ಮೀನಾಡಿ ಶಾಲೆ: ವಜ್ರಮಹೋತ್ಸವ ಪೂರ್ವಭಾವಿ ಸಭೆ

(ನ್ಯೂಸ್ ಕಡಬ) newskadaba.com, ಕಡಬ, ಡಿ.17    ರೆಂಜಿಲಾಡಿ ಗ್ರಾಮದ ಮೀನಾಡಿ ಶಾಲೆಗೆ 60 ವರ್ಷ ತುಂಬಿದ್ದು ವಿಜೃಂಬಣೆಯಿಂದ ವಜ್ರಮಹೋತ್ಸವ ನಡೆಸುವುದಾಗಿ ರವಿವಾರ ಶಾಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.


ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಮಂಜುನಾಥ ಭಂಡಾರಿ ಶುಭಹಾರೈಸಿದರು. ಅಧ್ಯಕ್ಷರಾಗಿ ಆಯ್ಕೆಗೊಂಡ ನಿವೃತ್ತ ಸೇನಾನಿ ಫಿಲಿಪ್ ಮಾತನಾಡಿ, ನಾವು ಸೇರಿದಂತೆ ಹಲವರು ಇಲ್ಲಿ ಕಲಿತು ದೇಶದಾದ್ಯಂತ ಬೇರೆ ಬೇರೆ ಹುದ್ದೆಗಳನ್ನು ಅಲಂಕರಿಸಿ ದುಡಿಯುತ್ತಿದ್ದಾರೆ. ವಜ್ರಮಹೋತ್ಸವ ಸಂಭ್ರಮ ಕಾರ್ಯಕ್ರಮದ ಯಶಸ್ಸಿಗೆ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ.ಸಿ. ಅಧ್ಯಕ್ಷ ಪುತ್ತುಕುಂಞ ಮಾತನಾಡಿ, ನನ್ನ ಅವಧಿಯಲ್ಲಿಯೇ ಸುವರ್ಣಮಹೋತ್ಸವ ನಡೆದಿದ್ದು, ಇದೀಗ ವಜ್ರಮಹೋತ್ಸವ ನಡೆಯುತ್ತಿರುವುದು ಅತೀ ಸಂತೋಷದ ವಿಚಾರ. ಎಲ್ಲರ ಸಹಕಾರದಿಂದ ವಿಜೃಂಬಣೆಯಿಂದ ವಜ್ರಮಹೋತ್ಸವ ಆಚರಿಸೋಣ ಎಂದರು. ನೂಜಿಬಾಳ್ತಿಲ ಗ್ರಾ.ಪಂ. ಸದಸ್ಯ ಕೆ.ಜೆ. ತೋಮಸ್, ಸಜಿ ಒ.ಕೆ. ಮಾತನಾಡಿದರು. ಸಭೆಯಲ್ಲಿ ಗ್ರಾಮಸ್ಥರು, ಹಳೆವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಪಾಲ್ಗೊಂಡು ಸಲಹೆ ಸೂಚನೆ ನೀಡಿದರು. ಶಿಕ್ಷಕ ಪ್ರಿಯ ಸ್ವಾಗತಿಸಿ, ನೂಜಿಬಾಳ್ತಿಲ ಸಿ.ಆರ್.ಪಿ. ಮೀನಾಡಿ ಶಾಲಾ ಮುಖ್ಯ ಶಿಕ್ಷಕ ಗೋವಿಂದ ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Also Read  ➤ ಕಡಬ ಶಿವಾರು ರಕ್ಷಿತಾರಣ್ಯದ ಹಳೆನೇರೆಂಕಿ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಹರಡುತ್ತಿರುವ ಬೆಂಕಿ

error: Content is protected !!
Scroll to Top