ಎಣ್ಮೂರು :ಕೆಮ್ಮಲೆ (ಹೇಮಳ) ನಾಗಬ್ರಹ್ಮ ದೇವಸ್ಥಾನಕ್ಕೆ ಸರಕಾರದಿಂದ 45 ಲಕ್ಷ ಬಿಡುಗಡೆ

(ನ್ಯೂಸ್ ಕಡಬ) newskadaba.com, ಕಡಬ, ಡಿ.26   ಕಡಬ ತಾಲೂಕು ಎಣ್ಮೂರು ಗ್ರಾಮದ ಹೇಮಳ ಶ್ರೀ ನಾಗಬ್ರಹ್ಮ ದೇವಸ್ಥಾನದ ಜೀರ್ಣೊದ್ಧಾರವು ಊರ-ಪರವೂರ ಭಕ್ತರ ಸಹಕಾರದಿಂದ ನಡೆಯುತ್ತಿದ್ದು, ಆರ್ಥಿಕ ಅಡಚಣೆಯುಂಟಾದ ಸಂದರ್ಭದಲ್ಲಿ ಗ್ರಾಮಸ್ಥರು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಬೇಟಿಯಾಗಿ ಸಮಸ್ಯೆ ಹೇಳಿದಾಗ ತಕ್ಷಣ ಸ್ಪಂದಿಸಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರನ್ನು ಬೇಟಿ ಮಾಡಿಸಿ ಅನುದಾನದ ಭರವಸೆ ನೀಡಿದ್ದರು.

ಇದೀಗ ಸರಕಾರದಿಂದ ಕೆಲವೇ ದಿನಗಳಲ್ಲಿ ರೂ. 45 ಲಕ್ಷ ಅನುದಾನ ಬಿಡುಗಡೆಗೊಂಡಿದ್ದು, ದೇವಾಲಯಕ್ಕೆ ಅನುದಾನ ಒದಗಿಸಿಕೊಟ್ಟ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ ,ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮತ್ತು ಸಹಕರಿಸಿದ ಶಾಸಕ ಎಸ್. ಅಂಗಾರ ಅವರಿಗೆ ದೇವಾಲಯದ ಪರವಾಗಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯಾನಂದ ಕೆ. ಹೇಮಳ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹೊನ್ನಪ್ಪ ಐಪಳ, ಟ್ರಸ್ಟ್ ನ ಅಧ್ಯಕ್ಷ ನಾರಾಯಣ ಕೊರ್ಜೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗಂಗಾಧರ ಮಂಜುರಜೆ, ಬ್ರಹ್ಮರು ಉಳ್ಳಾಕುಲು ಆಡಳಿತ ಸಮಿತಿ ಅಧ್ಯಕ್ಷ ಅಶೋಕ್ ಎ.ಹೇಮಳ ಹಾಗೂ ಸಮಿತಿ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.

Also Read  ನೇತ್ರಾವತಿ ಸೇತುವೆಯ ಬಳಿ ನಿಗೂಢವಾಗಿ ನಾಪತ್ತೆಯಾದ ಕಡಬದ ಯುವಕ ➤ ಶೋಧ ಕಾರ್ಯ ಮುಂದುವರಿಕೆ

error: Content is protected !!
Scroll to Top