತರ್ ರಾಜ್ಯ ಮಟ್ಟದಲ್ಲಿ ಭಾಗವಹಿಸಿ ಸುಮಾರು 97 ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಶ್ರೀರಾಮ ಸೇನೆಯ ಕಡಬ ತಾಲೂಕು ಅಧ್ಯಕ್ಷರಾಗಿ, ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಪದಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

Also Read  ಜೆಜೆಎಂನ 2ನೇ ಹಂತದ ಕಾಮಗಾರಿ 7-8 ತಿಂಗಳಲ್ಲಿ ಮುಕ್ತಾಯ- ಡಾ. ಆನಂದ್

error: Content is protected !!
Scroll to Top