(ನ್ಯೂಸ್ ಕಡಬ) newskadaba.com, ಕಡಬ, ಡಿ.27 ರಾಷ್ಟ್ರೀಯ ಸೇವಾ ಯೋಜನೆಯು ನಿಸ್ವಾರ್ಥ ಸೇವಾ ಮನೋಭಾವನೆಯ ಒಬ್ಬ ಸ್ವಯಂ ಸೇವಕನನ್ನು ಹುಟ್ಟು ಹಾಕುತ್ತದೆ. ಶಿಬಿರದಲ್ಲಿ ಅನುಭವಿಸಿದ ಕೌಶಲ್ಯ, ಜೀವನ ಪಾಠ ಭವಿಷ್ಯದ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರಮೀಳಾ ಜನಾರ್ದನ ಹೇಳಿದರು. ಅಲಂಕಾರು ಶ್ರೀಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಯೋಜಿಸಿದ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಎನ್.ಎಸ್.ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು.
ಶಿಬಿರ ಉದ್ಘಾಟಿಸಿ ಮತನಾಡಿದ ಶ್ರೀ ಭಾರತಿ ಹಿ.ಪ್ರಾ.ಶಾಲೆಯ ಅಧ್ಯಕ್ಷ ಡಾ| ಸುರೇಶ್ ಕುಮಾರ್ ಕೂಡೂರು , ಪ್ರಸಕ್ತ ಕಾಲಘಟ್ಟದಲ್ಲಿ ಸಮಾಜದ ಬೆಳವಣಿಗೆಗೆ ನಿಷ್ಕಲ್ಮಶ ಸೇವೆ ಅಗತ್ಯವಾಗಿದೆ. ಎನ್ನೆಸೆಸ್ ಶಿಬಿರದಲ್ಲಿ ಜೀವನ ಪಾಠದೊಂದಿಗೆ ನಿಸ್ವಾರ್ಥ ಸೇವೆಯ ಅನುಭವ ಸಿಗುತ್ತದೆ ಎಂದರು. ತಾಲೂಕು ಪಂಚಾಯಿತಿ ಸದಸ್ಯೆ ತಾರಾ ತಿಮ್ಮಪ್ಪ ಪೂಜಾರಿ, ಪೆರಾಬೆ ಶಾಲಾ ಪ್ರಭಾರ ಮುಖ್ಯಶಿಕ್ಷಕಿ ಹೇಮಲತಾ ಪ್ರದೀಪ್ ಶುಭಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಸಂಕೀರ್ತ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ನಿರ್ದೇಶಕ ಪ್ರೋ. ವೇದವ್ಯಾಸ ರಾಮಕುಂಜ, ಶಿಬಿರ ಅನುಷ್ಟಾನ ಸಮಿತಿಯ ಗೌರವಾಧ್ಯಕ್ಷ ಚಂದ್ರಶೇಖರ ಪೂಜಾರಿ, ಶ್ರೀ ಭಾರತಿ ಹಿ.ಪ್ರಾ.ಶಾಲೆಯ ಸಂಚಾಲಕ ಈಶ್ವರ ಗೌಡ ಪಜ್ಜಡ್ಕ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾಜಗೋಪಾಲ್ ಭಟ್, ರಾಷ್ಟ್ರೀಯ ಸೇವಾ ಯೋಜನೆ ಘಟಕದ ನಾಯಕ ರಂಜಿತ್, ಉಪಸ್ಥಿತರಿದ್ದರು. ಶಿಬಿರಾಧಿಕಾರಿ ಗುರುಕಿರಣ್ ಶೆಟ್ಟಿ ಬಿ ಸ್ವಾಗತಿಸಿದರು. ಶಿಬಿರದ ನಾಯಕಿ ಗುಣಶ್ರೀ ವಂದಿಸಿದರು. ಸಹಶಿಬಿರಾಧಿಕಾರಿ ಚೇತನ್ ಎಮ್ ನಿರೂಪಿಸಿದರು.