ಆಲಂಕಾರು : ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ ➤ ಜನವರಿ 2ರಿಂದ 5ರವರೆಗೆ ರಜತ ಸಂಭ್ರಮ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಾರಂಭ

(ನ್ಯೂಸ್ ಕಡಬ) newskadaba.com, ಕಡಬ, ಡಿ.27    ಕಡಬ ತಾಲೂಕು ಆಲಂಕಾರು ಗ್ರಾಮದ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲಾ ರಜತ ಸಂಭ್ರಮ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಾರಂಭವು ಜನವರಿ 2ರಿಂದ ಮೊದಲ್ಗೊಂಡು 5ರವರೆಗೆ ಶಾಲಾ ವಠಾರದಲ್ಲಿ ನಡೆಯಲಿದೆ.

ಸಮಾರಂಭದ ಚಪ್ಪರ ಮುಹೂರ್ತವು ಆದಿತ್ಯವಾರ ಸಂಜೆ ಗೋಧೊಳಿ ಲಗ್ನದಲ್ಲಿ ನಡೆಯಿತು. ಅರ್ಚಕ ನಾಗರಾಜ ಭಟ್ ಸುಳ್ಯ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಆಲಂಕಾರು ಗ್ರಾಮ ಪಂಚಾಯತ್ ಸದಸ್ಯ ಕೇಶವ ಗೌಡ ಆಲಡ್ಕ ಚಪ್ಪರ ಮುಹೂರ್ತದ ಹಿನ್ನೆಲೆಯಲ್ಲಿ ತೆಂಗಿನ ಕಾಯಿ ಹೊಡೆದು ಕಾಮಗಾರಿಗೆ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಸುರೇಶ್ ಕುಮಾರ್ ಕೂಡೂರು, ಸಂಚಾಲಕ ಈಶ್ವರ ಗೌಡ ಪಜ್ಜಡ್ಕ, ಕಾರ್ಯದರ್ಶಿ ಗಂಗಾಧರ ಗೌಡ ಕುಂಡಡ್ಕ, ಜತೆ ಕಾರ್ಯದರ್ಶಿ ಶ್ರೀಧರ ಬಲ್ಯಾಯ, ಕೋಶಾಧಿಕಾರಿ ಸುಂದರ ಗೌಡ ಕುಂಡಡ್ಕ, ಸದಸ್ಯರಾದ ಎಂ ರಾಮಚಂದ್ರ ಭಟ್ ಅತ್ರಿವನ, ರಕ್ಷಕ ಶಿಕ್ಷ ಸಂಘದ ಅಧ್ಯಕ್ಷ ರಾಜಗೋಪಾಲ್ ಭಟ್, ಮುಖ್ಯ ಮಾತಾಜಿ ಕನಕಲತಾ ಎಸ್.ಎನ್ ಭಟ್, ಮೊದಲಾದವರು ಉಪಸ್ಥಿತರಿದ್ದರು.

Also Read  ಕಡಬ: ಸವಿತಾ ಸಮಾಜ ಸಮಾಲೋಚನಾ ಸಭೆ ➤ ನೂತನ ಅಧ್ಯಕ್ಷರಾಗಿ ವಸಂತ ಭಂಡಾರಿ ಮೂರಾಜೆ ಆಯ್ಕೆ

error: Content is protected !!
Scroll to Top