ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಸಮ್ಮೇಳನ

(ನ್ಯೂಸ್ ಕಡಬ) newskadaba.com, ಪಾಂಡೇಶ್ವರ, ಡಿ.28    ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜ್‍ ಆಫ್‍ ಕಂಪ್ಯೂಟರ್ ಸೈನ್ಸ್‍ ಆ್ಯಂಡ್‍ ಇನ್ರ್ಫಾಮೇಶನ್ ಮತ್ತು ಪಶ್ಷಿಮ ಬಂಗಾಳದ ರಾಯ್‍ಘಂಜ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಿರ್ವಹಣೆ, ಸಮಾಜ ವಿಜ್ಞಾನ ಮತ್ತು ಶಿಕ್ಷಣದಲ್ಲಿ ಐ.ಸಿ,ಟಿ. ಆವಿಷ್ಕಾರ ಮತ್ತು ಅದರ ಪ್ರಭಾವ (Invention in ICT & Its Impact on Management, Social Science and Education) ಎಂಬ ವಿಷಯದ ಮೇಲೆ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವು ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಿಟಿ ಕ್ಯಾಂಪಸ್‍ನಲ್ಲಿ ಆಯೋಜಿಸಲಾಗಿತ್ತು.

Nk Kukke

ಸಮ್ಮೇಳನದ ಮುಖ್ಯಅತಿಥಿಯಾಗಿ ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕಂಪ್ಯೂಟರ್ ಸೈನ್ಸ್‍ ವಿಭಾಗದ ಫ್ರೊಫೆಸರ್ ಡಾ. ಮಂಜಯ್ಯ ಡಿ. ಹೆಚ್. ಮಾತನಾಡಿ ಪರಸ್ಪರ ಸಂವಹನೆ, ಪ್ರಸ್ತುತಿ ಹಾಗೂ ಪುಸ್ತಕಗಳನ್ನು ಪ್ರಕಟಿಸಲು ಸಮ್ಮೇಳನಗಳು ಉತ್ತಮ ವೇದಿಕೆಯನ್ನು ನೀಡುತ್ತವೆ. ಇಂದಿನ ಯುಗದಲ್ಲಿ ಎಲ್ಲವೂ ಸಾಧ್ಯ, ಅಸಾಧ್ಯವೆಂಬುವುದು ಯಾವುದೂ ಇಲ್ಲ. ಆದುದರಿಂದ ಪ್ರತಿಯೊಬ್ಬರು ಸಂಶೋಧನೆಗಳನ್ನು ನಡೆಸುವ ಮೂಲಕ ವಿವಿಧ ರೀತಿಯ ಕೊಡುಗೆಗಳನ್ನು ಸಮಾಜಕ್ಕೆ ನೀಡಬೇಕು ಎಂದರು. ರಾಯ್‍ಘಂಜ್ ವಿಶ್ವವಿದ್ಯಾಲಯದ ಎಂ.ಸಿ.ಐ.ಎಸ್.ನ ಸಂಶೋಧನಾ ಸಹಯೋಗಿ ಮತ್ತುಕಾರ್ಯನಿರ್ವಾಹಕ ನಿರ್ದೇಶಕ ಡಾ. ಪ್ರಂತೋಶ್ ಕೆ. ಪೌಲ್ ಮಾತನಾಡಿ, ಸಂಶೋಧನೆಯಲ್ಲಿ ಅಂಖ್ಯಾಂಶಗಳು ಬದಲಾಗುತ್ತಲೇ ಇರುವುದರಿಂದ ಪ್ರತಿಯೊಬ್ಬರೂ ಕೂಡ ಅಂಖ್ಯಾಂಶಗಳು ದಾಖಲಿಸುವುದು ಅವಶ್ಯಕ. ಸಂಶೋಧನಾ ಸಮ್ಮೇಳನಗಳು ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆಯ ಅನುಭವದ ಜೊತೆಗೆ ಭಾಗವಹಿಸುವ ಉತ್ತೇಜನ ನೀಡುತ್ತದೆ ಎಂದರು.

