(ನ್ಯೂಸ್ ಕಡಬ) newskadaba.com, ಮಂಗಳೂರು, ಜ.7 ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಬೆಂಗಳೂರು ಇವರಿಂದ ಪ್ರಾಯೋಜಿತವಾದ ಪದವಿ ಮತ್ತು ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳಿಗೆ ಮೈಸೂರು ವಿಭಾಗ ಮಟ್ಟದ ಸ್ಪರ್ಧೆಗಳನ್ನು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಜನವರಿ 3 ಮತ್ತು 4 ರಂದು ಹಮ್ಮಿಕೊಳ್ಳಲಾಗಿತ್ತು. ವಿಭಾಗೀಯ ವಲಯದ ಸುಮಾರು 250 ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸೊಸೈಟಿಯ ಸದಸ್ಯ ಕಾರ್ಯದರ್ಶಿ ಮೇಘನಾ ಆರ್. ಉದ್ಘಾಟಿಸಿದರು. ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ. ವಿ. ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಜ್ಞಾನ ಕೇಂದ್ರದಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ವಿವಿಧ ಕ್ಷೇತ್ರಗಳಲ್ಲಿ ಆಯೋಜಿಸಲಾಗುತ್ತಿದ್ದು, ಪ್ರಥಮ ಬಾರಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಕೈಗೊಂಡಿರುವ ಸ್ಪರ್ಧಾ ಕಾರ್ಯಕ್ರಮವನ್ನು ವಿಭಾಗೀಯ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ. ಇಲ್ಲಿಯ ವಿಜೇತರು ರಾಜ್ಯ ಮಟ್ಟಕ್ಕೆ ಹೋಗುವ ಅವಕಾಶಗಳಿವೆ. ಇಂತಹ ಸ್ಪರ್ಧೆಗಳು ವಿಜ್ಞಾನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಕೌಶಲ್ಯ ಮತ್ತು ಕಲಿಕಾ ಸಾಮರ್ಥ್ಯ ಹಾಗೂ ಆಸಕ್ತಿ ಮೂಡಿಸುವ ಕೆಲಸ ಮಾಡುತ್ತವೆ ಎಂದರು. ಪದವಿ ವಿಜ್ಞಾನ ವಿದ್ಯಾರ್ಥಿಗಳಿಗೆ ನಾಟಕ, ಗಣಿತ ಮಾಡೆಲಿಂಗ್, ರಸಪ್ರಶ್ನೆ, ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಸಮಾನಾಂತರವಾಗಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಸಮನಾಂತರವಾಗಿ ನಡೆಸಿದ ನಂತರ ತೀರ್ಪುಗಾರರು ಮಾರ್ಗದರ್ಶಿ ಸೂತ್ರಗಳಂತೆ ಅತ್ಯುತ್ತಮವಾದ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳ ವಿಜೇತರ ಪಟ್ಟಿಯನ್ನು ಹಾಗೂ ಇತರ ಬಹುಮಾನಗಳ ವಿಜೇತರ ನಿರ್ಣಯವನ್ನು ನೀಡಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ವಿವರ ಹೀಗಿವೆ :-
ನಾಟಕ: ಎಂಜಿಎಂ ಕಾಲೇಜು, ಉಡುಪಿ(ಪ್ರಥಮ), ಮಹಾವೀರ ಕಾಲೇಜು, ಕೊಡಂಗಲ್ಲು (ದ್ವಿತೀಯ) ಮತ್ತು ಎಂಎಂಕೆ ಆ್ಯಂಡ್ ಎಸ್‍ಡಿಎಂ ಕಾಲೇಜು, ಮೈಸೂರು(ತೃತೀಯ).
ಅತ್ಯುತ್ತಮ ನಿರ್ದೇಶನ : ಕಾರ್ತಿಕ್, ಎಂಜಿಎಂ ಕಾಲೇಜು, ಉಡುಪಿ(ಪ್ರಥಮ), ರೂಪೇಶ್, ಮಹಾವೀರ ಕಾಲೇಜು, ಕೊಡಂಗಲ್ಲು (ದ್ವಿತೀಯ) ಮತ್ತು ಶ್ರೀಹರಿ ಭಟ್, ಭಂಡಾರ್ಕರ್ಸ್ ಕಾಲೇಜು, ಕುಂದಾಪುರ(ತೃತೀಯ).
ಅತ್ಯುತ್ತಮ ಪಾತ್ರಧಾರಿ : ಕಾರ್ತಿಕ್, ಎಂಜಿಎಂ ಕಾಲೇಜು, ಉಡುಪಿ(ಪ್ರಥಮ), ಎ. ವಿ. ಸುಧಾಂಶು, ಸರಕಾರಿ ವಿಜ್ಞಾನ ಕಾಲೇಜು, ಹಾಸನ (ದ್ವಿತೀಯ) ಮತ್ತು ಮೊನಿಶಾ ಎಂ. ಜೆ., ಎಂಎಂಕೆ ಆ್ಯಂಡ್ ಎಸ್‍ಡಿಎಂ ಕಾಲೇಜು, ಮೈಸೂರು(ತೃತೀಯ).
ಅತ್ಯುತ್ತಮ ಸಾಹಿತ್ಯ : ಆದರ್ಶ್, ಎಂಜಿಎಂ ಕಾಲೇಜು, ಉಡುಪಿ(ಪ್ರಥಮ), ಶಾಶ್ವತ್ ಎಸ್. ಶೆಟ್ಟಿ, ಮಹಾವೀರ ಕಾಲೇಜು, ಕೊಡಂಗಲ್ಲು (ದ್ವಿತೀಯ) ಮತ್ತು ಆರ್ಯ ಎನ್. ಆರ್. ಮತ್ತು ಅಪೂರ್ವ ಎಂ. ಆರ್., ಎಂಎಂಕೆ ಆ್ಯಂಡ್ ಎಸ್‍ಡಿಎಂ ಕಾಲೇಜು, ಮೈಸೂರು(ತೃತೀಯ).
