ಡಿ.22: ಕಲ್ಲುಗುಡ್ಡೆಯಲ್ಲಿ ಕಬಡ್ಡಿ ಪಂದ್ಯಾಟ, ಸನ್ಮಾನ

(ನ್ಯೂಸ್ ಕಡಬ) newskadaba.com, ಕಲ್ಲುಗುಡ್ಡೆ, ಡಿ.19   ನೂಜಿಬಾಳ್ತಿಲ ಕಲ್ಲುಗುಡ್ಡೆ ಅಪ್ಪೆ ಜಕ್ಕೆಲ್ ಯುವಕ ವೃಂದದ ವತಿಯಿಂದ ಕಲ್ಲುಗುಡ್ಡೆ ದಿ. ಅಂಗಾರ ಅಜಿಲ ಹಾಗೂ ದಿ. ಲಿಂಗಮ್ಮ ಅವರ ಸ್ಮರಣಾರ್ಥ ನಲಿಕೆ ಸಮಾಜ ಬಂಧುಗಳ ಮುಕ್ತ ಕಬಡ್ಡಿ ಪಂದ್ಯಾಟ ಡಿ. 22ರಂದು ಕಲ್ಲುಗುಡ್ಡೆ ನೂಜಿಬಾಳ್ತಿಲ ಸ.ಉ.ಹಿ.ಪ್ರಾ ಶಾಲೆಯಲ್ಲಿ ನಡೆಯಲಿದೆ.


ಕಾರ್ಯಕ್ರಮವನ್ನು ಹಿರಿಯ ದೈವ ನರ್ತಕ ರಾಮ ಅಜಿಲ ಉದ್ಘಾಟಿಸಲಿದ್ದು, ನೂಜಿಬಾಳ್ತಿಲ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಕಿಟ್ಟು ಕಲ್ಲುಗುಡ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್.ಡಿ.ಎಂ.ಸಿ. ಅಧ್ಯಕ್ಷ ಲಕ್ಷ್ಮಣ ಗೌಡ ಸಾಂತ್ಯಡ್ಕ, ನಿವೃತ್ತ ಶಿಕ್ಷಕ ಶ್ರೇಯಾನ್ಸ್ ಎ.ಎಚ್, ವಜ್ರಾಕ್ಷಿ ಶ್ರೀಕಾಂತ್ ಕಲ್ಮಡ್ಕ, ಕಾಂತಪ್ಪ ಕಲ್ಲುಗುಡ್ಡೆ, ಅಣ್ಣು ಕಡಬ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪ್ರಥಮ ದರ್ಜೆ ಸಹಾಯಕ ಗೋಪಾಲ ಕೆ. ವಹಿಸಲಿದ್ದು, ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ ಬಹುಮಾನ ವಿತರಿಸಲಿದ್ದಾರೆ. ಶ್ಯಾಮ್‍ರಾಜ್ ಬೋಳೋಡಿ ಸಾಧಕರನ್ನು ಸನ್ಮಾನಿಸಲಿದ್ದಾರೆ. ಸಮಾರಂಭದಲ್ಲಿ ನಿವೃತ್ತ ಸೈನಿಕರಾದ ಅಬ್ರಾಹಂ ಜಿ. ಕೊಡೆಂಕಿರಿಯಡ್ಕ, ದಿವಾಕರ ಗೌಡ ಕೇಪುಂಜ, ಕುಶಲಪ್ಪ ಗೌಡ ಶಾಂತಿಗುರಿ, ರಾಜನ್ ಬರಿಕ್ಕಳ, ರಾಜೇಂದ್ರ ಪಳಯನಡ್ಕ, ಶಿಬು ದಾನಿಯೆಲ್, ಉಮೇಶ ಕಂಚಿನಡ್ಕ, ಸೈಯದ್ ಬಶೀರ್ ಸೇರಿದಂತೆ ಹಲವು ಬಾಲ ಸಾಧಕರಾದ ಅನುಪಮ್ ಕಲ್ಲುಗುಡ್ಡೆ, ಗೌರವ್ ಜಿ.ಕೆ., ನಂದಿತಾ ಕೆ., ಗಣೇಶ್ ಕೆ., ಶ್ರಾವ್ಯ ಸುವರ್ಣ, ಪ್ರಜ್ಞಾ ಎನ್., ಸ್ವಪ್ನಾ, ರಿತಿಕ್ಷಾ, ವರ್ಷಿತ್ ರವರ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

Also Read  ಮರ್ಧಾಳ: ನೇಣುಬಿಗಿದು ಯುವಕ ಆತ್ಮಹತ್ಯೆ

error: Content is protected !!
Scroll to Top