ಉಪ್ಪಿನಂಗಡಿ : ಅನುಸ್ಮರಣೆ ಹಾಗೂ ಪ್ರಚಾರ ಸಮ್ಮೇಳನ

(ನ್ಯೂಸ್ ಕಡಬ) newskadaba.com, ಉಪ್ಪಿನಂಗಡಿ, ಡಿ.18.  ವರಕ್ಕಲ್ ಮುಲ್ಲ ಕೋಯಾ ತಂಗಳ್ ರವರು ಸ್ಥಾಪಿಸಿದ ಸಮಸ್ತವನ್ನು ಉಳಿವಿಗೆ ಶ್ರಮಿಸಬೇಕೆಂದು ದ ಕ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹೇಳಿದರು. ಉಪ್ಪಿನಂಗಡಿ ರೇಂಜ್ ಜಂ-ಇಯ್ಯತುಲ್ ಮಅಲ್ಲೀಮೀನ್, ಮದ್ರಸ ಮ್ಯಾನೇಜ್ಮೆಂಟ್ ಎಸ್.ಕೆ.ಎಸ್.ಎಸ್ ಎಫ್ ಉಪ್ಪಿನಂಗಡಿ ವಲಯ ಮಾಲಿಕ್ ದಿನಾರ್ ಜುಮಾ ಮಸೀದಿ ಉಪ್ಪಿನಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ಶಂಸುಲ್ ಉಲಮಾ, ಮಿತ್ತಬೈಲ್ ಉಸ್ತಾದ್, ಎಂ ಎ ಖಾಸಿಂ ಮುಸ್ಲಿಯಾರ್ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಹಾಗೂ ಸಮಸ್ತ ಜಂ-ಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ 60ನೇ ವಾರ್ಷಿಕ ಮಹಸಮ್ಮೇಳನದ ಪ್ರಚಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾರತೀಯ ಮುಸಲ್ಮಾನರಿಗೆ ಪೌರತ್ವ ನೀಡುವ ಅಗತ್ಯವಿಲ್ಲ, ಪೌರತ್ವ ಪಡೆಯಲು ನಾವು ಗುಲಾಮರಲ್ಲ ಎಂದು ಅಡ್ವೋಕೇಟ್ ಮೊಹಮ್ಮದ್ ಹನೀಫ್ ಹುದವಿ ಸಮ್ಮೇಳನದ ಪ್ರಮೇಯ ಭಾಷಣದಲ್ಲಿ ಹೇಳಿದರು. ನಮ್ಮ ಪೌರತ್ವ ಎದೆಯಲ್ಲಿರುವ ಬ್ರಿಟಿಷರ ಬೂಟಿನ ಮುದ್ರೆಯಲ್ಲಿ ನಮ್ಮ ಪೌರತ್ವ ಎಂದು ಪ್ರೊ ಅನೀಸ್ ಕೌಸರಿ ಹೇಳಿದರು. ಮುಅಲ್ಲಿಮರು ಸಮುದಾಯದ ಸೊತ್ತು ಎಂದು ಮುಹಮ್ಮದ್ ಹನೀಫ್ ನಿಝಾಮಿ ಮುಖ್ಯ ಭಾಷಣ ಹೇಳಿದರು. ಎಸ್.ಬಿ ಮೊಹಮ್ಮದ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು. ಅನುಸ್ಮರಣ ಭಾಷಣವನ್ನು ಬಿ ಕೆ ಅಬ್ದುಲ್ ಖಾದರ್ ಬಂಬ್ರಾಣ ಮಾಡಿದರು. ಸಯ್ಯದ್ ಝೃನುಲ್ ಆಬಿದಿನ್ ಜಿಫ್ರಿ ತಂಗಳ್ ಬೆಳ್ತಂಗಡಿ ಮತ್ತು ಉಪ್ಪಿನಂಗಡಿ ನಜೀರ್ ಅಝಹರಿ ಪ್ರಸ್ತುವಿಕ ಭಾಷಣ ಮಾಡಿದರು. ಕೆ ಎಂ ಅಬ್ದುಲ್ ಶುಕುರ್ ದಾರಿಮಿ ಎಸ್ ಕೆ ಐ ಎಂ ಸಿ ಸಿ ಸವಿಸ್ತಾರವಾ ವಿವರಿಸಿದರು.
ಕೇಂದ್ರ ಮುಶಾವರ ಇದರ ಸದಸ್ಯರಾಗಿ ಆಯ್ಕೆ ಆದ ಬಂಬ್ರಾಣ ಉಸ್ತಾದ್ ರನ್ನು ಸನ್ಮಾನಿಸಲಾಯಿತು.

Also Read  ಮತದಾರರಿಗೆ ಆಮಿಷ, ನಗದು, ಕುಕ್ಕರ್‌, ಹೆಲ್ಮೆಟ್‌, ದಿನಸಿ ಕಿಟ್‌ಗಳ ಜಪ್ತಿ..!

ಮೊಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಅಬ್ದುರ್ರಹ್ಮಾನ್ ಹಾಜಿ ಕೊಲ್ಲೆಜಾಲ್, ಯೂಸುಫ್ ಹಾಜಿ ಉಪ್ಪಿನಂಗಡಿ, ಅಬ್ದುಲ್ ಶುಕೂರ್ ಹಾಜಿ ಉಪ್ಪಿನಂಗಡಿ, ಮೊಹಮ್ಮದ್ ಅಶ್ರಫ್ ಬಾಖವಿ, ಮೊಹಮ್ಮದ್ ಹನೀಫ್ ಮುಸ್ಲಿಯಾರ್ ಮುಫತೀಶ್, ಅಬ್ದುಲ್ ರಶೀದ್ ರಹಾಮನಿ ಕೋಲ್ಪೆ, ಅಶ್ರಫ್ ಹಾಜಿ ಪೆದಮಲೆ, ನಜಿರ್ ಮಠ, ಕೆ ಎಮ್ ಫೈಝಿ ಕರಾಯ, ಅಶ್ರಫ್ ಹನೀಫಿ, ಇಸ್ಮಾಯಿಲ್ ತಂಗಳ್ ಉಪ್ಪಿನಂಗಡಿ, ಸಿರಾಜುದ್ದೀನ್ ಫೈಝಿ, ಶಬೀರ್ ಕೆಂಪಿ, ಸಾದಿಕ್ ಕೆಂಪಿ, ಯೂಸುಫ್ ಹಾಜಿ ಪೆದಮಲೆ, ಹಾರೂನ್ ಹಾಜಿ ಅಗ್ನಾಡಿ, ಮೊಹಮ್ಮದ್ ಕೂಟೇಲ್, ಅಬ್ದುಲ್ ರಝಕ್ ಹೆಂತಾರ್, ಸಿದ್ದೀಕ್ ನೀರಾಜೆ, ಅಬ್ದುಲ್ ಖಾದರ್ ಹಾಜಿ ಕರಾಯ, ಝಕಾರಿಯಾ ಮುಸ್ಲಿಯಾರ್, ಕೆ ಎಚ್ ಲತೀಫ್ ಕರಾಯ, ಅಜಿಜ್ ಫೈಝಿ, ಅಶ್ರಫ್ ಹಾಜಿ ಪೆದಮಲೆ, ಉಪ್ಪಿನಂಗಡಿ ರೇಂಜ್ ಜಂ-ಇಯ್ಯತುಲ್ ಮಅಲ್ಲೀಮೀನ್ ಪದಾಧಿಕಾರಿಗಳು, ಉಪ್ಪಿನಂಗಡಿ ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಪದಾಧಿಕಾರಿಗಳು, ಉಪ್ಪಿನಂಗಡಿ ರೇಂಜ್ ಮದ್ರಸ ಅದ್ಯಾಪಕರು, ಎಸ್.ಕೆ.ಎಸ್.ಎಸ್ ಎಫ್ ಉಪ್ಪಿನಂಗಡಿ ವಲಯದ ಪದಾಧಿಕಾರಿಗಳು, ಮಾಲಿಕ್
ದಿನಾರ್ ಜುಮಾ ಮಸೀದಿ ಉಪ್ಪಿನಂಗಡಿ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತಿದ್ದರು. ಸಂಜೆ ಶರಫುದ್ದೀನ್ ತಂಗಳ್ ಕೂಟೇಲು ದರ್ಗಾ ಝಿಯಾರತ್ ಮಾಡಿ ಬೃಹತ್ ರ್ಯಾಲಿಯನ್ನು ಅಬ್ದುರ್ರಹ್ಮಾನ್ ಹಾಜಿ ಕೊಲ್ಲೆಜಾಲ್ ಧ್ವಜ ನೀಡುವ ಮೂಲಕ ಚಾಲನೆ ನೀಡಿದರು. ರ್ಯಾಲಿ ಮುಹಲೀಮರು, ವಲಯ ವಿಖಾಯ ಸದಸ್ಯರು, ದಫ್, ಸ್ಕೌಟ್, ಫ್ಲವರ್ ಶೋ ಆಕರ್ಷಣೆಯಾಗಿತ್ತು. ಮುಸ್ತಫಾ ಹಾಜಿ ಕೆಂಪಿ ಸ್ವಾಗತ ಮಾಡಿದರು. ಹಾರೀಸ್ ಕೌಸರಿ ಧನ್ಯವಾದ ಮಾಡಿದರು. ಪಿ ಎ ಝಕಾರಿಯಾ ಮುಸ್ಲಿಯಾರ್ ಮತ್ತು ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

Also Read  ಕಡಬ ಪುತ್ತೂರು ಉಭಯ ತಾಲೂಕಿನಲ್ಲಿ ಇಂದಿನ ಕೊರೊನಾ ಅಪ್ ಡೇಟ್

error: Content is protected !!
Scroll to Top