ಮಂಗಳೂರು ವಿ.ವಿ – ಬೆಳ್ಳಿಯ ಪದಕ ಹಾಗೂ ಮಹಿಳೆಯರ ಹಾಕಿ ತಂಡ ಅಖಿಲ ಭಾರತ ಮಟ್ಟಕ್ಕೆ ತೇರ್ಗಡೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.3  ಕುವೆಂಪು ವಿಶ್ವವಿದ್ಯಾನಿಲಯ, ಶಿವಮೊಗ್ಗ ಇದರ ಆಶ್ರಯದಲ್ಲಿ ಡಿಸೆಂಬರ್  28 ರಿಂದ 30 ರವರೆಗೆ ನಡೆದ ಅಖಿಲ ಭಾರತ  ಅಂತರ ವಿಶ್ವವಿದ್ಯಾನಿಲಯ ಪುರುಷರ ಖೋ-ಖೋ ಪಂದ್ಯಾವಳಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ತಂಡ ಭಾಗವಹಿಸಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಮೊದಲನೇ ಲೀಗ್ ಉತ್ಕಾಲ್ ವಿಶ್ವವಿದ್ಯಾಲಯದ ಎದುರು 15-9 ಇನ್ನಿಂಗ್ಸ್, ಎರಡನೇ ಲೀಗ್ ಲವ್ಲಿ ಪ್ರೊಫೆಷನಲ್ ವಿವಿ ಎದುರು 16-9 ಇನ್ನಿಂಗ್ಸ್, ಮೂರನೇ ಲೀಗ್ ಪುಣೆ ವಿಶ್ವವಿದ್ಯಾನಿಲಯದ ವಿರುದ್ಧ 21-15, ಕ್ವಾರ್ಟರ್ ಫೈನಲ್‍ನಲ್ಲಿ ಮುಂಬೈ ವಿವಿ ಎದುರು 10-7, ಸೆಮಿಫನಲ್‍ನಲ್ಲಿ ಶಿವಾಜಿ ವಿಶ್ವವಿದ್ಯಾನಿಲಯದ ಎದುರು 12-13 ಅಂಕ ಗಳಿಸಿ ಫೈನಲ್‍ನಲ್ಲಿ ಕುವೆಂಪು ವಿಶ್ವವಿದ್ಯಾನಿಲಯ ಶಿವಮೊಗ್ಗದ ಎದುರು 16-13 ಅಂಕಗಳಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ತಂಡದ ತರಬೇತುದಾರರಾಗಿ ಪ್ರದೀಪ್ ಎಸ್. ಹಾಗೂ ವ್ಯವಸ್ಥಾಪಕರಾಗಿ  ಹರಿಪ್ರಸಾದ್ ಆಳ್ವ ಇದ್ದರು. ತಂಡದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು : ಹೃತಿಕ್,  ಮನು ವಿ, ಶಿವಣ್ಣ ಎಸ್, ಮಹೇಶ ಪಿ, ಧೀರಜ್,  ಮರಿಯಪ್ಪ,  ವಿಜಯಪಾಂಡೆ ಎಸ್.ಆರ್,  ಆಕಾಶ್ ಎಸ್.,  ಕೆ.ಪಿ. ತರಂಗ, ಜಯನಂದ ವಿ.ಎಸ್., ಕೃಷ್ಣಪ್ರಸಾದ್ ಕಶ್ಯಪ್ ಎನ್., ಹಂಸರಾಜ್ ಡಿ.ಎಮ್.


ಡಿಸೆಂಬರ್ 28 ರಿಂದ 31 ರವರೆಗೆ ತಮಿಳುನಾಡು ಫಿಸಿಕಲ್ ಎಜುಕೇಶನ್ ಮತ್ತು ಸ್ಪೋರ್ಟ್ಸ್ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಮಹಿಳೆಯರ ಹಾಕಿ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ತಂಡ ಭಾಗವಹಿಸಿ ಜಯಶಾಲಿಯಾಗಿರುತ್ತದೆ.  ಮೊದಲ ಕ್ವಾರ್ಟರ್ ಫೈನಲ್‍ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಮದ್ರಾಸ್ ವಿ.ವಿ. ಎದುರು 1-0 ಗೋಲು ಅಂತರಗಳಿಂದ ಜಯಿಸಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದುಕೊಂಡಿದೆ. ತಂಡದ ತರಬೇತುದಾರರಾಗಿ ನಾಚಪ್ಪ ಹಾಗೂ ವ್ಯವಸ್ಥಾಪಕರಾಗಿ ಮಿಸ್. ಸಾಯಿರಬಾನು ಇದ್ದರು. ತಂಡದಲ್ಲಿ ಭಾಗವಹಿಸಿದ ಸದಸ್ಯರು : ಕುಮುದ ಸಿ.ಆರ್., ಪ್ರಿಯದರ್ಶಿನಿ, ಚೆಲುವಾಂಬ ಆರ್., ನಿವೇದಿತ ಎನ್., ದೀಪ್ತಿ ಕೆ.ಎ.,  ಪವಿತ್ರ ಪಿ.ಎ., ಸಂಗೀತ ಸಿ.ಜೆ., ಕೀರ್ತನ ಎಮ್.ಎಸ್.,  ಮಿಲನಾ ಕೆ.ಪಿ.,  ಆಗ್ನೇಸ್ ಜೆ.,  ಪಾರ್ವತಿ ಪಿ.ಎ., ಲಿಖಿತ ಎಸ್. ಪಿ., ಲೀಲಾವತಿ ಎಮ್.ಜೆ.,  ಸುಶ್ಮಿತ ಆರ್., ವಿದ್ಯಾ ಕೆ.ಎಸ್., ಪದ್ಮ ಪ್ರಿಯ, ನೀತು ಕೆ.ಎಸ್., ಪಾರ್ವತಿ ಎಮ್.  ಭಾಗವಹಿಸಿರುತ್ತಾರೆ ಎಂದು  ದೈಹಿಕ ಶಿಕ್ಷಣ ನಿರ್ದೇಶಕರು, ಮಂಗಳೂರು ವಿಶ್ವವಿದ್ಯಾನಿಲಯ ಇವರ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group