Also Read  ಕೆಪಿಸಿಸಿ ಮಾಧ್ಯಮ ವಕ್ತಾರರಾಗಿ ಆಯ್ಕೆಯಾದ ಶವಾದ್ ಗೂನಡ್ಕರವರಿಗೆ ಹುಟ್ಟೂರ ಸನ್ಮಾನ

ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ಮಾರ್ಗದರ್ಶಿ ಡಾ. ಕೆ.ವಿ.ಎಂ. ವಾರಂಬಳ್ಳಿ “ಐಟಿ ಆ್ಯಂಡ್‍ ಕಂಪ್ಯೂಟಿಂಗ್ ಫಾರ್ ಆಲ್‍ ದ ಡೋಮೈನ್ಸ್‍ ಆ್ಯಂಡ್ ಫ್ರೊಫೆಶನಲ್ಸ್ ಎಂಬ ಪುಸ್ತಕವನ್ನು ಈ ವೇಳೆ ಬಿಡುಗಡೆಗೊಳಿಸಿದರು. ಈ ಸಮ್ಮೇಳನದಲ್ಲಿ ಮಂಡಿತವಾಗಲಿರುವ ಸಂಶೋಧನಾ ಪ್ರಬಂಧಗಳ ಕೈಪಿಡಿ ಹಾಗೂ ಹಿಂದಿನ ಸಮ್ಮೇಳನದಲ್ಲಿ ಸಂಶೋಧನೆಗಳನ್ನು ಮಂಡಿಸಿದ ಸಮಗ್ರ ಪ್ರಬಂಧಗಳ ಪುಸ್ತಿಕೆಯನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು. ಈ ವೇಳೆ ವೇದಿಕೆಯಲ್ಲಿ ಶ್ರೀನಿವಾಸ್ ವಿಶ್ವವಿದ್ಯಾಲಯ ಕುಲಪತಿ ಡಾ. ಪಿ. ಎಸ್. ಐತಾಳ್, ಸಿ. ಸಿ. ಐ. ಎಸ್. ನ ಡೀನ್ ಪ್ರೊ, ಶ್ರೀಧರ ಆಚಾರ್ಯ, ಸಮ್ಮೇಳನದ ಸಂಯೋಜಕ ಪ್ರೊ, ಸುಬ್ರಮಣ್ಯ ಭಟ್ ಉಪಸ್ಥಿತರಿದ್ದರು. ಈ ಸಂದರ್ಭ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧಾ ಮಾರ್ಗದರ್ಶಿಗಳಾದ ಡಾ. ಶಶಿಧರ್ ಕೊಟ್ಯಾನ್, ಡಾ. ಸಿ. ಕೆ. ಹೆಬ್ಬಾರ್, ಡಾ. ರಮೇಶ್ ಪೈ, ಸಿ.ಸಿ.ಐ.ಸಿ, ಸಿ.ಸಿ.ಸಿ.ಹೆಚ್, ಸಿ.ಎಂ.ಸಿ.ಯ ಅಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ಎಂ.ಸಿ.ಎ. ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಮ್ಮೇಳನದಲ್ಲಿ ಕಾಲೇಜಿನ ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ತಮ್ಮ ವಿಚಾರಗಳನ್ನು ಮಂಡಿಸಿದರು. ಸಮ್ಮೇಳನದ ಸಂಯೋಜಕ ಪ್ರೊ. ಸುಬ್ರಮಣ್ಯ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಿ.ಸಿ.ಐ.ಎಸ್‍ ನ ಡೀನ್ ಪ್ರೊ. ಶ್ರೀಧರ್ ಆಚಾರ್ಯ ಸ್ವಾಗತಿಸಿ, ಅಧ್ಯಾಪಕ ಪ್ರೊ. ವೈಕುಂಠ ಪೈ ವಂದಿಸಿದರು.

Also Read  ಸರ್ಫಿಂಗ್: ಇಂದು ಚಾಲನೆ

error: Content is protected !!
Scroll to Top