(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.26 ಸಿರಿ ತೋಟಗಾರಿಕೆ ಸಂಘದ ವತಿಯಿಂದ ಡಿಸೆಂಬರ್ 21 ರಂದು ನಡೆಯಬೇಕಿದ್ದ ಚಾಕಲೇಟ್ ತಯಾರಿ (ಹುಟ್ಟುಹಬ್ಬ, ಹೊಸವರ್ಷ, ಕ್ರಿಸ್‍ಮಸ್ ಆಚರಣೆಗಳಲ್ಲಿ ಉಪಯೋಗಿಸುವ ಚಾಕಲೇಟ್ ತಯಾರಿ) ತರಬೇತಿ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಮುಂದೂಡಲಾಗಿದ್ದು, ತರಬೇತಿಯನ್ನು ಡಿಸೆಂಬರ್ 27 ರಂದು ಬಾಲಭವನ, ಕದ್ರಿ ಉದ್ಯಾನವನದ ಹತ್ತಿರ ಆಯೋಸಲಾಗಿದೆ.
ಆಸಕ್ತರು ಸಿರಿ ತೋಟಗಾರಿಕೆ ಸಂಘ, ಬೆಂದೂರ್‍ವೆಲ್, ಮಂಗಳೂರು ಇಲ್ಲಿ ತರಬೇತಿ ಶುಲ್ಕ ನೀಡಿ ಡಿಸೆಂಬರ್ 26 ರೊಳಗೆ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ರುಕ್ಮಯ ದೂರವಾಣಿ ಸಂಖ್ಯೆ 9845523944 ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.