ಜ.4: ಬಿಳಿನೆಲೆಯಲ್ಲಿ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ

(ನ್ಯೂಸ್ ಕಡಬ) newskadaba.com, ಸುಬ್ರಹ್ಮಣ್ಯ, ಜ.3   ಪುತ್ತೂರು ಶ್ರೀ.ಕ್ರೇ.ಧ.ಗ್ರಾ.ಯೋ.ಬಿ.ಸಿ.ಟ್ರಸ್ಟ್, ಬಿಳಿನೆಲೆ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಹಾಗೂ ಬಿಳಿನೆಲೆ ವಲಯ ಜನಜಾಗೃತಿ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಶ್ರೀ ಶನೈಶ್ಚರ ಕಲ್ಫೋಕ್ತ ಪೂಜಾ ಕಾರ್ಯಕ್ರಮ ನಾಳೆ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಲಿದೆ.

Nk Kukke


ಸಂಜೆ ಗಂಟೆ 4ರಿಂದ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ, ಗಂಟೆ 5ರಿಂದ ಶನೈಶ್ಚರ ಪೂಜೆ ಪ್ರಾರಂಭಗೊಳ್ಳಲಿದೆ. ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅರ್ಚಕರಾದ ವೆಂಕಟೇಶ್ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಲಿದೆ. ಗಂಟೆ 7.30ರಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಪಿ.ಎಂ.ಕೇಶವ ಗೌಡ ಪುತ್ತಿಲ ವಹಿಸಲಿದ್ದಾರೆ. ವಾಸ್ತು ಶಿಲ್ಪಿ ಶಾಸ್ತ್ರಜ್ಞರಾದ ಎಸ್.ಎಂ.ಪ್ರಸಾದ್ ಮುನಿಯಂಗಳ ಧಾರ್ಮಿಕ ಭಾಷಣ ನೆರವೇರಿಸಲಿದ್ದು, ಶ್ರೀ.ಕ್ಷೇ.ಧ.ಗ್ರಾ.ಯೋ. ಕರಾವಳಿ ವಿಭಾಗದ ಪ್ರಾದೇಶಕ ನಿರ್ದೇಶಕ ವಸಂತ ಸಾಲಿಯಾನ್, ಜನಜಾಗೃತಿ ವೇದಿಕೆ ವಲಯಾಧ್ಯಕ್ಷ ತಮ್ಮಯ್ಯ ಗೌಡ, ಶ್ರೀ ಗೋಪಾಲಕೃಷ್ಣ ದೇವಳದ ಆಡಳಿತಾಧಿಕಾರಿ ನವ್ಯ, ಒಕ್ಕೂಟದ ಬಿಳಿನೆಲೆ ವಲಯಾಧ್ಯಕ್ಷ ಸತೀಶ್ ಎರ್ಕ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Also Read  ನೆಲ್ಯಾಡಿ: ಶತಾಯುಷಿ ಯೂಸುಫ್ ಕೆ.ಇ ವಿಧಿವಶ

error: Content is protected !!
Scroll to Top