(ನ್ಯೂಸ್ ಕಡಬ) newskadaba.com, ಕಡಬ, ಡಿ.19 ಕ.ರ.ವೇ ಸ್ವಾಭಿಮಾನಿ ಬಣ ಕಡಬ ತಾಲೂಕು ಘೋಷಣಾ ಸಮಾವೇಷವು ಡಿ.17 ರಂದು ಕಡಬ ಅಂಬೇಡ್ಕರ್ ಭವನದಲ್ಲಿ ನಡೆಯಿತು.ಕ.ರ.ವೇ ಸ್ವಾಭಿಮಾನಿ ಬಣ ರಾಜ್ಯ ಅದ್ಯಕ್ಷ ಕೃಷ್ಣೇ ಗೌಡ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಡಿನ ಕಟ್ಟಕಡೆಯ ಜನರನ್ನು ಮುಖ್ಯ ವಾಹಿನಿಗೆ ತರುವುದೇ ಸಂಘಟನೆಯ ಮುಖ್ಯ ಉದ್ದೇಶವಾಗಿದೆ. ಸಮಾಜದಲ್ಲಿ ನೊಂದ ಜನರ ಬದುಕನ್ನು ಕಟ್ಟಲು ನೆರವಾಗುವ ಮೂಲಕ ಸಂಘಟನೆಗಳು ತಮ್ಮ ಬದ್ದತೆಯನ್ನು ಕಾಯಬೇಕು.ಸಾಮಾಜಿಕವಾಗಿ ಹೋರಾಟ ಮಾಡಿ ಸಾಂತ್ವಿಕ ಅಂತ್ಯ ಕಂಡ ನಮ್ಮ ಸಂಘಟನೆ ಈಗ ರಾಜ್ಯಾದ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದೆ.ತಮ್ಮ ತಮ್ಮ ಸ್ವಾರ್ಥಕ್ಕಾಗಿ ಅದಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಜನಪ್ರತಿನಿದಿಗಳಿಂದಾಗಿ ಅಭಿವೃದ್ಧಿ ಕುಂಟಿತ ಗೊಂಡಿದ್ದು ತಮ್ಮ ಹೊಟ್ಟೆ ತುಂಬಿಸಲು ರಾಜಕಾರಣಿಗಳು ಹವನಿಸುತ್ತಿದ್ದಾರೆ ಎಂದು ಹೇಳಿದ ಅವರು ಪ್ರವಾಹ ಪೀಡಿತರಲ್ಲಿಗೆ ಯಾವುದೇ ಜನ ಪ್ರತಿನಿದಿ ತೆರಳಿ ಅವರಿಗೆ ಸ್ಪಂದಿಸಲು ಮುಂದಾಗಲಿಲ್ಲ. ಇದರಿಂದ ರಾಜಕೀಯ ಯಾವಮಟ್ಟದಲ್ಲಿ ಮುನ್ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.
