(ನ್ಯೂಸ್ ಕಡಬ) newskadaba.com, ಕಡಬ, ಡಿ.30 ರೆಂಜಿಲಾಡಿ ಗ್ರಾಮದ ಮೀನಾಡಿ ಕಿ.ಪ್ರಾ.ಶಾಲೆಯಲ್ಲಿ ಮುಂದಿನ 2020ನೇ ಎಪ್ರಿಲ್ 12ರಂದು ಶಾಲಾ 60ನೇ ವರ್ಷದ ವಜ್ರಮಹೋತ್ಸವ ಆಚಾರಿಸುವುದಾಗಿ ಶಾಲೆಯಲ್ಲಿ ವಜ್ರಮಹೋತ್ಸವ ಸಮಿತಿ ವತಿಯಿಂದ ಡಿ.25ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ವಜ್ರಮಹೋತ್ಸಕ್ಕೆ ಎಲ್ಲಾ ರೀತಿಯಿಂದಲೂ ಸಹಕರಿಸುವುದಾಗಿ ಸಮಿತಿಯವರು ತಿಳಿಸಿದ್ದು. ಸಮಿತಿಯ ಗೌರವ ಸಲಹೆಗಾರರಾದ ಬೆಂಗಳೂರಿನ ಕ್ರಿಶ್ಚಿಯನ್ ಕೋ ಆಪರೇಟಿಪ್ ಸೊಸೈಟಿ ಅಧ್ಯಕ್ಷ ಮಾಣಿ.ಪಿ.ಎಂರವರು ಶಾಲಾ ಕೊಠಡಿಗಳಿಗೆ ಟೈಲ್ಸ್ ಅಳವಡಿಸಿಕೊಡುವುದಾಗಿ ಘೋಷಿಸಿದ್ದಾರೆ. ಇನ್ನೂ ಹಲವರು ಬೇರೆ ಬೇರೆ ರೀತಿಯಲ್ಲಿ ಶಾಲಾ ಅಭಿವೃದ್ಧಿಗೆ ಸಹಕರಿಸುವುದಾಗಿ ತಿಳಿಸಿದರು. ಸಭೆಯಲ್ಲಿ ಶಾಲಾ ವಜ್ರಮಹೋತ್ಸವಕ್ಕೆ ಪ್ರೊಟೋಕಾಲ್ ಪ್ರಕಾರ ಅತಿಥಿಗಳನ್ನು ಕರೆಯುವುದಾಗಿ ತೀರ್ಮಾನಿಸಲಾಯಿತು. ಅತಿಥಿಗಳನ್ನು ಕರೆಯುವ ವಿಚಾರದಲ್ಲಿ ಚರ್ಚಿಸಿದ ಸಮಿತಿ ಸದಸ್ಯರು, ಅತಿಥಿಗಳನ್ನು ಕರೆದರೆ ಸಮಯಕ್ಕೆ ಬರುವಂತಾಗಬೇಕು,ಕೆಲವರು ಗಂಟೆಗಟ್ಟಲೆ ಕಾಯಿಸುತ್ತಾರೆ, ಇನ್ನೂ ಕೆಲವರು ಸಮಯಕ್ಕೆ ಅಗುವಾಗ ಬರಲು ಆಗುವುದಿಲ್ಲ ಎಂಬ ಸಮಜಾಹಿಷಿಕೆ ನೀಡುತ್ತಾರೆ. ಸರಕಾರಿಶಾಲಾ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳಿಗೆ ಅತೀವ ಕಾಳಜಿ ಇರಬೇಕು, ಇಂತಹ ಗ್ರಾಮೀಣ ಶಾಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು, 60 ವರ್ಷ ತುಂಬಿದ ಈ ಶಾಲೆ ಹಳೆದಾಗಿದ್ದು ತೀರಾ ದುರಸ್ತಿಯಲ್ಲಿದೆ. ಇಲ್ಲಿಗೆ ಕೊಡಲೇ ಶಾಸಕರು, ಜನಪ್ರತಿನಿಧಿಗಳು ಗಮನಹರಿಸಿ ಹತ್ತು ಲಕ್ಷ ಅನುದಾನವನ್ನಾದರು ಕೊಡಲೇ ಕೊಡಿಸಿದಲ್ಲಿ ಶಾಲೆಯ ಹಂಚು ತೆಗೆದು ಮಾಡಿನ ಪಿಕ್ಕಾಸನ್ನೆಲ್ಲಾ ಹೊಸದಾಗಿ ಅಳವಡಿಸಿ ಗೋಡೆಯನ್ನೆಲ್ಲಾ ದುರಸ್ತಿಗೊಳಿಸಿ ಸಂಪೂರ್ಣ ದುರಸ್ತಿಗೊಳಿಸಬಹುದೆಂದು ಸಮಿತಿಯವರು ಒತ್ತಾಯಿಸಿದ್ದಾರೆ. ಈ ಬಗ್ಗೆ ಸಂಭಂದ ಪಟ್ಟಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಗಿದೆ. ಜಿ.ಪಂ.ಸದಸ್ಯರಲ್ಲೂ ವಿನಂತಿಸಿಕೊಳ್ಳಲಾಗಿದೆ ಎಂದು ಶಾಲಾ ಮುಖ್ಯ ಶಿಕ್ಷಕರಾದ ಗೋವಿಂದ ನಾಯಕ್ ಹೇಳಿದರು. ಗ್ರಾ.ಪಂ.ಮಟ್ಟದಲ್ಲೂ ಈ ಶಾಲೆಯ ಬಗ್ಗೆ ಗಮನ ಹರಿಸಿದ್ದು. ಗ್ರಾ.ಪಂ.ಮಟ್ಟದಲ್ಲಾಗುವ ಅಭಿವೃದ್ಧಿಗೆ ಸಹಕರಿಸಲಾಗುವುದೆಂದು ಸಮಿತಿಯ ಸಂಘಟನಾ ಕಾರ್ಯದರ್ಶಿ ಗ್ರಾ.ಪಂ.ಸದಸ್ಯ.ಕೆ.ಜೆ.ತೋಮಸ್ ಸಭೆಯಲ್ಲಿ ತಿಳಿಸಿದರು. ಅಲ್ಲದೇ ತಾ.ಪಂ.ಮತ್ತು ಜಿ.ಪಂ.ಸದಸ್ಯರಲ್ಲೂ ಬೇಡಿಕೆ ಇಡಲಾಗುವುದೆಂದು ಹೇಳಿದರು.
