ನೂಜಿಬೈಲ್ ದೈವಸ್ಥಾನ ಆಡಳಿತ ಮಂಡಳಿ ನೂತನ ಸಮಿತಿ ರಚನೆ

(ನ್ಯೂಸ್ ಕಡಬ) newskadaba.com, ಕಡಬ, ಜ.4    ನೂಜಿಬಾಳ್ತಿಲ ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ಈ ಹಿಂದಿನ ಆಡಳಿತ ಮಂಡಳಿ ಅವಧಿ ಮುಕ್ತಾಯಗೊಂಡಿದ್ದು, ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಆಡಳಿತ ಸಮಿತಿಯನ್ನು ಬುಧವಾರ ದೈವಸ್ಥಾನದಲ್ಲಿ ನಡೆದ ಸಭೆಯಲ್ಲಿ ರಚಿಸಲಾಯಿತು.


ನೂತನ ಆಡಳಿತ ಸಮಿತಿ ಅಧ್ಯಕ್ಷರಾಗಿ ಮೃತ್ಯುಂಜಯ ಬೀಡೆ ಕೆರೆತೋಟ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಶ್ರೀಧರ ಗೌಡ ಗೋಳ್ತಿಮಾರ್, ಕೋಶಾಧಿಕಾರಿಯಾಗಿ ಉಮೇಶ್ ಶೆಟ್ಟಿ ಸಾಯಿರಾಮ್ ಹಾಗೂ ಉತ್ಸವ ಸಮಿತಿ ಅಧ್ಯಕ್ಷರನ್ನಾಗಿ ದುಗ್ಗಣ್ಣ ಗೌಡ ಹೊಸಮನೆ ಅವರನ್ನು ಆಯ್ಕೆ ಮಾಡಲಾಯಿತು. ಜಾತ್ರೋತ್ಸವ ಸಮಿತಿ ಕಾರ್ಯದರ್ಶಿಯಾಗಿ ಉಮೇಶ್ ಸಾಕೋಟೆಜಾಲು, ಕೋಶಾಧಿಕಾರಿಯಾಗಿ ಪದ್ಮನಾಭ ಗೌಡ ಕೇಪುಂಜರನ್ನು ಆಯ್ಕೆ ಮಾಡಲಾಯಿತು. ಆಡಳಿತ ಸಮಿತಿ ಸದಸ್ಯರನ್ನಾಗಿ ಯಶೋಧ ಪರಮೇಶ್ವರ ಸಂಕೇಶ, ಉಮೇಶ್ ಅರ್ತಿತ್ತಡಿ, ಸೋಮಶೇಖರ್ ನಡುಗುಡ್ಡೆ, ಜಯಂತ ಬರೆಮೇಲು, ದಯಾನಂದ ಕಲ್ನಾರ್, ನೇಮಣ್ಣ ಕಲ್ನಾರ್ ಇವರುಗಳನ್ನು ಆಯ್ಕೆ ಮಾಡಲಾಯಿತು. ಆಡಳಿತ ಸಮಿತಿ ನಿಕಟಪೂರ್ವ ಅಧ್ಯಕ್ಷ ರಾಮಚಂದ್ರ ಗೌಡ ಎಳುವಾಳೆ, ಭಾಸ್ಕರ ಗೌಡ ಎಳುವಾಳೆ, ಪರಿಚಾರಕರಾದ ವಿಜಯ ಕುಮಾರ್ ಕೇಪುಂಜ, ಡೀಕಯ್ಯ ಗೌಡ ಪಾಲೆತ್ತಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಾಲಕೃಷ್ಣ ಗೌಡ ಉಳಿಪ್ಪು ಸ್ವಾಗತಿಸಿ, ವರದಿ ವಾಚಿಸಿದರು. ಗ್ರಾ.ಪಂ. ಸದಸ್ಯೆ ರಜಿತಾ ಪದ್ಮನಾಭ ವಂದಿಸಿದರು.

Also Read  ಕರಾಟೆಯ ಭರಾಟೆಯಲ್ಲಿ ಬಡ ಕುಟುಂಬದ ತರಾಟೆ ► ಮಂಗಳೂರು ಮೇಯರ್ ಗಿದೆ ಕಾನೂನಿನ ತರಾಟೆ

error: Content is protected !!
Scroll to Top