ವಿಶೇಷ ಘಟಕ ಯೋಜನೆಯಡಿ ಯಕ್ಷಗಾನ ತರಬೇತಿ ನೀಡಲು ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.18    ಕರ್ನಾಟಕ ಯಕ್ಷಗಾನ ಅಕಾಡೆಮಿಯು ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ  ಜಾತಿಯ ಪ್ರತಿಭಾವಂತ ಶಿಬಿರಾರ್ಥಿಗಳಿಗೆ 2019-20 ನೇ ಸಾಲಿನಲ್ಲಿ 5 ತಿಂಗಳ ಯಕ್ಷಗಾನ ತರಬೇತಿ ಶಿಬಿರಗಳನ್ನು ನಡೆಸಲು ಹಾಗೂ  ಪರಿಕರಗಳೊಂದಿಗೆ ಪ್ರದರ್ಶನ ನೀಡಲಿದೆ.

ಯಕ್ಷಗಾನ ಕಲಾಪ್ರಕಾರಗಳಲ್ಲಿ (ತೆಂಕಿತಿಟ್ಟು/ಬಡಗತಿಟ್ಟು ಯಕ್ಷಗಾನ, ಬಡಾಬಡಗುತಿಟ್ಟು ಯಕ್ಷಗಾನ, ಮೂಡಲಪಾಯ ಯಕ್ಷಗಾನ, ಕೇಳಿಕೆ, ಘಟ್ಟದಕೋರೆ, ಯಕ್ಷಗಾನ ಗೊಂಬೆಯಾಟತಾಳಮದ್ದಲೆ) ತರಬೇತಿ ನೀಡಬಯಸುವ  ಪರಿಶಿಷ್ಟ ಜಾತಿಗೆ ಸೇರಿದ ಪ್ರತಿಭಾವಂತ ಹಿರಿಯ ಪ್ರತಿಷ್ಠಿತ ಯಕ್ಷಗಾನದ ಗುರುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಕಾಡೆಮಿಯಲ್ಲಿ  ಸ್ವೀಕೃತವಾದ ಅರ್ಜಿಗಳನ್ನು ಅಕಾಡೆಮಿಯ ಉಪಸಮಿತಿ ಸಭೆಯಲ್ಲಿ ಗುರುಗಳ ಸಂದರ್ಶನ ಮಾಡುವುದರ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಜಿ ನಮೂನೆ ಪ್ರತಿಯನ್ನು ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು ಅಕಾಡೆಮಿ ಕಚೇರಿಗೆ ಕಳುಹಿಸಬೇಕು. ತರಬೇತಿ ನೀಡಬಯಸುವ ಹೆಸರಾಂತ ಯಕ್ಷಗಾನ ಕಲಾಸಂಸ್ಥೆಯವರು/ಪರಿಶಿಷ್ಟ ಜಾತಿಯ ಗುರುಗಳು ಅಥವಾ ಹೆಸರಾಂತ ಗುರುಗಳು ಶಿಬಿರಾರ್ಥಿಗಳ ವಿವರಗಳೊಂದಿಗೆ ಅರ್ಜಿಯನ್ನು ಭರ್ತಿಮಾಡಿ ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಚಾಲುಕ್ಯ ವಿಭಾಗ ಜೆಸಿ ರಸ್ತೆ ಬೆಂಗಳೂರು ಇಲ್ಲಿಗೆ ಜನವರಿ 11 ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-22113146 ನ್ನು ಸಂಪರ್ಕಿಸಬಹುದು ಎಂದು ರಿಜಿಸ್ಟ್ರಾರ್ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ► ಜನಪದ ವಾಗ್ಮಿ ದಯಾನಂದ ಕತ್ತಲ್ಸರ್ ಗೆ ಕಾಂಗ್ರೆಸ್ ಗಾಳ ► ಬಿಜೆಪಿ ನಾಯಕರಿಗೆ ತಳಮಳ

error: Content is protected !!
Scroll to Top