ಅಂಗನವಾಡಿಗಳಿಗೆ ಆಹಾರ ಸಾಗಾಣಿಕೆ : ಟೆಂಡರ್ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.19   ಬಂಟ್ವಾಳ ಶಿಶು ಅಭಿವೃದ್ಧಿ ಯೋಜನೆಯ ಅಂಗನವಾಡಿ ಕೇಂದ್ರಗಳಿಗೆ ವಿತರಿಸಲು ಭಾರತೀಯ ಆಹಾರ ನಿಗಮದಿಂದ 2019-20ರ ಸಾಲಿಗೆ ಬಿಡುಗಡೆಯಾಗುವ ಬಿಪಿಎಲ್ ಅಕ್ಕಿ ಮತ್ತು ಗೋಧಿಯನ್ನು ಭಾರತೀಯ ಆಹಾರ ನಿಗಮದ ಮರೋಳಿ, ಮಣ್ಣಗುಡ್ಡೆ ಮತ್ತು ಬೈಕಂಪಾಡಿ ಗೋದಾಮುಗಳಿಂದ,  ಉಡುಪಿಯ ಪೆರಂಪಳ್ಳಿ ಗೋದಾಮಿನಿಂದ, ಶಿವಮೊಗ್ಗದ ಗಾಡಿಕೊಪ್ಪ, ತಾವರೆಕೊಪ್ಪ, ಮಾಚರಹಳ್ಳಿ ಗೋದಾಮುಗಳಿಂದ ಹಾಗೂ  ಭದ್ರಾವತಿಯ ಗೋದಾಮಿನಿಂದ ಎತ್ತುವಳಿ ಮಾಡಿಕೊಂಡು ಬಂಟ್ವಾಳ ತಾಲೂಕು ಎಂ.ಎಸ್.ಪಿ.ಸಿ., ಬಸ್ತಿಕೋಡಿ ಗ್ರಾಮ, ವಾಮಪದವು, ಬಂಟ್ವಾಳ ತಾಲೂಕು, ಇಲ್ಲಿಯ ಗೋದಾಮುಗಳಿಗೆ 2019-20 ರ ಸಾಲಿಗೆ ಅಥವಾ ಮುಂದಿನ ಆದೇಶದವರೆಗೆ ಸಾಗಾಣಿಕೆ ಮಾಡಲು ಆಸಕ್ತಿಯುಳ್ಳ 6 ಸ್ವಂತ ವಾಹನ ಹೊಂದಿರುವ ಸಂಸ್ಥೆ ಯಾ ಸ್ಥಳೀಯ ಸಾಗಾಣಿಕಾ ಗುತ್ತಿಗೆದಾರರಿಂದ ಮೊಹರಾದ ಟೆಂಡರನ್ನು ದ್ವಿ-ಲಕೋಟೆ ಪದ್ದತಿಯಲ್ಲಿ  ಅರ್ಜಿ ಆಹ್ವಾನಿಸಲಾಗಿದೆ.

Also Read  ಬೆಳ್ತಂಗಡಿ: ಕಿಡಿಗೇಡಿಗಳಿಂದ ಮಸೀದಿಗೆ ಬಿಯರ್ ಬಾಟಲಿ ಎಸೆದು ದುಷ್ಕೃತ್ಯ..!


ಟೆಂಡರ್ ಅರ್ಜಿ ಪಡೆದುಕೊಳ್ಳಲು ಕೊನೆಯ ದಿನ ಡಿಸೆಂಬರ್ 26. ಟೆಂಡರ್ ಅರ್ಜಿ ಸಲ್ಲಿಸಲು ಕೊನೆಯ ದಿನ ಡಿಸೆಂಬರ್ 31 ರಂದು ಮಧ್ಯಾಹ್ನ 1 ಗಂಟೆ. ಟೆಂಡರನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ಬಂಟ್ವಾಳ ಈ ಕಚೇರಿಯಲ್ಲಿ 2020, ಜನವರಿ 1 ರಂದು ಮಧ್ಯಾಹ್ನ 3 ಗಂಟೆಗೆ ತೆರೆಯಲಾಗುವುದು. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ದೂರವಾಣಿ ಸಂಖ್ಯೆ- 8255-232465 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಲು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ಬಂಟ್ವಾಳ ಇವರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top