ಗ್ರಾಪಂ ಪಿಡಿಒ ಮೇಲೆ ಕಲ್ಲಿನಿಂದ ಹಲ್ಲೆ ► ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಬೆಳಗಾವಿ, ಆ.23, ಹುಕ್ಕೇರಿ ತಾಲೂಕಿನ ಇಸ್ಲಾಂಪೂರ ಗ್ರಾಪಂ  ಪಿಡಿಒ ಮೇಲೆ ದುಷ್ಕರ್ಮಿಯೊಬ್ಬ ಕಲ್ಲಿನಿಂದ ಹಲ್ಲೆ ನಡೆಸಿರುವ ಘಟನೆ ಬುಧವಾರ ನಡೆದಿದೆ.


ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಸ್ಲಾಂಪೂರ ಗ್ರಾಪಂ ಪಿಡಿಒ ಸೋಮಲಿಂಗ್ ಪಾಟೀಲ್ ಎಂಬುವರೇ ಹಲ್ಲೆಗೊಳಗಾದವರು. ತಮ್ಮ ಕೆಲಸದ ಸಲುವಾಗಿ ಹಿಡಕಲ್ ಡ್ಯಾಮ್‌ಗೆ ಹೋಗಿ ವಾಪಸ್ ಬರುವಾಗ ದಾರಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವ ಪಿಡಿಒ ತಲೆಗೆ ಕಲ್ಲಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಹಲ್ಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಕಲ್ಲಿನ ಏಟಿನಿಂದ ಗಂಭೀರವಾಗಿ ಗಾಯಗೊಂಡ ಪಿಡಿಒ ಸೋಮಲಿಂಗ್‌ ಪಾಟೀಲ್‌ ಅವರನ್ನು ಬೆಳಗಾವಿಯ ವಿಜಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಸಂಬಂಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top