ನಿರ್ಮಿತಿ ಕೇಂದ್ರ – ಜಿಲ್ಲಾಧಿಕಾರಿಯಿಂದ ತಾಂತ್ರಿಕ  ಒಡಂಬಡಿಕೆ ಪತ್ರ ಹಸ್ತಾಂತರ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.2   ದ.ಕ. ನಿರ್ಮಿತಿ ಕೇಂದ್ರ ಸುರತ್ಕಲ್ 1991 ಸುರತ್ಕಲ್‍ನ ಯನ್.ಐ.ಟಿ.ಕೆ., ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಹಲವಾರು ವಿವಿಧ ನವೀನ ಕಟ್ಟಡ ತಂತ್ರಜ್ಞಾನಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಪ್ರಯತ್ನಗಳನ್ನು ನಡೆಸುತ್ತಿದೆ. ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು  ಇತ್ಯಾದಿ ವಿಷಯಗಳ ಬಗ್ಗೆ ಕಾರ್ಯಗಾರ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ಥಳೀಯ ಜನರಲ್ಲಿ ಮತ್ತು ಇಂಜಿನಿಯರ್ ಗಳಲ್ಲಿ ಹೊಸತಂತ್ರಜ್ಞಾನಗಳ ಬಗ್ಗೆ ಅರಿವನ್ನು ಮೂಡಿಸುತ್ತಿದೆ.


ನಿರ್ಮಿತಿ ಕೇಂದ್ರದ ಆವರಣದಲ್ಲಿರುವ ಭಯೋಡೈಜೆಸ್ಟರ್, ವಾಲ್ಟ್ ಕಸ್ಟ್ರಕ್ಷನ್ & ಡೆಮೋಲಿಷನ್ ವೇಸ್ಟ್, ಟ್ರಾನ್ಸಿಟ್, ಓರಿಯೆಂಟೆಡ್ ಡೆವೆಲೆಪ್‍ಮೆಂಟ್ ಇತ್ಯಾದಿ ವಿಷಯಗಳ ಬಗ್ಗೆ ಕಾರ್ಯಗಾರ, ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ಥಳೀಯ ಜನರಲ್ಲಿ ಮತ್ತು ಇಂಜಿನಿಯರ್ ಗಳಲ್ಲಿ ಹೊಸ ತಂತ್ರಜ್ಞಾನಗಳ ಅರಿವನ್ನು ಮೂಡಿಸುತ್ತಿದೆ. ನಿರ್ಮಿತಿ ಕೇಂದ್ರದ ಆವರಣದಲ್ಲಿರುವ ಟೆಕ್ನೊಲೋಜಿ ಪಾರ್ಕ್, ಇನೋವೇಷನ್ ಸೆಂಟರ್, ಮಾಡೆಲ್ ಹೌಸ್ ಇತ್ಯಾದಿಗಳನ್ನು ವೀಕ್ಷಣೆ ಮಾಡಲು ಉತ್ತರ ಕನ್ನಡ, ಉಡುಪಿ, ದ.ಕ. ಜಿಲ್ಲೆಯ ಇಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲದೆ ಬೆಂಗಳೂರು, ಕೊಚ್ಚಿನ್, ಹಾಸನ, ಮೈಸೂರು ಇತ್ಯಾದಿಗಳಿಂದ ವಿದ್ಯಾರ್ಥಿಗಳು ಕೇಂದ್ರಕ್ಕೆ ಭೇಟಿ ನೀಡಿ ಈ ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿರುತ್ತಾರೆ. ಕೇಂದ್ರದ ವತಿಯಿಂದ ಉಚಿತವಾಗಿ ಮಳೆ ನೀರು ಕೊಯ್ಲು, ಜಲ ಸಂರಕ್ಷಣೆ ಹಾಗೂ ಶೌಚಾಲಯದ ತ್ಯಾಜ್ಯವನ್ನು ಪರಿಷ್ಕರಿಸುವ ಬಯೋಡೈಜೆಸ್ಟರ್ ತಂತ್ರಜ್ಞಾನವನ್ನು ಉಚಿತವಾಗಿ ತರಬೇತಿಯನ್ನು ನೀಡುತ್ತಿದೆ.  ಕಟ್ಟಡ ಸಾಮಾಗ್ರಿಗಳ ತ್ಯಾಜ್ಯ ಮರುಬಳಕೆ ಬಗ್ಗೆ ಹೆಚ್ಚಿನ ಅಧ್ಯಯನವನ್ನು ನಡೆಸುತ್ತಿದೆ.  ನಿರ್ಮಿತಿ ಕೇಂದ್ರದ ಸರ್ವ ಚಟುವಟಿಕೆಗಳಿಗೆ ಹುಡ್ಕೊ ಸಂಸ್ಥೆಯಿಂದ ಪ್ರಶಸ್ತಿ ಲಭಿಸಿದ್ದು ಅಲ್ಟ್ರಾಟೆಕ್ ಸಿಮೆಂಟ್ ಕೊ. ಯಿಂದ ಉತ್ತಮ ಗೃಹ ನಿರ್ಮಾಣಕ್ಕೆ ಪ್ರಶಸ್ತಿ ಬಂದಿರುತ್ತದೆ.
ಎಲ್ಲಾ ವಿಷಯಗಳನ್ನು ಮನಗಂಡು ಹೆಚ್ಚಿನ ತರಬೇತಿ ಮತ್ತು ಕಟ್ಟಡ ತಂತ್ರಜ್ಞಾನದ ವಿನಿಮಯಕ್ಕೋಸ್ಕರವಾಗಿ ದೇಶದ ಅಗ್ರಮಾನ್ಯ ಖಾಸಗಿ ಇಂಜಿನಿಯರಿಂಗ್ ವಿದ್ಯಾಲಯಗಳಲ್ಲಿ ಒಂದಾದ ಮಣಿಪಾಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಒIಖಿ)  ಸಂಸ್ಥೆಯು ದ.ಕ. ನಿರ್ಮಿತಿ ಕೇಂದ್ರದೊಂದಿಗೆ ತಾಂತ್ರಿಕ ಒಡಂಬಡಿಕೆ ಮಾಡಲು ಮುಂದಾಗಿದ್ದು, ಇದಕ್ಕೆ ಜಿಲ್ಲಾಧಿಕಾರಿಗಳಾದ ಸಿಂಧೂ ಬಿ.ರೂಪೇಶ್ ಅವರು ಕೇಂದ್ರದ ಅಧ್ಯಕ್ಷರ ನೆಲೆಯಲ್ಲಿ ಸಹಿಯನ್ನು ಹಾಕಿ ಒಡಂಬಡಿಕೆ ಪತ್ರದ ಹಸ್ತಾಂತರವನ್ನು ನಡೆಸಿದರು.

