ಅದೃಷ್ಟದ ಮನೆಗೆ ವಾಪಾಸಾದ ಮಾಜಿ ಸಿಎಂ ಹೆಚ್.ಡಿ. ಕೆ.

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.23, ಜೆಪಿ ನಗರದ ಮನೆಯಲ್ಲಿ ವಾಸ್ತು ಸರಿ ಇಲ್ಲ ಅಂತಾ ಬದಲಾಯಿಸೋಕೆ ಮುಂದಾಗಿದ್ದ ಅದೃಷ್ಟದ ಮನೆಗೆ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ವಾಪಸ್ ಆಗಿದ್ದಾರೆ.

ಒಮ್ಮೆ ಮನೆ ಮಾರಾಟಕ್ಕೂ ಚಿಂತನೆ ಮಾಡಿದ್ದ ಇವರು, ಮನೆ ಖಾಲಿ ಮಾಡುವ ಸಂದರ್ಭದಲ್ಲಿ ಕರಿನಾಗರ ಹಾವು ಕಾಣಿಸಿಕೊಂಡಿತ್ತು. ಆಗ ವಾಸ್ತುದೋಷ ಸರಿಪಡಿಸಿ ಇದೇ ಮನೆಯಲ್ಲಿ ವಾಸಿಸಿ ಅಂತ ಜ್ಯೋತಿಷಿಗಳು ಸಲಹೆ ನೀಡಿದರು. ಕಳೆದ ಎರಡೂವರೆ ವರ್ಷದಿಂದ ಮನೆಯನ್ನ ನವೀಕರಣ ಮಾಡಿದ ಬಳಿಕ ಮತ್ತೆ ಗೃಹ ಪ್ರವೇಶ ಮಾಡಿದ್ದಾರೆ. ಇಂದು ಮುಂಜಾನೆಯಿಂದ ವಿಶೇಷ ಪೂಜೆ ಹೋಮಗಳು ನಡೆದವು. 2006 ರಲ್ಲಿ ಸಿಎಂ ಆಗಿದ್ದಾಗ ಇದೇ ಮನೆಯಲ್ಲಿ ಎಚ್‍ಡಿಕೆ ವಾಸವಿದ್ದರು.

ತಾವು ಮೊದಲ ಬಾರಿಗೆ ಸಂಸತ್ ಚುನಾವಣೆಗೆ, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಅದೇ ಅವಧಿಯಲ್ಲೇ ಸಿಎಂ ಆಗಿದ್ದು, ಹಾಗೂ ಪತ್ನಿ ಅನಿತಾ ಕುಮಾರಸ್ವಾಮಿ ಶಾಸಕಿಯಾಗಿ ಗೆಲುವು ಸಾಧಿಸಿದ್ದು ಸೇರಿದಂತೆ ಹಲವು ಯಶಸ್ಸುಗಳನ್ನು ಇವರು ಇದೇ ನಿವಾಸದಲ್ಲಿ ಕಂಡಿದ್ದರು.

Also Read  ಕರಾವಳಿಯಲ್ಲಿ ಮೊದಲ ಗ್ರೀನ್ ಹೈಡ್ರೋಜನ್ ಘಟಕ ಸ್ಥಾಪನೆ

ಆದರೆ ಕಾಲಕ್ರಮೇಣ ರಾಜಕೀಯದಲ್ಲಿ ಒಂದಿಷ್ಟು ಹಿನ್ನಡೆಯಾಗಿ ನಿಧಾನವಾಗಿ ಈ ನಿವಾಸದ ಮೇಲಿನ ಆಸಕ್ತಿ ಕಳೆದುಕೊಂಡು, 2014ರ ಜುಲೈ ತಿಂಗಳ ಮಧ್ಯಭಾಗದಲ್ಲಿ ಮನೆಯನ್ನು ಮಾರಾಟ ಮಾಡಿ ಸದಾಶಿವನಗರದ  ಪೊಲೀಸ್ ಠಾಣೆ ಸಮೀಪ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಒಂದು ಮನೆ ಮಾಡಿಕೊಂಡಿದ್ದರು. ಕೊನೆಗೆ ಅದನ್ನೂ ಬಿಟ್ಟು ಯು.ಬಿ. ಸಿಟಿ ಅಪಾರ್ಟ್‍ಮೆಂಟ್ ಒಂದರಲ್ಲಿ ವಾಸವಾಗಿದ್ದರು. ಆದರೆ ಎಲ್ಲವನ್ನೂ ಬಿಟ್ಟು ಇದೀಗ ಒಂದಿಷ್ಟು ನವೀಕರಣ ಮಾಡಿಸಿ ಹಳೆಯ ಮನೆಗೆ ವಾಪಸಾಗಿದ್ದಾರೆ. ಗೃಹ ಪ್ರವೇಶ ಪೂಜೆ ಕೂಡ ನೆರವೇರಿದೆ.

