ಡೆತ್ ನೋಟ್ ಬರೆದಿಟ್ಟು ಮಹಿಳಾ ಎಎಸ್​ಐ ಆತ್ಮಹತ್ಯೆಗೆ ಯತ್ನ ► ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಹಾವೇರಿ, ಆ.23, ಹಿರೇಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳಾ ಎಎಸ್ಐ ಡೆತ್ ನೋಟ್ ಬರೆದಿಟ್ಟು ನಿದ್ರೆ ಮಾತ್ರೆ ಸೇವಿಸಿ  ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಮಂಗಳವಾರ ನಡೆದಿದೆ.

 ಮಹಿಳಾ ಎಎಸ್ಐ ಎಂ.ಎ.ಅಸಾದಿರವರು, ನನ್ನ ಸಾವಿಗೆ ಸಿಪಿಐ ಸಂಗನಾಥ ಕಾರಣ ಅಂತಾ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ.  ಹಂಸಭಾವಿ ಠಾಣೆಯ ಎಎಸ್​ಐ ಆಗಿರುವ ಅಸಾದಿ ಅವರು ಹಿರೇಕೆರೂರು ಪಟ್ಟಣದಲ್ಲಿ ರೈತರ ಪ್ರತಿಭಟನೆ ಇದ್ದುದರಿಂದ ಬಂದೋಬಸ್ತಗೆ ಬಂದಿದ್ದರು. ಈ ವೇಳೆ ಸಿಬ್ಬಂದಿ ಡ್ಯೂಟಿಯ ಪಾಸ್​ಪೋರ್ಟ್ ಬಿಟ್ಟು ಬಂದ ಹಿನ್ನೆಲೆಯಲ್ಲಿ ಸಿಪಿಐ ಸಂಗನಾಥರಿಂದ ಕಿರುಕುಳ, ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Also Read  ಜೂ. 30ರೊಳಗೆ ಆಸ್ತಿ ವಿವರ ಸಲ್ಲಿಸುವಂತೆ 224 ಶಾಸಕರಿಗೆ ಲೋಕಾಯುಕ್ತ ಖಡಕ್ ಸೂಚನೆ

ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಎಂ.ಎ.ಅಸಾದಿ ಅವರನ್ನು ದಾವಣಗೆರೆ ಖಾಸಗಿ‌ ಆಸ್ಪತ್ರೆಗೆ ದಾಖಲಿಸಲಾಗಿದೆ.

 

error: Content is protected !!
Scroll to Top