ಒಬ್ಬ ಕಾರ್ಯಕರ್ತನಾಗಿ ಎಲ್ಲರನ್ನು ಒಟ್ಟಾಗಿಸಿ ಕೊಂಡು ಸಂಘನಾತ್ಮಕವಾಗಿ ಸಂಘಟನೆಯನ್ನು ಬೆಳೆಸುತ್ತಾ ಜನರ ಸಮಸ್ಯಗಳಿಗೆ ಸ್ಪಂದಿಸುತ್ತಾ ಯಾವುದೇ ಕಠಿಣ ಸಂದರ್ಭ ಬಂದರೂ ಹೋರಾಟದ ಮೂಲಕ ಜಯಶೀಲರಾಗಿದ್ದೇವೆ.ಸಂಘಟನೆ ಯಾವತ್ತು ನಿಂತ ನೀರಾಗದೆ ಮುಂದೆ ಸಾಗಬೇಕು. ಕೃಷ್ಣೇ ಗೌಡ .ಕ.ರ.ವೇ ಸ್ವಾಭಿಮಾನಿ ಬಣ ರಾಜ್ಯ ಅದ್ಯಕ್ಷ ಘೋಷಣಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಕ.ರ.ವೇ ಸ್ವಾಭಿಮಾನಿ ಬಣ ಕರಾವಳಿ ವಿಭಾಗೀಯ ಅದ್ಯಕ್ಷ ಮೊಹಮ್ಮದ್ ಹಾಜಿ ಕುಕ್ಕುವಳ್ಳಿ ಕನ್ನಡದ ಉಳಿವಿಗಾಗಿ ಕಾರ್ಮಿಕರ, ಬಡವರ, ದೀನ ದಲಿತರ, ನೊಂದವರ, ದೌರ್ಜನ್ಯಕ್ಕೊಳಗಾದವರ ಕಣ್ಮಣಿ ಯಾಗಿ ನಿಲ್ಲಲು ನಿಮ್ಮೆಲ್ಲರ ಸಹಕಾರದಿಂದ ಸಾದ್ಯವಾಗಿದ್ದು ಮುಂದೆಯು ಸದಾ ನಿಮ್ಮೊಂದಿಗಿದ್ದು ನ್ಯಾಯಕ್ಕಾಗಿ ಹೋರಾಡಲು ಸಿದ್ದರಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಕ.ರ.ವೇ ಸ್ವಾಭಿಮಾನಿ ಬಣದ ರಾಜ್ಯ ಗೌರವ ಅದ್ಯಕ್ಷ ಉಮರ್ ಹಾಜಿರವರು ಮಾತನಾಡಿ ಶುಭ ಹಾರೈಸಿದರು. ಕ.ರ.ವೇ ಸ್ವಾಭಿಮಾನಿ ಬಣ ರಾಮನಗರ ಜಿಲ್ಲಾ ಅದ್ಯಕ್ಷ ಶಿವು ಗೌಡ ಕ.ರ.ವೇ ಸ್ವಾಭಿಮಾನಿ ಬಣದ ಉದ್ದೇಶವನ್ನು ವಿವರಿಸಿದರು. ಕ.ರ.ವೇ ಸ್ವಾಭಿಮಾನಿ ಬಣ ರಾಮನಗರ ಜಿಲ್ಲಾ ಕಾರ್ಯದರ್ಶಿ ರೇಣುಕಾ ಪ್ರಸಾದ್ ಕ.ರ.ವೇ ಸ್ವಾಭಿಮಾನಿ ಬಣ ಕೊಢಗು ಜಿಲ್ಲಾ ಆದ್ಯಕ್ಷ ಉನೈಸ್ ಪೆರಾಬೆ, ಮಾಜಿ ಮಂಡಲ ಅದ್ಯಕ್ಷ ಹರೀಶ್ ರೈ ನಡುಮಜಲು, ಕ.ರ.ವೇ ಸ್ವಾಭಿಮಾನಿ ಬಣ ಕಾರ್ಯಕರ್ತರಾದ ಜಗದೀಶ್ ಪಡ್ಪು, ಮೊಹಮ್ಮದ್ ಅಲೀ ಹೊಸಮಠ,ಮೊದಲಾದ ನಾಯಕರು ಕಾರ್ಯಕ್ರಮದಲ್ಲಿ ಸಂದೇಶ ಭಾಷಣ ಮಾಡಿದರು. ವೇದಿಕೆಯಲ್ಲಿ ಕ.ರ.