ಕ್ರೀಡಾ ಶಾಲೆ/ಕ್ರೀಡಾ ವಸತಿ ನಿಲಯಕ್ಕೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.31    ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2020-21 ನೇ ಸಾಲಿಗೆ ಕ್ರೀಡಾಶಾಲೆ ಮತ್ತು ಕ್ರೀಡಾ ವಸತಿ ನಿಲಯಗಳಿಗೆ ಕ್ರೀಡಾಪಟುಗಳ (ಬಾಲಕರು, ಬಾಲಕಿಯರು) ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುವುದು. ಜನವರಿ 8 ರಂದು ಬೆಳಗ್ಗೆ 10 ಗಂಟೆಗೆ ಬಂಟ್ವಾಳ ತಾಲೂಕಿನ ಸರಕಾರಿ ವಿಠಲ ಪ್ರೌಢಶಾಲೆ, ವಿಟ್ಲ, ಜನವರಿ 9 ರಂದು ಬೆಳಗ್ಗೆ 10 ಗಂಟೆಗೆ ಬೆಳ್ತಂಗಡಿ ತಾಲೂಕಿನ ಸರಕಾರಿ ಪ್ರೌಢಶಾಲೆ ಪೂಂಜಾಲಕಟ್ಟೆ, ಜನವರಿ 10 ರಂದು ಪುತ್ತೂರು ತಾಲೂಕಿನ ಕೊಂಬೆಟ್ಟಿನಲ್ಲಿರುವ ತಾಲೂಕು ಕ್ರೀಡಾಂಗಣ, ಜನವರಿ 13 ರಂದು  ಬೆಳಗ್ಗೆ 10 ಗಂಟೆಗೆ  ಸುಳ್ಯ ತಾಲೂಕಿನ ಸರಕಾರಿ ಪದವಿಪೂರ್ವ ಕಾಲೇಜ್ ಸುಳ್ಯ, ಜನವರಿ 22 ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಸಲಾಗುವುದು.


ಕಿರಿಯರ ವಿಭಾಗ :-  ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ವಸತಿ ನಿಲಯಕ್ಕೆ ಪ್ರವೇಶ ಪಡೆಯಲು ಆಯ್ಕೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಪ್ರಸ್ತುತ ವರ್ಷ 7 ನೇ ತರಗತಿಯಲ್ಲಿ ಕಲಿಯುತ್ತಿದ್ದು, 2020ನೇ ವರ್ಷಕ್ಕೆ 8  ನೇ ತರಗತಿಗೆ  ಪ್ರವೇಶ  ಪಡೆಯಲು ಅರ್ಹತೆ ಪಡೆದು 2020, ಜೂನ್ 1 ಕ್ಕೆ 14 ವರ್ಷ ಒಳಗಿನವರಾಗಿರಬೇಕು. ತಾಲೂಕು ಮಟ್ಟದಲ್ಲಿ ಅರ್ಹತೆ ಪಡೆದು ರಾಜ್ಯಮಟ್ಟದ ಕ್ರೀಡಾಶಾಲೆಗೆ  ಆಯ್ಕೆ ಬಯಸುವವರು ವಿಭಾಗ ಮಟ್ಟದಲ್ಲಿ ಜನವರಿ 28 ಮತ್ತು 29 ರಂದು ಮಂಗಳಾ ಕ್ರೀಡಾಂಗಣ ಮಂಗಳೂರು ಹಾಗೂ  ಜನವರಿ 31 ಮತ್ತು ಫೆಬ್ರವರಿ 1 ರಂದು ಜಿಲ್ಲಾ ಕ್ರೀಡಾಂಗಣ ಹಾಸನ ಇಲ್ಲಿ ನಡೆಸಲಾಗುವುದು.
ಹಿರಿಯರ ವಿಭಾಗ:- ಹಿರಿಯ ವಿಭಾಗದ ಕ್ರೀಡಾ ನಿಲಯಗಳಿಗೆ ಆಯ್ಕೆ ಬಯಸುವ ಕ್ರೀಡಾಪಟುಗಳು ಪ್ರಸ್ತುತ 10 ನೇ ತರಗತಿಯಲ್ಲಿ ಕಲಿಯುತ್ತಿದ್ದು,  2020ನೇ  ವರ್ಷಕ್ಕೆ  ಪ್ರಥಮ  ಪಿ.ಯು.ಸಿ. ಗೆ  ಪ್ರವೇಶ  ಪಡೆಯಲು  ಅರ್ಹತೆ ಪಡೆದು 2020 ಜೂನ್ 1 ಕ್ಕೆ 18 ವರ್ಷ ಒಳಗಿನವರಾಗಿರಬೇಕು. ಹಿರಿಯ ವಿಭಾಗದ ಕ್ರೀಡಾ ವಸತಿ ನಿಲಯಕ್ಕೆ ಆಯ್ಕೆಯನ್ನು  ನೇರವಾಗಿ  ವಿಭಾಗ ಮಟ್ಟದಲ್ಲಿ  ಜನವರಿ 28  ಮತ್ತು 29 ರಂದು  ಮಂಗಳಾ  ಕ್ರೀಡಾಂಗಣ   ಮಂಗಳೂರು  ಹಾಗೂ  ಜನವರಿ 31 ಮತ್ತು ಫೆಬ್ರವರಿ 1 ರಂದು ಜಿಲ್ಲಾ ಕ್ರೀಡಾಂಗಣ  ಹಾಸನ ಇಲ್ಲಿ ನಡೆಸಲಾಗುವುದು. ಭಾಗವಹಿಸುವ ವಿದ್ಯಾರ್ಥಿಗಳು ದೃಢೀಕೃತ ಜನನ ಪ್ರಮಾಣ ಪತ್ರವನ್ನು ತರಬೇಕು.

Also Read  ಅಡಿಕೆ ಮರದಿಂದ ಬಿದ್ದು ಕಾರ್ಮಿಕ ಮೃತ್ಯು..!

ಹೆಚ್ಚಿನ ಮಾಹಿತಿಗಾಗಿ  ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ, ಮಂಗಳೂರು ತಾಲೂಕು, ವಿನೋದ್ ಕುಮಾರ್, ಮೊಬೈಲ್ ಸಂಖ್ಯೆ : 9845026869, ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ, ಬಂಟ್ವಾಳ ತಾಲೂಕು ಪಿ. ಎಸ್. ನವೀನ್,  ಮೊಬೈಲ್ ಸಂಖ್ಯೆ 9740365154,  ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ, ಪುತ್ತೂರು, ಜಯರಾಮ್ ಗೌಡ,  ಮೊಬೈಲ್ ಸಂಖ್ಯೆ :  9449991922, ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ, ಸುಳ್ಯ ತಾಲೂಕು ದೇವರಾಜ್ ಮುತ್ಲಾಜೆ ಮೊಬೈಲ್ ಸಂಖ್ಯೆ : 9448548449,  ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ, ಬೆಳ್ತಂಗಡಿ ತಾಲೂಕು, ಪ್ರಭಾಕರ್ ನಾರಾವಿ,  ಮೊಬೈಲ್ ಸಂಖ್ಯೆ :9449914186 ಇವರನ್ನು ಸಂಪರ್ಕಿಸಲು ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ. ಕ. ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಬೆಳ್ತಂಗಡಿ: ಯುವತಿಯ ಜೊತೆ ಮಾತನಾಡಿದ್ದಕ್ಕೆ ತಂಡದಿಂದ ಯುವಕನೋರ್ವನಿಗೆ ಹಲ್ಲೆ

error: Content is protected !!
Scroll to Top