ಅನಾರು-ಪಟ್ರಮೆ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

(ನ್ಯೂಸ್ ಕಡಬ) newskadaba.com, ಕೊಕ್ಕಡ, ಡಿ.18  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ ಟ್ರಸ್ಟ್ ಬೆಳ್ತಂಗಡಿ. ಇದರ ಮಾರ್ಗದರ್ಶನದಲ್ಲಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಅನಾರು-ಪಟ್ರಮೆ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸಮರ್ಪಣಾ ಸಭಾಭವನ ಅನಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಡಿ.15 ರಂದು ನಡೆಯಿತು.

Nk Kukke

ಕಾರ್ಯಕ್ರಮವನ್ನು ಅನಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ನಿತೇಶ್ ಬಲ್ಲಾಳ್ ಉಳಿಯಬೀಡು ಇವರು ಉದ್ಘಾಟಿಸಿದರು. ಪಟ್ರಮೆ ಗ್ರಾಮ ಪಂಚಾಯತ್ ಅಧ್ಯಕ್ಷ ನವೀನ್ ಕಜೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪಟ್ರಮೆ ಆಡಳಿತ ಮೊಕ್ತೇಸರರಾದ ಶ್ರೀಧರ ಶಬರಾಯ ಭಾಗವಹಿಸಿದರು, ಬೆಳ್ತಂಗಡಿ ಯೋಜನಾಧಿಕಾರಿ ಜಯಕರ ಶೆಟ್ಟಿ, ವಲಯ ಜನಜಾಗೃತಿ ಅಧ್ಯಕ್ಷ ಮೋಹನ್ ಗೌಡ, ಮೇಲ್ವಿಚಾರಕ ಆದಿತ್ಯ, ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷರಾದ ರಾಮಣ್ಣ ಗೌಡ, ವಿಠಲ ಗೌಡ, ನೂತನ ಅಧ್ಯಕ್ಷರಾದ ಆನಂದ ಗೌಡ, ಶಶಿ, ಸದಸ್ಯರಾದ ನೀಲಮ್ಮ, ಗಿರಿಜಾ ಹಾಗೂ ಸೇವಾಪ್ರತಿನಿಧಿಗಳಾದ ಸದಾಶಿವ, ಶ್ರೀನಿವಾಸ ಮುಂತಾದವರು ಉಪಸ್ಥಿತರಿದ್ದರು.

Also Read  ವೃದ್ಧ ಮಹಿಳೆಯ ಮೇಲೆ ಹಂದಿಗಳ ದಾಳಿ

 

error: Content is protected !!
Scroll to Top