ಪಿಲಿಕುಳ ಜೈವಿಕ ಉದ್ಯಾನವನ- ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.3    ಪಿಲಿಕುಳದ ಜೈವಿಕ ಉದ್ಯಾವನದಲ್ಲಿ ಪ್ರಾಣಿ ಕ್ಷೇಮಾಭಿವೃಧ್ದಿ ಪಕ್ಷ 2020 ರ ಪ್ರಯುಕ್ತ ಜನವರಿ 26 ರಂದು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಪ್ರಾಣಿ ಕ್ಷೇಮಾಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಬಂಧದ ವಿಷಯವಾಗಿದ್ದು, ಈ ಸ್ಪರ್ಧೆಯು ಎರಡು ವಿಭಾಗಗಳಾಗಿ ನಡೆಯಲಿದೆ. ಪ್ರಥಮ ವಿಭಾಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ದ್ವಿತೀಯ ವಿಭಾಗದಲ್ಲಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬೇಕು.  ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಮಾಣ ಪತ್ರ ಹಾಗೂ ಬಹುಮಾನಗಳನ್ನು ನೀಡಲಾಗುವುದು. ಸ್ವರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಪ್ರಬಂಧಗಳು 1500 ಅಕ್ಷರಗಳಿಗೆ ಮೀರದಂತೆ ಕನ್ನಡ ಅಥವಾ ಇಂಗ್ಲೀಷ್‍ನಲ್ಲಿ ಬರೆದು ಜನವರಿ 24ರ ಒಳಗಾಗಿ ಪಿಲಿಕುಳ ಜೈವಿಕ ಉದ್ಯಾನವನ, ವಾಮಂಜೂರು ಅಂಚೆ, ಮಂಗಳೂರು-575028, ವಿಳಾಸಕ್ಕೆ ಅಂಚೆ ಮೂಲಕ ಅಥವಾ ವೈಯಕ್ತಿಕವಾಗಿ ಕಳುಹಿಸಬೇಕು. ವಿದ್ಯಾರ್ಥಿಯ ಹೆಸರು, ಅಂಚೆ ವಿಳಾಸ, ವಿದ್ಯಾಸಂಸ್ಥೆ ಹೆಸರು, ಸಂಪರ್ಕ ದೂರವಾಣಿ ಸಂಖ್ಯೆಯನ್ನು ಪ್ರತ್ಯೇಕ ಹಾಳೆಯಲ್ಲಿ ನಮೂದಿಸಿ ಪ್ರಬಂಧದೊಂದಿಗೆ ಲಗತ್ತಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪಿಲಿಕುಳ ಜೈವಿಕ ಉದ್ಯಾನವನ, ವಾಮಂಜೂರು ಅಂಚೆ, ಮಂಗಳೂರು ದೂರವಾಣಿ ಸಂಖ್ಯೆ 0824 22633000, 9980187057, ಹಾಗೂ ವೆಬ್‍ಸೈಟ್ ನ್ನು ಸಂಪರ್ಕಿಸಲು  ಪಿಲಿಕುಳ ಜೈವಿಕ ಉದ್ಯಾವನದ ನಿರ್ದೇಶಕ, ಹೆಚ್.ಜೆ. ಭಂಡಾರಿ ಇವರ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group