Also Read  ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ನಿಧನಕ್ಕೆ ದ. ಕ ಸಂಸದ ಕ್ಯಾ ಬ್ರಿಜೇಶ್ ಚೌಟ ಸಂತಾಪ

ಒIಖಿ ಸಂಸ್ಥೆಯ ಸಹಾಯಕ ನಿರ್ದೇಶಕರಾದ ಡಾ.ರಾಘವೇಂದ್ರ ಹೊಳ್ಳ ಹಾಗೂ ಒIಖಿ ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ.ಬಾಲಕೃಷ್ಣ ರಾವ್ ಜಿಲ್ಲಾಧಿಕಾರಿಗಳಿಂದ ದಾಖಲೆಗಳನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಡಾ.ಹೊಳ್ಳ ಮಾತನಾಡಿ ನಿರ್ಮಿತಿ ಕೇಂದ್ರದ ಪರಿಣತಿಯೊಂದಿಗೆ ಒIಖಿ ಸಹಯೋಗದೊಂದಿಗೆ ಅವಿಭಜಿತ ದ.ಕ.ಜಿಲ್ಲೆ ಎಲ್ಲಾ ಕಟ್ಟಡ ಕಾರ್ಮಿಕರಿಗೆ, ಎಲ್ಲಾ ಇಂಜಿನಿಯರ್ ಗಳಿಗೆ ಸುರಕ್ಷತೆ ಬಗ್ಗೆ ಮತ್ತು ತಾಂತ್ರಿಕ ನಿಪುಣತೆಯ ಬಗ್ಗೆ ವಿಶೇಷ ತರಬೇತಿಯನ್ನು ಹಮ್ಮಿಕೊಳ್ಳಲು ಸಾಧ್ಯವಾಗುತ್ತದೆ.  ಈ ಒಡಂಬಡಿಕೆಯಿಂದ ಅವಕಾಶಗಳ ಹೊಸ ಬಾಗಿಲು ಜ್ಞಾನಾರ್ಜನೆಡೆಗೆ ತೆರೆಯಲ್ಪಟ್ಟಿದೆ ಎಂದು ಹೇಳಿದರು. ಜಿಲ್ಲಾಧಿಕಾರಿಗಳು ಮಾತನಾಡಿ ನಿರ್ಮಿತಿ ಕೇಂದ್ರಕ್ಕೆ ಇದು 2ನೇ ತಾಂತ್ರಿಕ ಒಡಂಬಡಿಕೆಯಾಗಿದ್ದು ಮೊದಲನೆ ಒಡಂಬಡಿಕೆ ಮಂಗಳೂರು ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಇಂಜಿನಿಯರಿಂಗ್ ಮೂಡಬಿದ್ರೆ ಇವರೊಂದಿಗೆ ಮಾಡಲ್ಪಟ್ಟಿದ್ದು ಹಲವಾರು ಕಾರ್ಯಕ್ರಮಗಳು ನಡೆಯುತ್ತಿದೆ. ಒIಖಿ ಯಲ್ಲಿರುವ ಪರಿಣತರಿಂದ ಕೇಂದ್ರದ ಅಭಿವೃದ್ಧಿ ಕೂಡ ನಡೆಸಬಹುದಾಗಿದೆ. ಈ ಬಗ್ಗೆ ಪೂರಕ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ರಾಜೇಂದ್ರ ಕಲ್ಬಾವಿ ಸ್ವಾಗತಿಸಿದರು. ಕೇಂದ್ರದ ಲೆಕ್ಕಾಧಿಕಾರಿ ಉಷಾ ಉಪಸ್ಥಿತರಿದ್ದರು. ಈ ಒಡಂಬಡಿಕೆ ಮುಂದಿನ 2 ವರ್ಷಗಳ ವರೆಗೆ ಚಾಲ್ತಿಯಲ್ಲಿರುತ್ತದೆ. ನಿರ್ಮಿತಿ ಕೇಂದ್ರದೊಂದಿಗೆ ಈಗಾಗಲೇ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಪುತ್ತೂರು ಇವರು ತಾಂತ್ರಿಕ ಒಡಂಬಡಿಕೆ ಮಾಡಲು ಆಸಕ್ತಿ ತೋರಿದ್ದು, ಇದನ್ನು ಕೈಗೊಳ್ಳುವ ಮುಂದಿನ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಯೋಜನಾ ನಿರ್ದೇಶಕರಾದ ರಾಜೇಂದ್ರ ಕಲ್ಬಾವಿ ಹೇಳಿದರು.

Also Read  ರೈಲಿನಿಂದ ಬಿದ್ದು ಕಡಬದ ಯುವಕ ಮೃತ್ಯು

error: Content is protected !!
Scroll to Top