ಕೊಣಾಜೆ: ಉಚಿತ ಕಣ್ಣಿನ ತಪಾಸಣಾ ಶಿಬಿರ

(ನ್ಯೂಸ್ ಕಡಬ) newskadaba.com, ಕಲ್ಲುಗುಡ್ಡೆ, ಡಿ.26  ಕಡ್ಯ ಕೊಣಾಜೆ ಗ್ರಾ.ಪಂ. ನೇತೃತ್ವದಲ್ಲಿ ಸಂಭವ್ ಫೌಂಡೇಶನ್ 2.5 ಎನ್‍ವಿಜಿ ಐ ಮಿತ್ರ ಸುರತ್ಕಲ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) ಡಾ. ಪಿ. ದಯಾನಂದ ಪೈ ಮತ್ತು ಟಿ ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಕಡ್ಯ ಕೊಣಾಜೆ ಶ್ರೀ ದುರ್ಗಾಂಬಿಕಾ ಸಭಾಭವನದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.


ಗ್ರಾ.ಪಂ. ಅಧ್ಯಕ್ಷೆ ಬೇಬಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಸಂಭವ್ ಪೌಂಡೇಶನ್ ಮೆನೇಜರ್ ಹೇಮಚಂದ್ರ ಶಿಬಿರದ ಮಾಹಿತಿ ನೀಡಿದರು. ಗ್ರಾ.ಪಂ. ಉಪಾಧ್ಯಕ್ಷ ಯಶೋಧರ ಗೌಡ, ಸದಸ್ಯರಾದ ಪೊಡಿಯಾ ಗೌಡ, ಚಂದ್ರಾವತಿ, ಪುಷ್ಪಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಡ್ಯ ಕೊಣಾಜೆ ಒಕ್ಕೂಟ ಶ್ರೀ.ಕ್ಷೇ.ಧ.ಗ್ರಾ.ಯೋ. ಅಧ್ಯಕ್ಷ ಪುಂಡರಿಕಾಕ್ಷ, ವಿವೇಕ ಜಾಗೃತ ಬಳಗದ ಅಧ್ಯಕ್ಷ ಜನಾರ್ಧನ ಗೌಡ, ಸೇವಾಪ್ರತಿನಿಧಿ ರೂಪ, ಸ್ತ್ರೀಶಕ್ತಿ ಸಂಘದ ಸದಸ್ಯೆ ಹೇಮಲತಾ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮನಾಭ ಪಿ. ಸ್ವಾಗತಿಸಿ, ಸಿಬಂದಿ ಸತೀಶ್ ಕೆ.ಟಿ. ವಂದಿಸಿದರು. ಕೃಷ್ಣಪ್ಪ ಗೌಡ ಹಾಕೋಟೆಕಾನ ಕಾರ್ಯಕ್ರಮ ನಿರೂಪಿಸಿದರು. ಹಲವು ಗ್ರಾಮಸ್ಥರು ಶಿಬಿರದಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಂಡರು.

Also Read  ರಾಷ್ಟ್ರೀಯ ಏಕತಾ ದಿವಸ್ ಪರೇಡ್ ನಲ್ಲಿ ಕಡಬದ ಅನುಜ್ಞಾ ಭಾಗಿ


.

error: Content is protected !!
Scroll to Top