ವೇ ಸ್ವಾಭಿಮಾನಿ ಬಣ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಮಿದ್ ಕೊಮ್ಮೆಮಾರು,ಬೆಳಂದೂರು ಗ್ರಾ ಪಂ ಮಾಜಿ ಆದ್ಯಕ್ಷ ನಜೀರ್ ದೇವಸ್ಯ ,ಕಡಬ ಸಹಕಾರಿ ಸಂಘದ ಮಾಜಿ ಆದ್ಯಕ್ಷ ಚಂದ್ರ ಶೇಖರ ಗೌಡ ಕೋಡಿಬೈಲ್, ಪ್ರಮುಖರಾದ ಮೋಹನ್ ಗೌಡ ಪಂಜೋಡಿ ಡಾ.ತಿಳಕ್ ಸುಬ್ರಮಣ್ಯ, ನ್ವಿವ್ಯತ ಪ್ರಿನ್ಸಿಪಾಲ್ ದಿನೇಶ್ ಸುಬ್ರಮಣ್ಯ, ಹರಿಪ್ರಸಾದ್ ಎನ್ಕಾಜೆ ಆಸಿಫ್ ತಂಬುತಡ್ಕ ವೇದಿಕೆಯಲಿ ಉಪಸ್ಧಿತರಿದ್ದರು. ಕ.ರ.ವೇ ಸ್ವಾಭಿಮಾನಿ ಬಣ ಜಿಲ್ಲಾ ಸಂಚಾಲಕ ಹಾಜಿ ಸೈಯದ್ ಮೀರಾ ಸಾಹೆಬ್ ಸ್ವಾಗತಿಸಿ ಪ್ರಸ್ತಾಪಿಕವಾಗಿ ಮಾತನಾಡಿದರು. ಕಡಬ ತಾಲೂಕು ಆದ್ಯಕ್ಷ ಜಲೀಲ್ ಬೈತಡ್ಕ ವಂದಿಸಿದರು.ಮುಬಾರಕ್ ಕಾರ್ಯಕ್ರಮವನ್ನು ನಿರೂಪಿಸಿದರು. ಕ.ರ.ವೇ ಸ್ವಾಭಿಮಾನಿ ಬಣ ಕಡಬ ತಾಲೂಕು ಪ್ರ.ಕಾರ್ಯದರ್ಶಿ ಫೈಝಲ್ ಎಸ್.ಇ.ಎಸ್ ಸಹಕರಿಸಿದರು.
ಘೋಷಣಾ ಸಮಾವೇಷದಲ್ಲಿ ನೂತನವಗಿ ಸೇರ್ಪಡೆಗೊಂಡ ಪದಾದಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಕ.ರ.ವೇ ಸ್ವಾಭಿಮಾನಿ ಬಣ ರಾಜ್ಯ ಅದ್ಯಕ್ಷ ಕೃಷ್ಣೇ ಗೌಡ ಕ.ರ.ವೇ ಸ್ವಾಭಿಮಾನಿ ಬಣದ ಶಾಲು ಹೊದಿಸಿ ಗೌರವಿಸಿದರು.
ಮನವಿ ಸಲ್ಲಿಕೆ
1. ಈ ಹಿಂದಿನ ರಾಜ್ಯ ಸಮ್ಮಿಶ್ರ ಸರಕಾರ ರೈತರ ಸಾಲ ಮನ್ನಾ ಮಾಡಿದ್ದು ಇನ್ನೂ ಹಲವರಿಗೆ ಮನ್ನಾದ ಸೌಲಬ್ಯ ಸಿಗದೆ ಸಂಕಷ್ಟದಲ್ಲಿದ್ದಾರೆ. ಹಿಂದಿನ ಸರಕಾರ ಸಾಲ ಮನ್ನಾ ಋಣ ಪತ್ರ ನೀಡಿದ್ದು ರೈತರು ಸಹಕಾರಿ ಸಂಘಕ್ಕೆ, ಬ್ಯಾಂಕಿಗೆ ಅಲೆದಾಡುತಿದ್ದಾರೆ.
2. ಕಡಬ ತಾಲೂಕು ಸಮುದಾಯ ಅಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಕೊರತೆ ಇದೆ.
3. ಋಣ ಮುಕ್ತ ಕಾಯ್ದೆ ಅಡಿ ಖಾಸಗಿ ಸಂಸ್ಥೆಗಳ ವಿರುದ್ದ ಹೋರಾಟ ಮಾಡುವಂತೆ ಜಿಲ್ಲಾ ಸಂಚಾಲಕ ಹಾಜಿ ಸ್ಯೆಯದ್ ಮೀರಾ ಸಾಹೆಬ್ ಮನವಿ ಮಾಡಿ ಕೊಂಡರು.