ಅಪರಿಚಿತ ಲಾರಿ ಢಿಕ್ಕಿ ► ಸ್ಥಳದಲ್ಲೇ ಐವರ ಮೃತ್ಯು

(ನ್ಯೂಸ್ ಕಡಬ) newskadaba.com ಹೈದರಾಬಾದ್, ಆ.23, ಅಪರಿಚಿತ ಲಾರಿಯೊಂದು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿ, ಆರು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಮಂಗಳವಾರ ತೆಲಂಗಾಣದ ಆಸಿಫಾಬಾದ್ ಜಿಲ್ಲೆಯ ಬೆನ್ದಾರದಲ್ಲಿ ನಡೆದಿದೆ.

ಘಟನೆಯಲ್ಲಿ ಲೀಮುಗುಡ ಜಿಲ್ಲೆಯ ಮೊರೋಲೆ ಸಂತೋಷ್(18) ಹಾಗೂ ಅಡೇ ತಿರುಪತಿ(22). ಅಗರ್‍ವಾಡದಲ್ಲಿ ವಾಸಿಸುತ್ತಿದ್ದ ವೇದ್‍ಮ ಅಂಭರಾವ್(25), ಕೇರಮೇರಿ ಮಂಡಲ್‍ನ ಜಾರಿ ಜಿಲ್ಲೆಯ ಲೇಂದಗುಡ(14) ಸಾವನ್ನಪ್ಪಿರುವ ವ್ಯಕ್ತಿಗಳು ಎಂದು ವಾನ್‍ಕಿಡಿ ಪೊಲೀಸರು ತಿಳಿಸಿದ್ದಾರೆ.

ವೇಗವಾಗಿ ಬಂದ ಲಾರಿ ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಲಾರಿಯು ಆಟೋವನ್ನು 100 ಮೀಟರ್ ದೂರದವರೆಗೆ ಎಳೆದುಕೊಂಡು ಹೋಗಿದೆ. ರಿಕ್ಷಾದ ಮೇಲಿನ ಭಾಗವು ಸಂಪೂರ್ಣವಾಗಿ ಜಖಂಗೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Also Read  ಇನ್ಮುಂದೆ ರೈಲು ಪ್ರಯಾಣಿಕರಿಗೆ ಕುಳಿತಲ್ಲಿಯೇ ಸಿಗಲಿದೆ ಸ್ವಿಗ್ಗಿ ಫುಡ್ಸ್..!

ಗಾಯಾಳುಗಳನ್ನು ವಾನ್‍ಕಿಡಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮನ್ಚೇರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ವಾನ್‍ಕಿಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top