ಸಭೆಯಲ್ಲಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಪುತ್ತು ಕುಂಞಯವರು ಮಾತಾಡಿ ಹಲವಾರು ವರ್ಷಗಳಿಂದ ಈ ಮೀನಾಡಿ ಶಾಲೆಯ ಪ್ರಗತಿಗೆ ಶ್ರಮಿಸುತ್ತಿದ್ದು. ಇಲ್ಲಿಯ ಅಭಿವೃದ್ಧಿಗೆ ಸಂಬಂದ ಪಟ್ಟವರಲ್ಲಿ ನಿರಂತರ ಬೇಡಿಕೆ ಇಟ್ಟು ಆಗ್ರಹಿಸುತ್ತಾ ಬರುತ್ತಿದ್ದೇವೆ.ಗ್ರಾಮೀಣ ಬಾಗದ ಇಂತಹ ಸರಕಾರಿ ಶಾಲೆಗಳನ್ನು ಉಳಿಸಿಕೊಂಡು ಈ ಭಾಗದ ಮಕ್ಕಳ ಭವಿಷ್ಯ ರೂಪಿಸುವಲ್ಲಿ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದರು. ಸಭೆಯಅಧ್ಯಕ್ಷತೆ ವಹಿಸಿದ್ದ ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ಪಿಲಿಪ್ ರವರು ಮಾತಾಡಿ ವಜ್ರಮಹೋತ್ಸವ ಆಚರಿಸುವ ಮೂಲಕ ಈ ಶಾಲೆಯ ಸಂಪೂರ್ಣ ಅಭಿವೃದ್ಧಿಗೆ ನಾವು ವಿದ್ಯಾಭಿಮಾನಿಗಳೆಲ್ಲರೂ ಕೈ ಜೋಡಿಸಬೇಕಾಗಿದೆ. ಶಾಲೆಯ ಕಟ್ಟಡ ದುರಸ್ತಿಯೊಂದಿಗೆ ಶಾಲಾ ಹೊರಾಂಗಣ, ಕಾಂಪೌಂಡ್,ಎಲ್ಲವೂ ಆಗಬೇಕಾಗಿದೆ ಎಂದರು. ಎ.12ರಂದು ನಡೆಯಲಿರುವ ವಜ್ರಮಹೋತ್ಸವದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ, ಹಿರಿಯ ವಿಧ್ಯಾರ್ಥಿಗಳಿಗೆ, ಪೋಷಕರಿಗೆ ಊರವರಿಗೆ ಕ್ರೀಡೋತ್ಸವ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು. ಮುಖ್ಯ ಶಿಕ್ಷಕ ಗೋವಿಂದ ನಾಯಕ್ ಸ್ವಾಗತಿಸಿ, ವಂದಿಸಿದರು. ವಜ್ರಮಹೋತ್ಸವ ಸಮಿತಿಯ ಉಪಾಧ್ಯಕ್ಷರಾದ ರಮೇಶ್ ನೈಲ, ಕಿಶಾನ್ ಮೀನಾಡಿ ಆರ್ಥಿಕ ಸಮಿತಿ ಸಂಚಾಲಕ ಜನಾರ್ದನ ಸಹಸಂಚಲಕ ಟಿ.ಕೆ.ಮ್ಯಾಥ್ಯು,ಆಹಾರ ಸಮಿತಿ ಸಹಸಂಚಲಕ ಕುರಿಯನ್ ಉರುಂಬಿಲ್ ವಜ್ರಮಹೋತ್ಸವ ಸಮಿತಿ ಸಹಕಾರ್ಯದರ್ಶಿ ಸತೀಶ್ ಮೀನಾಡಿ, ಇಸ್ಮಾಯಿಲ್ ಮೀನಾಡಿ, ಬದ್ರುದ್ದೀನ್ ಮೀನಾಡಿ, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ರಹಮತ್, ಕಾರ್ಯದರ್ಶಿ ಜಂಸಿದಾ, ಸ್ವಾಗತ ಸಮಿತಿಯ ಸಹಸಂಚಾಲಕಿ ಗುಲಾಬಿ ಶೆಟ್ಟಿ ಮೊದಲಾದವರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.