ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.3   2019 ನೇ ಸಾಲಿನಲ್ಲಿ ಜನವರಿ 01  ರಿಂದ  ಡಿಸೆಂಬರ್ 31 ರ ವರೆಗೆ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಸಾಹಿತ್ಯ, ಲಲಿತಕಲೆ, ವಿಜ್ಞಾನ, ಮಾನವಿಕ, ವೈದ್ಯಕೀಯ,  ತಾಂತ್ರಿಕ,  ಸ್ವರ್ಧಾತ್ಮಕ, ಪರಮಾರ್ಶನ ಕೃತಿಗಳು ಹಾಗೂ ಮಕ್ಕಳ ಸಾಹಿತ್ಯ, ನವ ಸಾಕ್ಷರರ ಕೃತಿಗಳು ಇತ್ಯಾದಿ ವಿಷಯಗಳ ಕನ್ನಡ, ಆಂಗ್ಲ, ಇತರೆ ಭಾರತೀಯ ಭಾಷೆಯ ಗ್ರಂಥಗಳ ಆಯ್ಕೆಗೆ ಲೇಖಕರು, ಲೇಖಕ, ಪ್ರಕಾಶಕರು, ಪ್ರಕಟಣಾ ಸಂಸ್ಥೆಗಳು ಹಾಗೂ ವಿತರಕರಿಂದ ಪುಸ್ತಕಗಳನ್ನು ಅಹ್ವಾನಿಸಿದೆ. ಗ್ರಂಥಸ್ವಾಮ್ಯ ವಿಭಾಗ, ರಾಜ್ಯಕೇಂದ್ರ ಗ್ರಂಥಾಲಯ, ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿ ಜನವರಿ 30 ರವರೆಗೆ ಕಾಪಿ ರೈಟ್ ಮಾಡಿಸಿರುವ ಪುಸ್ತಕದ ಒಂದು ಪ್ರತಿಯೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.

Also Read  ಕೋಡಿಂಬಾಳದಲ್ಲಿ ಡೆಂಗ್ಯೂ ಪತ್ತೆ➤ ಜ್ವರ ಪೀಡಿತರ ಮನೆಗೆ ಅಧಿಕಾರಿಗಳ ಭೇಟಿ

ಡಿಜಿಟಲ್ ಗ್ರಂಥಾಲಯ ಸೇವೆಯನ್ನು ಸಾರ್ವಜನಿಕ ಓದುಗರಿಗೆ ಒದಗಿಸಲು ಅನುಕೂಲವಾಗುವಂತೆ ಆಸಕ್ತಿಯುಳ್ಳ ಲೇಖಕರು, ಲೇಖಕ ಪ್ರಕಾಶಕರು ಮತ್ತು ಪ್ರಕಟಣ ಸಂಸ್ಥೆಗಳು ಪುಸ್ತಕವನ್ನು ಆಯ್ಕೆಗೆ ಸಲ್ಲಿಸುವಾಗ ತಮ್ಮ ಅನುಮತಿ ಪತ್ರದೊಂದಿಗೆ ಸದರಿ ಪುಸ್ತಕದ ಸಾಪ್ಟ್ ಕಾಪಿಯನ್ನು ಸಿ.ಡಿ ರೂಪದಲ್ಲಿ  ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು ಇಲ್ಲಿಗೆ ಜನವರಿ 31 ರಂದು ಸಂಜೆ 5.30 ಗಂಟೆಯ ಒಳಗಾಗಿ ಸಲ್ಲಿಸಬೇಕು. ನಿಗದಿತ ಅರ್ಜಿ ನಮೂನೆಗಾಗಿ ಇಲಾಖಾ ವೆಬ್ ಸೈಟ್ ಹಾಗೂ ಹೆಚ್ಚಿನ ಮಾಹಿತಿಗಾಗಿ  ನಿರ್ದೇಶಕರ ಕಚೇರಿ, ಬೆಂಗಳೂರು ದೂರವಾಣಿ ಸಂಖ್ಯೆ: 080-22864990, 22867358 ನಗರ/ ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು, ದೂರವಾಣಿ ಸಂಖ್ಯೆ: 0824-2425873, 2441905 ನ್ನು ಸಂಪರ್ಕಿಸಲು ಉಪನಿರ್ದೇಶಕರು, ನಗರ ಕೇಂದ್ರ ಗ್ರಂಥಾಲಯ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಉಪ್ಪಿನಂಗಡಿ: ಸಿಡಿಲು ಬಡಿದು ಐವರಿಗೆ ಗಾಯ

error: Content is protected !!
Scroll to Top