ನೂಜಿಬಾಳ್ತಿಲ ಗ್ರಾ.ಪಂ: ಹೆಣ್ಣು ಶಿಶುಪ್ರದರ್ಶನ

(ನ್ಯೂಸ್ ಕಡಬ) newskadaba.com, ಕಲ್ಲುಗುಡ್ಡೆ, ಡಿ.26   ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಪುತ್ತೂರು ಇದರ ವತಿಯಿಂದ ನೂಜಿಬಾಳ್ತಿಲ ಗ್ರಾ.ಪಂ. ಸಹಯೋಗದಲ್ಲಿ ಹೆಣ್ಣು ಮಗು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ ಅಂಗವಾಗಿ ಆರೋಗ್ಯವಂತ ಹೆಣ್ಣು ಶಿಶುಪ್ರದರ್ಶನ ಕಾರ್ಯಕ್ರಮವು ನೂಜಿಬಾಳ್ತಿಲ ಉ.ಹಿ.ಪ್ರಾ.ಶಾಲಾ ಸಭಾಂಗಣದಲ್ಲಿ ನಡೆಯಿತು.

ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವರೆಂದು ಪೂಜಿಸಲ್ಪಡುವ ಹೆಣ್ಣಿನ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದೇವೆ. ದೇಶದ ಕಣ್ಣಾಗಿರುವ ಹೆಣ್ಣು ಮಕ್ಕಳ ರಕ್ಷಣೆ ಪಾಲನೆ ಪೋಷಣೆ ನಮ್ಮ ಜವಾಬ್ದಾರಿಯಾಗಿದೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಕಡಬ ವಲಯ ಮೇಲ್ವಿಚಾರಕಿ ಹೇಮಾರಾಮ್‍ದಾಸ್ ಹೆಣ್ಣು ಮಗುವಿನ ರಕ್ಷಣೆ ಮತ್ತು ಹೆಣ್ಣು ಮಗುವನ್ನು ಓದಿಸುವ ಬಗ್ಗೆ ಇಲಾಖಾ ಮಾಹಿತಿ ನೀಡಿ, ಹೆಣ್ಣು ಮಕ್ಕಳ ರಕ್ಷಣೆಯ ಜವಾಬ್ದಾರಿಯ ಬಗ್ಗೆ ಎಲ್ಲರಿಗೂ ಪ್ರತಿಜ್ಞಾ ವಿಧಿ ಬೋಧಿಸಿದರು. ಬಳಿಕ ಮಕ್ಕಳ ತಾಯಂದಿರು ತಮ್ಮ ಆರು ತಿಂಗಳಿಂದ ಒಂದು ವರ್ಷದ ವರೆಗಿನ ಹೆಣ್ಣು ಮಕ್ಕಳನ್ನು ಆಯಾಯ ಅಂಗನವಾಡಿ ಕಾರ್ಯಕರ್ತೆಯರ ಮುಖಾಂತರ ಪ್ರದರ್ಶಿಸಿದರು. ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯ 8 ಅಂಗನವಾಡಿಗಳ ಹೆಣ್ಣು ಶಿಶು ಪ್ರದರ್ಶನ ನಡೆಯಿತು, ಇದರಲ್ಲಿ ಬದಿಬಾಗಿಲು ಕೇಂದ್ರದ ಸಾನಿದ್ಯ ಪ್ರಥಮ ಸ್ಥಾನ, ಕಲ್ಲುಗುಡ್ಡೆ ಕೇಂದ್ರದ ಪುಣ್ಯಶ್ರೀ ದ್ವಿತಿಯ ಸ್ಥಾನ, ಅಡೆಂಜ ಕೇಂದ್ರದ ಧನ್ವಿ ತೃತೀಯ ಸ್ಥಾನ, ಗೋಳಿಯಡ್ಕ ಕೇಂದ್ರದ ಶನುಷಾ, ಕಲ್ಲುಗುಡ್ಡೆ ಕೇಂದ್ರದ ತನಿಕ್ಷ, ದನನ್ಯ, ಧನ್ವಿ ಪ್ರೋತ್ಸಾಹಕ ಬಹುಮಾನ ಪಡೆದುಕೊಂಡರು.

Also Read  ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ..!


ಬಳಿಕ ಕಲ್ಲುಗುಡ್ಡೆ, ಬದಿಬಾಗಿಲು, ಬೇರಿಕೆ, ಅಡೆಂಜ, ಮೀನಾಡಿ, ನೂಜಿ, ಕುಬುಲಾಡಿ, ಗೋಳಿಯಡ್ಕ ಅಂಗನವಾಡಿ ಪುಟಾಣಿಗಳಿಂದ ವಿವಿಧ ವಿನೋದಾವಳಿಗಳು ನಡೆಯಿತು. ಆಶಾ ಕಾರ್ಯಕರ್ತೆ ಸುದಾ ಆರೋಗ್ಯ ಇಲಾಖಾ ಮಾಹಿತಿ ನೀಡಿದರು. ನೂಜಿಬಾಳ್ತಿಲ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಲಕ್ಷ್ಮಣ ಗೌಡ ಸಾಂತ್ಯಡ್ಕ, ಗ್ರಾ.ಪಂ. ಸದಸ್ಯರಾದ ಪುಷ್ಪಲತಾ, ಜಾನಕಿ, ಹೊನ್ನಮ್ಮ, ಶಾಲಾ ಪ್ರಭಾರ ಮುಖ್ಯಶಿಕ್ಷಕಿ ಲೂಸಿ, ಕಲ್ಲುಗುಡ್ಡೆ ಅಂಗನವಾಡಿ ಕೇಂದ್ರದ ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಭಾರತಿ, ಅಡೆಂಜ ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಹೇಮಲತಾ, ಗೋಳಿಯಡ್ಕ ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಭವ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆಯರಾದ ಅಮೀನ.ಕೆ, ವಾರಿಜ, ರಾಜೀವಿ ರೈ, ಪ್ರಪುಲ್ಲ ರೈ, ಸಾರಮ್ಮ, ಎಲಿಯಮ್ಮ, ಸುಮಿತ್ರ, ಹೇಮವತಿ ವಿವಿಧ ಕಾರ್ಯಕ್ರಮ ನೀಡಿ ಸಹಕರಿಸಿದರು. ಆಶಾಕಾರ್ಯಕರ್ತೆಯರಾದ ಜಯಂತಿ, ಶಿಲ್ಪಾ, ಲೀಲಾವತಿ, ಮರಿಯಮ್ಮ, ವಿನೋದ ಉಪಸ್ಥಿತರಿದ್ದರು. ನೂಜಿಬಾಳ್ತಿಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆನಂದ ಎ., ಸ್ವಾಗತಿಸಿ, ವಂದಿಸಿದರು. ನೂಜಿಬಾಳ್ತಿಲ ಶಾಲಾ ಶಾರೀರಿಕ ಶಿಕ್ಷಕ ಬಾಲಕೃಷ್ಣ ಎಂ. ಕಾರ್ಯಕ್ರಮ ನಿರೂಪಿಸಿದರು.

Also Read  ಗಾಳಿ ಮಳೆಗೆ ಮನೆಯ ಮೇಲೆ ಬಿದ್ದ ತೆಂಗಿನಮರ ➤ ಅಪಾರ ಹಾನಿ, ಓರ್ವ ಗಂಭೀರ

 

error: Content is protected !!
Scroll to Top