ವಿವಿ ಕಾಲೇಜಿಗೆ 150 :  ಮುಕ್ತ ಛಾಯಾಗ್ರಹಣ ಸ್ಪರ್ಧೆ

 

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.1     ವಿಶ್ವವಿದ್ಯಾನಿಲಯ ಕಾಲೇಜಿಗೆ 150ರ ಸಂಭ್ರಮಾಚರಣೆಯ ಅಂಗವಾಗಿ  ಜನವರಿ 3 ರಂದು 4 ರಂದು ಮುಕ್ತ ಛಾಯಾಗ್ರಹಣ ಸ್ಪರ್ಧೆಯನ್ನು ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ  ಹಮ್ಮಿಕೊಳ್ಳಲಾಗಿದೆ.

ಛಾಯಾಗ್ರಹಣ ಸ್ಪರ್ಧೆಯ ವಿಷಯ : 150ರ ಸಂಭ್ರಮದಲ್ಲಿ ವಿವಿ ಕಾಲೇಜು (ಕಾಲೇಜಿನ ಆವರಣ).  ಛಾಯಾಚಿತ್ರ ಸಲ್ಲಿಸಲು ಕೊನೆಯ ದಿನ ಜನವರಿ 8 ರಂದು ಸಾಪ್ಟ್ ಕಾಪಿ ಮತ್ತು ಹಾರ್ಡ್ ಕಾಪಿ (8×12), ಚಿತ್ರದ ಕುರಿತಾಗಿ 50 ಪದಗಳು ಮೀರದಂತೆ ವಿವರಣೆ ಇರಬೇಕು.  ಮುಕ್ತ ಛಾಯಾಚಿತ್ರಕ್ಕೆ ವಯಸ್ಸಿನ , ಸ್ಥಳದ ಮಿತಿ ಇರುವುದಿಲ್ಲ. ವಿಜೇತರಾವರಿಗೆ ಪ್ರಥಮ ಬಹುಮಾನ ರೂ. 5000 ಮತ್ತು ಸ್ಮರಣಿಕೆ, ದ್ವಿತೀಯ ಬಹುಮಾನ ರೂ. 3000 ಮತ್ತು ಸ್ಮರಣಿಕೆ, ತೃತೀಯ ಬಹುಮಾನ ರೂ. 2000 ಮತ್ತು ಸ್ಮರಣಿಕೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಸಂಯೋಜಕ ಗುರುಪ್ರಸಾದ್ ಟಿ.ಎನ್ ಮೊಬೈಲ್ ಸಂಖ್ಯೆ :9964939267 ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Also Read  ಪುತ್ತೂರಿನಲ್ಲಿ “ಪುತ್ತಿಲ ಪರಿವಾರ” ಘೋಷಣೆ    ➤ ಬಿಜೆಪಿಗರ ನಿದ್ದೆಗೆಡಿಸಿದ ಬೆಳವಣಿಗೆ

error: Content is protected !!
Scroll to Top