ಜ.4 ರಂದು ಮಕ್ಕಳ ರಕ್ಷಣೆ – ಜಿಲ್ಲಾ ಮಟ್ಟದ ಸಾರ್ವಜನಿಕ ಸಂವಾದ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.3   ಕೈಲಾಸ್ ಸತ್ಯಾರ್ಥಿ ಫೌಂಡೇಶನ್ ನವದೆಹಲಿ, ಸ್ವಂದನಾ ಬೆಳಗಾವಿ, ದ.ಕ ಜಿಲ್ಲಾ  ಕಾನೂನು ಸೇವೆಗಳ ಪ್ರಾಧಿಕಾರ, ದ.ಕ ಜಿಲ್ಲಾ ಪಂಚಾಯತಿ, ಪಡಿ ಸಂಸ್ಥೆ ಮಂಗಳೂರು ಮತ್ತು ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿ ದ.ಕ ಜಿಲ್ಲೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಾಳೆ ಬೆಳಗ್ಗೆ 9.30 ಗಂಟೆಗೆ  ದ.ಕ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ “ಮಕ್ಕಳ ರಕ್ಷಣೆ ಕುರಿತು ಜಿಲ್ಲಾಮಟ್ಟದ ಸಾರ್ವಜನಿಕ ಸಂವಾದ ಕಾರ್ಯಕ್ರಮ”  ನಡೆಯಲಿದೆ.

ಕಾರ್ಯಕ್ರಮ ಉದ್ಘಾಟನೆಯನ್ನು  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಅಧ್ಯಕ್ಷರು ಕಾನೂನು ಸೇವಾ ಪ್ರಾಧಿಕಾರ ದ.ಕ ಮಂಗಳೂರು ಕಡ್ಲೂರು ಸತ್ಯನಾರಾಯಣಾಚಾರ್ಯ, ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಕಾರ್ಯನಿವಾಹಣಾಧಿಕಾರಿ, ದ.ಕ ಜಿಲ್ಲಾಪಂಚಾಯತ್ ಡಾ. ಸೆಲ್ವಮಣಿ.ಆರ್,  ಇವರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳು ಇದ್ದಲ್ಲಿ ಸಾರ್ವಜನಿಕರು ನ್ಯಾಯಾಧೀಶರೊಂದಿಗೆ ಚರ್ಚಿಸಲು ಅವಕಾಶವಿರುತ್ತದೆ.

Also Read  ಬೆಳ್ಳಾರೆ ಪೊಲೀಸ್ ಠಾಣಾ ಉಪನಿರೀಕ್ಷಕ, ಪ್ರವೃತ್ತಿಯಲ್ಲಿ ಲೇಖಕ ► ಲಿಟರೇಚರ್ ಆದರೂ ಖಡಕ್ ಆಫೀಸರ್ ಆಗಿರುವ ಈರಯ್ಯ

Nk Kukke

error: Content is protected !!
Scroll to Top