ಗಣಿತ ಮಾಡೆಲಿಂಗ್ ಸ್ಪರ್ಧೆ: ಶಶಾಂಕ್ ಎಸ್., ಸಂತ ಅಲೋಶಿಯಸ್ ಕಾಲೇಜು, ಮಂಗಳೂರು(ಪ್ರಥಮ), ಶಿಶಿರ ಶೆಟ್ಟಿ, ಪೂರ್ಣಪ್ರಜ್ಞ ಕಾಲೇಜು, ಉಡುಪಿ(ದ್ವಿತೀಯ) ಮತ್ತು ಮೈತ್ರಿ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೈಂದೂರ(ತೃತೀಯ).
ರಸಪ್ರಶ್ನೆ ಸ್ಪರ್ಧೆ: ಎರೊಲ್ ಶರ್ವಿನ್ ಫೆರ್ನಾಂಡಿಸ್, ವೈಶಾಖ್ ಸಾಲ್ಯಾನ್, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು(ಪ್ರಥಮ), ಗೌತಮ ಎಸ್.ಎಸ್, ಸುಮಂತ್ ಅಡಿಗ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ(ದ್ವಿತೀಯ) ಮತ್ತು ಅಖಿಲ್ ಶೆಟ್ಟಿ ಉತ್ಪಲ್ ಉದಯ್, ಕೆನರಾ ಕಾಲೇಜು, ಮಂಗಳೂರು(ತೃತೀಯ).
ಪ್ರಬಂಧ ಸ್ಪರ್ಧೆ(ಪದವಿ): ವಿಜಯಲಕ್ಷ್ಮೀ ಎನ್. ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜು, ರಾಮಕುಂಜ(ಪ್ರಥಮ), ದಿನೇಶ್ ಹೆಬ್ಬಾರ್, ಪೂರ್ಣಪ್ರಜ್ಞ ಕಾಲೇಜು, ಉಡುಪಿ(ದ್ವಿತೀಯ) ಮತ್ತು ರಶ್ಮಿ ಜಿ.ಎಸ್. ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜು, ರಾಮಕುಂಜ(ತೃತೀಯ), ವಿದ್ಯಾಕುಮಾರಿ ಕೆ.ವಿ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಟ್ಟಂಪಾಡಿ ಮತ್ತು ಪವಿತ್ರಾ ಕಿಣಿ ಯು. ವಿವೇಕಾನಂದ ಕಾಲೇಜು, ಪುತ್ತೂರು(ಸಮಾಧಾನಕರ)
ಪ್ರಬಂಧ ಸ್ಪರ್ಧೆ(ಸ್ನಾತಕೋತ್ತರ): ಎಂ.ಎಸ್. ಶ್ರೀಲತಾ ಹೆಬ್ಬಾರ್, ಪೂರ್ಣಪ್ರಜ್ಞ ಕಾಲೇಜು, ಉಡುಪಿ(ಪ್ರಥಮ), ವೈಷ್ಣವಿ ಜಿ, ಪೂರ್ಣಪ್ರಜ್ಞ ಕಾಲೇಜು, ಉಡುಪಿ(ದ್ವಿತೀಯ), ಪ್ರಮಿತಾ ಎ., ಸೆಂಟರ್ ಫಾರ್ ಪಿಜಿ ಸ್ಟಡೀಸ್ ಆ್ಯಂಡ್ ರಿಸರ್ಚ್ ಸಂತ ಫಿಲೊಮಿನಾ ಕಾಲೇಜು, ಪುತ್ತೂರು(ತೃತೀಯ),, ದಿವ್ಯಾಶ್ರೀ ಕೆ. ಮತ್ತು ಪೂಜಾಶ್ರೀ ವಿ ರೈ, ಸೆಂಟರ್ ಫಾರ್ ಪಿಜಿ ಸ್ಟಡೀಸ್ ಆ್ಯಂಡ್ ರಿಸರ್ಚ್ ಸಂತ ಫಿಲೊಮಿನಾ ಕಾಲೇಜು, ಪುತ್ತೂರು (ಸಮಾಧಾನಕರ)
ಎರಡು ದಿನಗಳ ಕಾರ್ಯಕ್ರಮದ ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾ ಉತ್ತಮ ರೀತಿಯಲ್ಲಿ ನಡೆದ ಕಾರ್ಯಕ್ರಮ ಮೆಚ್ಚಿಕೊಂಡರು. ಇಂತಹ ಸ್ಪರ್ಧಾತ್ಮಕ ಅಂಶಗಳು ವಿಜ್ಞಾನ ಕಲಿಕೆಗೆ ಪೂರಕವಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಭಾಗವಹಿಸಿದ ಅತಿಥಿಗಳಾದ ಡಾ. ಅರುಣ್ ಇಸ್ಲೂರ್, ಡಾ. ಜಯಕರ್ ಭಂಡಾರಿ, ಡಾ. ಚಂದ್ರಶೇಖರ್ ಶೆಟ್ಟಿ, ಡಾ. ನೀಲಕಂಠನ್ ಮತ್ತು ಡಾ ರಾಜೇಶ್ ಕುಮಾರ್ ಶೆಟ್ಟಿ ಇವರಿಂದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.