ಬಿಬಿಎಂಪಿ ಗುತ್ತಿಗೆದಾರರಾಗಿ, ಚಿತ್ರನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದ ಕುಮಾರಸ್ವಾಮಿ ಮಾಜಿ ಪ್ರಧಾನಿ ಹಾಗೂ ತಂದೆ ಹೆಚ್.ಡಿ. ದೇವೇಗೌಡರ ನೆರಳಲ್ಲೇ ಬೆಳೆದರು. ರಾಜಕೀಯಕ್ಕೆ ದಿಢೀರ್ ಪ್ರವೇಶ ಮಾಡಿದ ಇವರ ಅದೃಷ್ಟ ಖುಲಾಯಿಸಿ ಕೆಲವೇ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿ ಕೂಡ ಆದವರು. ಸಾಕಷ್ಟು ಉತ್ತಮ ಕೆಲಸ ಮಾಡಿದ್ದರಾದರೂ, ಬಿಜೆಪಿ ಜತೆ ಮೂಡಿದ ವಿರಸದಿಂದ ಒಪ್ಪಂದಂತೆ ಅಧಿಕಾರದಿಂದ ಇಳಿದು, ನಂತರ ಬಿಜೆಪಿಗೆ ನೀಡಿದ್ದ ಬೆಂಬಲ ವಾಪಸ್ ಪಡೆದರು.

Also Read  ಇನ್ಮುಂದೆ ಆಧಾರ್ ತಿದ್ದುಪಡಿಗಾಗಿ ಅಲೆದಾಟಕ್ಕೆ ಬ್ರೇಕ್ ► ಇಂದಿನಿಂದ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಆಧಾರ್ ತಿದ್ದುಪಡಿ

ಸದ್ಯ ರಾಜಕೀಯದಲ್ಲಿ ಮತ್ತೆ ವೈಭವದ ದಿನ ಕಾಣುವ, ಮತ್ತೆ ಸಿಎಂ ಆಗಿ ರಾಜ್ಯ ರಾಜಕೀಯದಲ್ಲಿ  ಕಾಣಿಸಿಕೊಳ್ಳುವ ಹಂಬಲ, ಸದಾಶಯ ಹೊಂದಿರುವ ಹೆಚ್‍ಡಿಕೆ ಈ ಹಿಂದೆ ತಮಗೆ ಅಂತದ್ದೊಂದು ಅದೃಷ್ಟ ದಯಪಾಲಿಸಿದ್ದ ನಿವಾಸಕ್ಕೆ ವಾಪಸಾಗಿದ್ದಾರೆ.
ಒಟ್ಟು 80 ಹಾಗೂ 100 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡ ಮಹಡಿ ಮನೆಯಲ್ಲಿ ಆರು ಕೊಠಡಿಗಳಿವೆ. ನಗರದ ಹೋಟೆಲ್ ಉದ್ಯಮಿಯೊಬ್ಬರು ಈ ಮನೆಯನ್ನು 15 ಕೋಟಿ ರೂ.ಗೆ ಖರೀದಿಸಿದ್ದರು. 1998ರಲ್ಲಿ ಕನಕಪುರ ಲೋಕಸಭೆ ಚುನಾವಣೆ ಹಾಗೂ ಸಾತನೂರು ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಕುಮಾರಸ್ವಾಮಿ ಅವರು 1999ರಲ್ಲಿ ಈ ಮನೆ ಖರೀದಿಸಿದ್ದರು.

error: Content is protected !!
Scroll to Top