ಬಹುಮಹಡಿ ಸಂಕೀರ್ಣ ಯೋಜನೆಗೆ ಮಾರುಕಟ್ಟೆ ಮೌಲ್ಯ ನಿಗದಿ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.19   ದ.ಕ ಜಿಲ್ಲೆ ವಿಟ್ಲ ನೋಂದಣಿ ಉಪ ಜಿಲ್ಲೆಯ ವ್ಯಾಪ್ತಿಯೊಳಗಿನ ಬಾಳೆಪುಣಿ ಗ್ರಾಮದ  ಜಿಸ್‍ಹಾನ್ ಎನ್‍ಕ್ಲೇವ್ ಎಂಬ ಹೊಸ ಯೋಜನೆಯ ಬಹುಮಹಡಿ ಕಟ್ಟಡಕ್ಕೆ ಚದರ ಮೀಟರ್ ಒಂದಕ್ಕೆ ರೂ.21300/- ರಂತೆ ಮಾರುಕಟ್ಟೆ ದರವನ್ನು ನಿಗದಿಪಡಿಸಿದ್ದು, ಪರಿಷ್ಕೃತ ದರಪಟ್ಟಿ ಕರಡು ಪ್ರತಿಯನ್ನು ಸಾರ್ವಜನಿಕರ ಅವಗಾಹನೆಗೆ ತರಲು ವಿಟ್ಲ ಉಪನೋಂದಣಿ ಕಚೇರಿಯ ಸೂಚನಾ ಫಲಕದಲ್ಲಿ ಡಿಸೆಂಬರ್ 13 ರಂದು ಪ್ರಕಟಿಸಲಾಗಿದೆ.


ಸಾರ್ವಜನಿಕರು ಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ 15 ದಿನದ ಒಳಗೆ ಸದಸ್ಯ ಕಾರ್ಯದರ್ಶಿಗಳು, ಮಾರುಕಟ್ಟೆ ಮೌಲ್ಯ ಮಾಪನ ಉಪಸಮಿತಿ ವಿಟ್ಲ ಹಾಗೂ ಉಪನೋಂದಣಾಧಿಕಾರಿ ವಿಟ್ಲ ಇವರಿಗೆ ಸಲ್ಲಿಸಬೇಕು ಎಂದು ಉಪನೋಂದಣಾಧಿಕಾರಿ ವಿಟ್ಲ, ದ.ಕ ಜಿಲ್ಲೆ ಇವರ ಪ್ರಕಟಣೆ ತಿಳಿಸಿದೆ.

Also Read  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾವತಿಯಿಂದ ➤ಉದರ ದರ್ಶಕ ಶಸ್ತ್ರ ಚಿಕಿತ್ಸೆ

error: Content is protected !!
Scroll to Top